ಪ್ರಮುಖ ಸುದ್ದಿವಾರ್ತೆವಿದೇಶ

ಭಾರತದ ಅರ್ಥಿಕ ಅಭಿವೃದ್ಧಿಗೆ ಪ್ರಶಂಸೆ

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಆರ್ಥಿಕ ಅಭಿವೃದ್ಧಿಗೆ ಅಮೆರಿಕದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಒಬಾಮಾ ನೀತಿ ಬಗ್ಗೆ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.
 
ಹಿಲರಿ ಕ್ಲಿಂಟನ್, ಟ್ರಿಂಪ್ ನಡುವೆ ನಡೆದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ 3ನೇ ಹಾಗೂ ಅಂತಿಮ ಚರ್ಚೆ ಸಂದರ್ಭದಲ್ಲಿ ಪ್ರಶಂಸಿಸಿದ್ದಾರೆ. ಪ್ರಮುಖ ಆರು ವಿಷಯಗಳ ಬಗ್ಗೆ ಇವರಿಬ್ಬರ ಮಧ್ಯೆ ಚರ್ಚೆ ನಡೆದಿದೆ.
 
 
ಅಮೆರಿಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಿದೆ. ಅಮೆರಿಕ ದೇಶದ ಗಡಿಪ್ರದೇಶ ಮತ್ತಷ್ಟು ಬಲಪಡಿಸಬೇಕಿದೆ. ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಮೆರಿದ ರಕ್ಷಣೆಗಾಗಿ ನನ್ನನ್ನು ಬೆಂಬಲಿಸಿ ಎಂದು ಟ್ರಂಪ್ ಕೇಳಿಕೊಂಡಿದ್ದಾರೆ.
 
 
ಈ ವೇಳೆ ಟ್ರಂಪ್ ಭಾರತದ ಆರ್ಥಿಕ ಅಭಿವೃದ್ಧಿ ಬಗ್ಗೆ ಹೊಗಳಿದ್ದಾರೆ. ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.8ರಷ್ಟಿದೆ. ಆದರೆ ಅಮೆರಿಕದ ಆರ್ಥಿಕ ಅಭಿವೃದ್ಧಿ ದರ ಶೇ.1ರಷ್ಟಿದೆ ಎಂದು ಅಮೆರಿಕದ ಆರ್ಥಿಕ ನೀತಿಯನ್ನು ಟೀಕಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here