ಭಾರತೀಯ ಚಲನಚಿತ್ರಗಳನ್ನು ಜಾಗತಿಕವಾಗಿ ಪ್ರೀಮಿಯರ್ ಮಾಡಲಿದೆ ಅಮೆಜಾನ್ ಪ್ರೈಂ ವೀಡಿಯೋ!

0
1450

ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಶೂಜಿತ್ ಸಿರ್ಕಾರ್ ಅವರ ಗುಲಾಬೊ ಸಿತಾಬೊ; ವಿದ್ಯಾಬಾಲನ್ ನಾಯಕಿಯಾಗಿ ನಟಿಸಿರುವ ಶಕುಂತಲಾ ದೇವಿ, ಆರ್. ಜ್ಯೋತಿಕಾ ನಟನೆಯ ಪೊನ್‌ಮಗಳ್ ವಂದಾಳ್‌ನಂತಹ ಶೀರ್ಷಿಕೆಗಳೊಂದಿಗೆ ೫ ಭಾರತೀಯ ಭಾಷೆಗಳಲ್ಲಿ ಅನೇಕ ಚಲನಚಿತ್ರಗಳನ್ನು ಅಮೆಜಾನ್ ಪ್ರೈಂ ವೀಡಿಯೋ
ಮೇ ಹಾಗು ಆಗಸ್ಟ್ ತಿಂಗಳ ನಡುವೆ ಪ್ರೀಮಿಯರ್ ಮಾಡಲಿದೆ.

ಭಾರತ, ಮೇ ೧೫, ೨೦೨೦ –ಅಮಿತಾಭ್ ಬಚ್ಚನ್(ಬ್ಲಾಕ್‌ ಪೀಕು) ಮತ್ತು ಆಯುಷ್ಮಾನ್ ಖುರಾನಾ(ಶುಭ್‌ಮಂಗಲ್ ಜ್ಯಾದಾ ಸಾವ್‌ಧಾನ್, ಅಂಧಾಧುನ್) ನಟನೆಯ ಶೂಜಿತ್ ಸಿರ್ಕಾರ್ ಅವರ ಗುಲಾಬೋ ಸಿತಾಬೊದ ಮುಂಬರುತ್ತಿರುವ ಪ್ರೀಮಿಯರ್‌ನ ಘೋಷಣೆಯ ಅನುಸರಣೆಯಲ್ಲಿ, ಅಮೆಜಾನ್ ಪ್ರೈಂ ವೀಡಿಯೋ ಇಂದು ಸ್ಟ್ರೀಮಿಂಗ್ ಸೇವೆಯಲ್ಲಿ ನೇರವಾಗಿ ಪ್ರೀಮಿಯರ್ ಮಾಡಲಾಗುವ ಇನ್ನೂ ಆರು ಅತ್ಯಂತ ನಿರೀಕ್ಷಿತ ಭಾರತೀಯ ಚಲನಚಿತ್ರಗಳ ಪ್ರೀಮಿಯರ್‌ಅನ್ನು ಘೋಷಿಸಿತು. ಐದು ಭಾರತೀಯ ಭಾಷೆಗಳಾದ್ಯಂತ ಇರುವ ಸೇವೆಗೆ ನೇರವಾದ ಲೈನ್ ಅಪ್ ಅಂಶಗಳಿರುವ ಈ ಹೆಚ್ಚುವರಿ ಬಿಡುಗಡೆಗಳು, ಅನು ಮೆನನ್ ಅವರ ವಿದ್ಯಾಬಾಲನ್(ಡರ್ಟಿ ಪಿಕ್ಚರ್, ಕಹಾನಿ) ನಟಿಸಿರುವ ಶಕುಂತಲಾ ದೇವಿ; ಜ್ಯೋತಿಕಾ ನಟನೆಯ ಪೊನ್‌ಮಗಳ್ ವಂದಾಳ್(ಚಂದ್ರಮುಖಿ) ಚಿತ್ರಗಳ ಜೊತೆಗೆ, ಕೀರ್ತಿ ಸುರೇಶ್ (ಮಹಾನಟಿ) ನಟನೆಯ ಪೆಂಗ್ವಿನ್(ತಮಿಳು ಹಾಗು ತೆಲುಗು), ಸೂಫಿಯುಮ್ ಸುಜಾತೆಯುಮ್(ಮಲಯಾಳಮ್), ಲಾ (ಕನ್ನಡ) ಮತ್ತು ಫ್ರೆಂಚ್ ಬಿರಿಯಾನಿ(ಕನ್ನಡ)ಮುಂತಾದವನ್ನು ಒಳಗೊಂಡಿದೆ. ಈ ಚಲನಚಿತ್ರಗಳು ವಿಶೇಷವಾಗಿ ಅಮೆಜಾನ್ ಪ್ರೈಂ ವೀಡಿಯೋದಲ್ಲಿ ಮಾತ್ರ ಮುಂದಿನ ಮೂರು ತಿಂಗಳವರೆಗೆ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ವಿಶ್ವವ್ಯಾಪಿಯಾಗಿ ೨೦೦ ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಲಭ್ಯವಾಗಲಿವೆ.

“ಭಾರತೀಯ ಪ್ರೇಕ್ಷಕರು ಈ ೭ ಅತ್ಯಂತ ನಿರೀಕ್ಷಿತ ಚಲನಚಿತ್ರಗಳ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದು ನಮ್ಮ ಗ್ರಾಹಕರಿಗಾಗಿ ಈ ಚಲನಚಿತ್ರಗಳನ್ನು ಈಗ ಅಮೆಜಾನ್ ಪ್ರೈಂ ವೀಡಿಯೋ ಪ್ರೀಮಿಯರ್ ಮಾಡುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಗ್ರಾಹಕರು ಈಗ ತಮ್ಮ ಮನೆಯ ಆರಾಮ ಮತ್ತು ಸುರಕ್ಷತೆಯೊಳಗೆ ಹಾಗು ತಮ್ಮ ಆಯ್ಕೆಯ ಸ್ಕ್ರೀನ್ ಮೇಲೆ ಈ ಸಿನಿಮಾಗಳನ್ನು ನೋಡಿ ಆನಂದಿಸಬಹುದು ಎಂದು ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ನಿರ್ದೇಶಕ ಹಾಗು ಕಂಟ್ರಿ ಜನರಲ್ ಮ್ಯಾನೇಜರ್, ಗೌರವ್ ಗಾಂಧಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here