'ಭಾರತೀಯ ಪ್ರವಾಸಿ ದಿವಸ್' ಗೆ ಚಾಲನೆ

0
277

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ‘ಭಾರತೀಯ ಪ್ರವಾಸಿ ದಿವಸ್’ ಗೆ ಚಾಲನೆ ನೀಡಲಾಗಿದೆ. ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸಮ್ಮೇಳನ ಆರಂಭವಾಗಿದೆ.
 
ಕೇಂದ್ರ ಯುವಜನಸೇವೆ, ಕ್ರೀಡಾ ಸಚಿವ ವಿಜಯ್ ಗೋಯಲ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಇಂದಿನಿಂದ 3 ದಿನ 14ನೇ ”ಭಾರತೀಯ ಪ್ರವಾಸಿ ದಿವಸ್’ ನಡೆಯಲಿದೆ. ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ.ಸಿಂಗ್, ರಾಜ್ಯದ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
 
 
ಸಮಾವೇಶದ ಅಂಗವಾಗಿ 14 ರಾಜ್ಯಗಳಿಂದ ವಸ್ತು ಪ್ರದರ್ಶನ ನಡೆಯಲಿದೆ. ಜಾಗತಿಕ ಮಟ್ಟದ 200 ಗಣ್ಯರು, 1901 ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ನಾನಾ ವಲಯದ ದಿಗ್ಗಜರು ಸೇರಿದಂತೆ 65 ದೇಶ ಹಾಗೂ 14 ರಾಜ್ಯಗಳ 6,346 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
 
 
 
ಎರಡನೇ ದಿನವಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೋರ್ಚಗಲ್‌ ಪ್ರಧಾನಿ ಡಾ.ಅಂತೋನಿಯೋ ಕೋಸ್ಟಾ ಮುಖ್ಯ ಅತಿಥಿಯಾಗಲಿದ್ದಾರೆ. ಮೂರನೇ ದಿನವಾದ ಸೋಮವಾರ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
 
 
 
ಸಮಾವೇಶದ ಅಂಗವಾಗಿ 14 ರಾಜ್ಯಗಳಿಂದ ವಸ್ತು ಪ್ರದರ್ಶನ ನಡೆಯಲಿದೆ. ಜಾಗತಿಕ ಮಟ್ಟದ 200 ಗಣ್ಯರು, 1901 ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ನಾನಾ ವಲಯದ ದಿಗ್ಗಜರು ಸೇರಿದಂತೆ 65 ದೇಶ ಹಾಗೂ 14 ರಾಜ್ಯಗಳ 6,346 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
 
 
 
ಅನಿವಾಸಿ ಕನ್ನಡಿಗರಿಗಾಗಿ ಕರ್ನಾಟಕದ ಎನ್ಆರ್‌ಐ ನೀತಿ
ಹದಿನಾಲ್ಕನೇ ಪ್ರವಾಸಿ ಭಾರತೀಯ ದಿವಸದ ಆತಿಥ್ಯ ವಹಿಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಗಟ್ಟಿಯಾಗಿಸುವ ಉದ್ದೇಶದಿಂದ ಸರಕಾರ ಅನಿವಾಸಿ ಕನ್ನಡಿಗರಿಗಾಗಿ ಎನ್ಆರ್‌ಐ ನೀತಿಯನ್ನು ಪ್ರಕಟಿಸಿದೆ. ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ, ನಾಡನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ಉದ್ದೇಶದಿಂದ ಕರ್ನಾಟಕ ಸರಕಾರ ಮತ್ತು ಅನಿವಾಸಿ ಭಾರತೀಯರ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಈ ಎನ್ಆರ್‌ಐ ನೀತಿಗಳ ರೆಡ್ ಕಾರ್ಪೆಟ್ ಅನ್ನು ಹಾಕಲಾಗಿದೆ.

LEAVE A REPLY

Please enter your comment!
Please enter your name here