ಭಾರತ-ಕೀನ್ಯಾ ಮಹತ್ವದ ಒಪ್ಪಂದಗಳಿಗೆ ಸಹಿ

0
273

ವರದಿ: ಲೇಖಾ
ಭಾರತ ಮತ್ತು ಕೀನ್ಯಾ ನಡುವೆ ಮಹತ್ವದ 7 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
 
 
ಕೀನ್ಯಾದ ನೈರೋಬಿಗೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಕೀನ್ಯಾ ಅಧ್ಯಕ್ಷ ಉಹುರು ಕಿನ್ಯಟ್ಟ ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕೀನ್ಯಾ ಅಧ್ಯಕ್ಷ ಉಹುರು ಕೀನ್ಯಟ್ಟ ಅವರ ಸಮ್ಮುಖದಲ್ಲಿ ಭಾರತ ಮತ್ತು ಕೀನ್ಯಾ 7 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದವು.
 
 
ಈ ಸಂದರ್ಭದಲ್ಲಿ ಜಂಟಿಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೀನ್ಯಾ ಜತೆಗಿನ ಬಾಂಧವ್ಯ ಸುದೀರ್ಘವಾದದ್ದು. ರಕ್ಷಣೆ, ಸೈಬರ್ ಭದ್ರತೆ, ಮಾದಕ ದ್ರವ್ಯಗಳು ಹಾಗೂ ಮಾನವ ಕಳ್ಳಸಾಗಣೆ ಹಾವಳಿ ತಡೆ ನಿಟ್ಟಿನಲ್ಲಿ ರಕ್ಷಣಾ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಉಭಯದೇಶಗಳು ಪರಸ್ಪರ ಸಹಿಹಾಕಿವೆ ಎಂದರು.
 
 
ಭಾರತವು ಕೀನ್ಯಾದ ಅತ್ಯಂತ ದೊಡ್ಡ ವ್ಯಾಪಾರಿ ಪಾಲುದಾರನಾಗಿದ್ದು, ಎರಡನೇ ದೊಡ್ಡ ಹೂಡಿಕೆದಾರನೂ ಆಗಿದೆ ಎಂದ ಮೋದಿ, ಭಯೋತ್ಪಾಧನೆಯ ವಿರುದ್ಧ ಜಾಗತಿಕಮಟ್ಟದಲ್ಲಿ ಒಗ್ಗಟ್ಟಾಗಿ ಶ್ರಮಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
 
 
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 30 ಫೀಲ್ಡ್ ಅಂಬುಲೆನ್ಸ್​ಗಳನ್ನು ಕೀನ್ಯಾಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

LEAVE A REPLY

Please enter your comment!
Please enter your name here