ಭಾರತೀಯರು ಸ್ಥಳಾಂತರ

0
220

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ದಕ್ಷಿಣ ಸುಡಾನ್ ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಶಿಫ್ಟ್ ಮಾಡಲಾಗಿದೆ. ಎರಡು ವಿಮಾನಗಳ ಮೂಲಕ 450 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ.
 
 
32 ಕನ್ನಡಿಗರು ಸೇರಿದಂತೆ 450 ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ. ಭಾರತೀಯರು ದಕ್ಷಿಣ ಸುಡಾನ್ ರಾಜಧಾನಿ ತೂಬಾದಲ್ಲಿ ಸಿಲುಕಿದ್ದರು.
 
ಭಾರತೀಯ ವಾಯುಪಡೆಯಿಂದ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ. 19 ಕನ್ನಡಿಗರು ಕೇರಳದ ತಿರುವನಂತಪುರಕ್ಕೆ ಬಂದಿಳಿದಿದ್ದಾರೆ. ಇನ್ನುಳಿದ 13 ಕನ್ನಡಿಗರು ಬೆಳಗ್ಗೆ 10.30ಕ್ಕೆ ದೆಹಲಿಗೆ ಆಗಲಿಸಲಿದ್ದಾರೆ.
 
 
ದಕ್ಷಿಣ ಸೂಡಾನ್ ನಲ್ಲಿ ಜುಲೈ 7ರಿಂದ ಸೇನೆ ಮತ್ತು ಬಂಡುಕೋರರ ಮಧ್ಯೆ ಘರ್ಷನೆ ಹಿನ್ನೆಲೆಯಲ್ಲಿ ಅಶಾಂತಿ ಉಂಟಾದ ಹಿನ್ನೆಲೆಯಲ್ಲಿ ಸೂಡಾನ್ ನಲ್ಲಿರುವ ಭಾರತೀಯರನ್ನು ಶಿಫ್ಟ್ ಮಾಡಲಾಗಿದೆ.
 
 
ಆಫ್ರಿಕಾದ ಯುದ್ಧಗ್ರಸ್ಥ ದಕ್ಷಿಣ ಸೂಡಾನ್​ ನಲ್ಲಿ ಸಿಲುಕಿರುವ ನೂರಾರು ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಗುರವಾರದಿಂದ ಕಾರ್ಯಾಚರಣೆ ಆರಂಭಿಸಿದ್ದು, ಸಚಿವ ವಿ.ಕೆ. ಸಿಂಗ್ ನೇತೃತ್ವದಲ್ಲಿ 2 ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ವಿಮಾನಗಳು ಸೂಡಾನ್​ ಗೆ ಪ್ರಯಾಣ ಬೆಳೆಸಿತ್ತು.
 
 
ನವದೆಹಲಿಯಿಂದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಮರ್ ಸಿನ್ಹಾ ನೇತೃತ್ವದಲ್ಲಿ ಭಾರತೀಯ ಅಧಿಕಾರಿಗಳ ತಂಡ ದಕ್ಷಿಣ ಸೂಡಾನ್​ನ ಜುಬಾಗೆ ಪ್ರಯಾಣ ಬೆಳೆಸಿತ್ತು.

LEAVE A REPLY

Please enter your comment!
Please enter your name here