ಭಾರತದ ವಿರುದ್ಧ ಜಲಸಮರ ಸಾರುತ್ತೇನೆ: ಹಫೀಜ್ ಸಯೀದ್

0
292

ವರದಿ:ಲೇಖಾ
ಭಾರತದ ವಿರುದ್ಧ ಜಲಸಮರ ಸಾರುವುದಾಗಿ ಜಮಾತ್ ಉದ್-ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಘೋಷಿಸಿದ್ದಾನೆ.
 
 
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ​ಕೋಟ್​ನಲ್ಲಿ ನಡೆದ ಜೆಯುಡಿ ಸಂಘಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಯೀದ್, ಭಾರತದಲ್ಲಿ ಉಗಮವಾಗಿ ಪಾಕ್ ಸೇರುವ ನದಿಗಳನ್ನು ಮತ್ತು ಅವುಗಳ ಹುಟ್ಟು ಸ್ಥಾನವನ್ನು ಭಾರತದಿಂದ ಬೇರ್ಪಡಿಸುವುದಾಗಿ ಘೊಷಿಸಿದ್ದಾನೆ.
 
 
 
ಪಾಕಿಸ್ತಾನದ ನದಿಗಳನ್ನು ಭಾರತದಿಂದ ಮುಕ್ತಗೊಳಿಸಲು ‘ಜಿಹಾದ್’ ಆರಂಭಿಸಲಾಗುವುದು ಎಂದಿರುವ ಆತ, ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಗೊಳಿಸಲು ಸ್ವತಂತ್ರ ಅಭಿಯಾನ ಪ್ರಾರಂಭಿಸುವುದಾಗಿಯೂ ಹೇಳಿದ್ದಾನೆ.
 
 
ಲಷ್ಕರ್ ಉಗ್ರ ಸಂಘಟನೆಯ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದು, ಮುಂಬೈ ಮೇಲೆ ನಡೆಸಿದ ದಾಳಿ ಮಾದರಿಯಲ್ಲಿ ಇನ್ನೂ ಹೆಚ್ಚಿನ ಆತಂಕವನ್ನು ಭಾರತದಲ್ಲಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.

LEAVE A REPLY

Please enter your comment!
Please enter your name here