ಪ್ರಮುಖ ಸುದ್ದಿವಾರ್ತೆವಿದೇಶ

ಭಾರತದ ಕಂಪನಿಗಳ ಮೇಲೆ ಹೊಡೆತ ಬೀಳಲಿದೆ ಟ್ರಂಪ್ ಮಸೂದೆ

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ವಲಸಿಗರ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿದೇಶೀ ಉದ್ಯೋಗಿಗಳ ಮೇಲೆ ಕಣ್ಣು ಹಾಕಿದ್ದಾರೆ. ವಿದೇಶಿ ಉದ್ಯೋಗಿಗಳಿಗೆ ನಿರ್ಬಂಧ ಹೇರಲು ಹೊಸ ಮಸೂದೆ ರೂಪಿಸಿದ್ದಾರೆ ಅಮೆರಿಕಾದಲ್ಲಿರುವವರಿಗೆ ಉದ್ಯೋಗ ನೀಡಲು ಟ್ರಂಪ್ ಸಿದ್ಧತೆ ನಡೆಸಿದ್ದಾರೆ.
 
 
ವಿದೇಶಿ ಉದ್ಯೋಗಿಗಳ ಮೇಲೆ ವಕ್ರದೃಷ್ಠಿ ಬೀರಿದ ಟ್ರಂಪ್ ಅಮೆರಿಕಾ ವೀಸಾ ಪಡೆಯಲು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದಾರೆ. ಅಮೆರಿಕ ಸಂಸತ್ ನಲ್ಲಿ ಎಚ್ 1 ಬಿ ವೀಸಾ ತಿದ್ದುಪಡಿಗೆ ಹೊಸ ಬಿಲ್ ಮಂಡನೆಯಾಗಿದೆ.
 
 
ಎಚ್ 1 ಬಿ ವೀಸಾ ಪಡೆಯಲು ಕನಿಷ್ಠ 1 ಲಕ್ಷದ 30 ಸಾವಿರ ಅಮೆರಿಕನ್ ಡಾಲರ್ ಸಂಬಳ ಇರಬೇಕು. ಇದರಿಂದ ಕಡಿಮೆ ವೇತನದ ಐಟಿ ಉದ್ಯೋಗಿಗಳಿಗೆ ಕೊಕ್ಕೆ ಬೀಳಲಿದೆ.
 
 
 
ಎಚ್ 1 ಬಿ ವೀಸಾದ ಹೊಸ ನೀತಿಯಿಂದಾಗಿ ಭಾರತದ ಐಟಿ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ. ಭಾರತದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಕಂಪನಿಗಳ ಮೇಲೆ ಹೊಡೆತ ಬೀಳಲಿದೆ.
 
 
ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಿತ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯಲ್ಲಿ ಐಟಿ ವಲಯದ ಷೇರುಗಳು ತಲ್ಲಣಿಸಿದ್ದು, ಬರೊಬ್ಬರಿ ಶೇ.9ರಷ್ಟು ಮೌಲ್ಯ ಕುಸಿದಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here