ಭಾರತದ ಹಾಕಿ ತಂಡವನ್ನು ಶ್ಲಾಘಿಸಿದ ಪ್ರಧಾನಿ

0
499

ವರದಿ: ಚಂದ್ರಲೇಖ ಭಟ್
ಚಾಂಪಿಯನ್ಸ್‌ ಟ್ರೋಫಿ ಹಾಕಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ ಗೇರಿದ ಸಾಧನೆ ಮಾಡದ್ದ ಭಾರತದ ಸ್ಪೂರ್ತಿದಾಯಕ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
 
 
ಭಾರತ, ಫೈನಲ್‌ ಪಂದ್ಯದಲ್ಲಿ , ಅದ್ಭುತ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯಾದ ಎದುರು ಉತ್ತಮ ಹೋರಾಟ ಪ್ರದರ್ಶಿಸಿ 1-3 ಗೋಲುಗಳ ಸೋಲನ್ನು ಕಂಡಿತ್ತು. ’ಭಾರತ ತಂಡದ ಈ ಅದ್ಭುತ ನಿರ್ವಹಣೆ ನಮಗೆಲ್ಲ ಹೆಮ್ಮೆ ತಂದಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.
 
 
 
ಭಾರತಕ್ಕೆ ಈ ಫೈನಲ್‌ ಪಂದ್ಯವನ್ನು ಗೆಲ್ಲುವ ನಿರ್ಣಾಯಕ ಶೂಟೌಟ್‌ ಅವಕಾಶ ಪ್ರಾಪ್ತವಾಗಿತ್ತು. ಆದರೆ ಮೂರೂ ಯತ್ನಗಳಲ್ಲಿ ಅದನ್ನು ಕಳೆದುಕೊಂಡ ಭಾರತ ಅಂತಿಮವಾಗಿ 1-3 ಸೋಲಿನೊಂದಿಗೆ ಬೆಳ್ಳಿಯ ಪದಕಕ್ಕೆ ತೃಪ್ತಿ ಪಡೆಯಬೇಕಾಯಿತು. ಆದರೆ ಪಂದ್ಯದ ಉದ್ದಕ್ಕೂ ಭಾರತೀಯ ಆಟಗಾರರು ನೀಡಿದ ಹೋರಾಟ ರೋಮಾಂಚಕವಾಗಿತ್ತು.
 
 
 
ಚಾಂಪಿಯನ್ಸ್‌ ಟ್ರೋಫಿ ಹಾಕಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ಗೇರಿ ಇತಿಹಾಸ ನಿರ್ಮಿಸಿದ ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿದೆ. 1978ರಲ್ಲಿ 6 ರಾಷ್ಟ್ರಗಳ ಈ ಕೂಟ ಆರಂಭವಾದ ಅನಂತರ ಭಾರತ ಇದೇ ಮೊದಲ ಬಾರಿಗೆ ಫೈನಲ್‌ಗೇರುವ ಅಪೂರ್ವ ಅವಕಾಶ ಪಡೆದಿತ್ತು. ಇದಕ್ಕೂ ಹಿಂದೆ 1982ರಲ್ಲಿ ಆಮ್‌ಸ್ಟರ್‌ಡಾಮ್‌ನಲ್ಲಿ ಭಾರತ ಕಂಚಿನ ಪದಕ ಗಳಿಸಿತ್ತು.

LEAVE A REPLY

Please enter your comment!
Please enter your name here