ಭಾರತದ ಮಾರ್ಗ ಅನುಸರಿಸಿ

0
275

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ನೆರೆರಾಷ್ಟ್ರಗಳ ಸಮಸ್ಯೆ ಪರಿಹಾರಕ್ಕೆ ಭಾರತದ ಮಾರ್ಗ ಅನುಸರಿಸಿ ಎಂದು ಚೀನಾಕ್ಕೆ ಅಮೆರಿಕ ಸಲಹೆ ನೀಡಿದೆ. ಸಾಗರ ಸಂಬಂಧಿ ವ್ಯಾಜ್ಯಗಳ ಪರಿಹಾರಕ್ಕೆ ಭಾರತ ಮಾರ್ಗ ಸೂಕ್ತವಾಗಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
 
 
ಇದರಿಂದ ಭಾರತದಂತೆಯೇ ನೆರೆರಾಷ್ಟ್ರಗಳೊಂದಿಗೆ ಸಾಗರ ಸಂಬಂಧಿ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಿ ಎಂದು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಧಿಕರಣದ ಆದೇಶಕ್ಕೂ ಮುನ್ನ ಚೀನಾಕ್ಕೆ ಅಮೆರಿಕ ಸಲಹೆ ನೀಡಿದೆ. ಮುಂದಿನ ವಾರ ಹೇಗ್ ನಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಧಿಕರಣ ಈ ಬಗ್ಗೆ ಆದೇಶ ನೀಡಲಿದೆ.
 
 
ಚೀನಾ ಸಾಧಿಸುತ್ತಿರುವ ಅಧಿಕಾರ ಸಿಂಧುತ್ವ ಪ್ರಶ್ನಿಸಿ ಚೀನಾ ವಿರುದ್ಧ ಫಿಲಿಪ್ಪೀನ್ಸ್ ನ್ಯಾಯಾಧಿಕರಣದ ಮೊರೆಹೋಗಿತ್ತು. ದಕ್ಷಿಣ ಚೀನಾ ಸಮುದ್ರದ ದ್ವೀಪಗಳ ಮೇಲೆ ಚೀನಾ ರಾಷ್ಟ್ರ ಸಿಂಧುತ್ವ ಸಾಧಿಸಿತ್ತು.

LEAVE A REPLY

Please enter your comment!
Please enter your name here