ಭಾರತ್ ಬಂದ್ : ಎಲ್ಲಾ ಸೇವೆಗಳೂ ಸ್ಥಗಿತ

0
344

 * ಭಾರತ್ ಬಂದ್ ಹಲವೆಡೆ ಶಾಂತಿಯುತ ಬಂದ್  * ವಿವಿಧ ಸಂಘಟನೆಗಳ ಬೆಂಬಲ * ಜಾಥಾ – ಪಾದಯಾತ್ರೆ – ಪ್ರತಿಭಟನೆ * ಪೆಟ್ರೋಲ್ ಬಂಕ್, ವೈದ್ಯಕೀಯ ಸೇವೆ ಅಬಾಧಿತ 
ಕನಿಷ್ಠವೇತನ, ಪಿಂಚಣಿ ವ್ಯವಸ್ಥೆ, ರಸ್ತೆ ಸುರಕ್ಷತಾ ಮಸೂದೆ ವಾಪಸ್ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ 10 ಕಾರ್ಮಿಕ ಸಂಘಟನೆಗಳು ಕರೆನೀಡಿರುವ ಶುಕ್ರವಾರದ ಭಾರತ್ ಬಂದ್ ಗೆ ದೇಶದಲ್ಲಿ ಉತ್ತಮ ಬೆಂಬಲ ಕಂಡುಬಂದಿದ್ದು ಸಂಪೂರ್ಣ ಶಾಂತಿಯುತ ಬಂದ್ ನಡೆದಿದೆ. ಬಂದ್ ನಿಂದಾಗಿ ಹಲವು ಕಡೆಗಳಲ್ಲಿ ಅಕ್ಷರಶಃ ಜನಜೀವನ ಅಸ್ತವ್ಯಸ್ಥವಾಗಿದೆ. ಖಾಸಗೀ ವಾಹನ ಸಂಚಾರ ಸೇರಿದಂತೆ ದ್ವಿಚಕ್ರವಾಹನ ಓಡಾಟ ಬಹುತೇಕ ಎಲ್ಲೆಡೆ ಕಂಡುಬಂದಿದೆ. ಬಸ್, ಅಟೋಗಳೂ ಕೂಡಾ ಬಂದಿನಲ್ಲಿ ಪಾಲ್ಗೊಂಡಿದ್ದವು. ಈ ಕಾರಣಕ್ಕಾಗಿ ಜನರ ಓಡಾಟಕ್ಕೆ ತೀವ್ರ ತೊಡಕು ಉಂಟಾಗಿದೆ. ಕರ್ನಾಟಕದ ಹಲವೆಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಸರಕಾರಿ ಕಚೇರಿ ಸೇವೆಗಳು ಸ್ಥಗಿತವಾಗಿದ್ದವು. ಸೆ.2ರಂದು ನಡೆಯಬೇಕಾಗಿದ್ದ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಒಟ್ಟಾರೆಯಾಗಿ ಬಂದ್ ಒಂದರ್ಥದಲ್ಲಿ ಯಶಸ್ವಿಯಾಗಿದೆ.
ಬಂದ್ ವಿಫಲ : ಬ್ಯಾನರ್ಜಿ
ಪಶ್ಚಿಮ ಬಂಗಾಲದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂದ್ ಮೂಲಕ ಬಂಗಾಲವನ್ನು ಯಾರೂ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇಂದಿನ ಬಂದ್ ಕರೆ ವಿಫಲವಾಗಿದೆ ಎಂದು ಹೇಳಿದ್ದಾರೆ. ಈ ದೇಶವ್ಯಾಪಿ ಬಂದ್ ಕರೆಯನ್ನು ವಿಫಲಮಾಡೋಣ ಎಂದು ಹೇಳಿಕೆ ನೀಡಿದ್ದಾರೆ.
ಮೋದಿ ವಿರುದ್ಧ ಧ್ವನಿ
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ಸಿಪಿಐ ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚ್ಚೂರಿ ಧ್ವನಿಯೆತ್ತಿದ್ದಾರೆ. ಹೊಸ ಉದ್ಯೋಗ ಸೃಷ್ಠಿಯ ಭರವಸೆಯನ್ನು ಸರಕಾರ ನೀಡಿದೆ. ಆದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಭಾರೀ ಏರಿಕೆಯಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ವೇತನ, ಪಿಂಚಣಿವ್ಯವಸ್ಥೆಯ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಉತ್ತಮ ಬೆಂಬಲ ದೊರೆತಿದೆ – ತಪನ್ ಕುಮಾರ್bharath band_vaarte_news_portal
ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಎಲ್ಲಾ ರಾಜ್ಯಗಳಿಂದಲೂ ವ್ಯಕ್ತವಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಕುಮಾರ್ ಸೇನ್ ಹೇಳಿದ್ದಾರೆ. ಬಂದ್ ಪ್ರಯುಕ್ತ ಸುಮಾರು 15ಕೋಟಿ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here