ಭಾರತದ ರಾಷ್ಟ್ರಪತಿ ಸ್ಥಾನದ ಬಗ್ಗೆ ತಿಳಿಯಿರಿ

0
2954

ಜ್ಞಾನ ವಾರ್ತೆ:
ಭಾರತದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತ ಗಣರಾಜ್ಯದ  ಪ್ರಥಮ ಪ್ರಜೆ, ಮತ್ತು ಭಾರತೀಯ ಸೈನ್ಯದ ದಂಡನಾಯಕರೂ ಆಗಿದ್ದಾರೆ.
 
president-india
ಸಾಂವಿಧಾನಿಕ ಪಾತ್ರದ ಬಗ್ಗೆ
ಭಾರತೀಯ ಸಂವಿಧಾನದ 52ನೇ ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು:

  • ಭಾರತೀಯಪ್ರಜೆಯಾಗಿರಬೇಕು
  • ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ
  • ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು

ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ 74 ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ 53 ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ‍್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು.
ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ  ಮಂತ್ರಿಗಳ  ಪ್ರಮಾಣ ವಚನ  ಕಾರ್ಯಕ್ರಮವನ್ನು ನಡೆಸಿಕೊಡುವುದು.
ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ:

  • ಸಂಸತ್ತಿನಎರಡೂ ಸಭೆಗಳ ಸದಸ್ಯರು
  • ಪ್ರತಿ ರಾಜ್ಯದವಿಧಾನಸಭೆಯ  ಸದಸ್ಯರು

ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ ಜನಸಂಖ್ಯೆ, ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ.
ಸಂವಿಧಾನದ 61ನೇಯ ಪರಿಚ್ಛೇದದ೦ತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನದಿ೦ದ ತೆಗೆಯುವ ಅಧಿಕಾರ ಸಂಸತ್ತಿಗುಂಟು.
 
ಮುಂದುವರಿಯುತ್ತದೆ…

LEAVE A REPLY

Please enter your comment!
Please enter your name here