ಭಾರತದಲ್ಲಿರುವ ಹುಲಿಗಳ ಸಂಖ್ಯೆ ನಿಮಗೆ ಗೊತ್ತೇ…?

0
1069

ಇದೊಂದು ಇಂಟ್ರಸ್ಟಿಂಗ್‌ ಸ್ಟೋರಿ…ನೀವು ಓದಲೇ ಬೇಕು…!

ನವದೆಹಲಿ: ಹೌದು ಈ ದೇಶದಲ್ಲಿರುವ ಹುಲಿಗಳ ಸಂಖ್ಯೆ ನಿಮಗೆ ಗೊತ್ತೇ…? ಹುಲಿಗಳ ರಕ್ಷಣೆಗೆ ಹೇಗಿ ಸಿದ್ಧತೆಗಳಿವೆ ಎಂಬುದು ನಿಮಗೆ ಗೊತ್ತೇ…? ಈ ಬಗ್ಗೆ ಪ್ರಧಾನಿ ಹೇಳಿದ್ದೇನೆಂಬುದಾದರೂ ಗೊತ್ತೇ…?ಹಾಗಾದ್ರೆ ಈ ಸ್ಟೋರಿನ ನೋಡಿ.
ಭಾರತದಲ್ಲಿ ಸುಮಾರು 3000ಹುಲಿಗಳಿವೆ. ತನ್ಮೂಲಕ ಭಾರತ ಹುಲಿಗಳ ಅತಿದೊಡ್ಡ ಮತ್ತು ಭದ್ರ ಆವಾಸ ಸ್ಥಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹುಲಿ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ವ್ಯಾಘ್ರ ದಿನದ ಅಂಗವಾಗಿ ಅಖಿಲ ಭಾರತ ಹುಲಿ ಗಣತಿ ಅಂದಾಜು 2018 ಬಿಡುಗಡೆ ಮಾಡಿ ಮಾತನಾಡಿದರು. ಒಂಭತ್ತು ವರುಷಗಳ ಹಿಂದೆ ಸೇಂಟ್‌ ಪೀಟರ್ಸ್‌ ಬರ್ಗ ನಲ್ಲಿ ಹುಲಿಗಳ ಸಂಖ್ಯೆಯನ್ನು 2022ರ ವೇಳೆಗೆ ದ್ವಿಗುಣಗೊಳಿಸಲು ನಿರ್ಧರಿಸಲಾಗಿತ್ತು. ಈ ಗುರಿಯನ್ನು ನಾಲ್ಕು ವರುಷಗಳ ಮೊದಲೇ ಸಾಧಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹುಲಿ ಸಂರಕ್ಷಣೆ ಪ್ರಯತ್ನವನ್ನು ವಿಸ್ತರಿಸಬೇಕು ಎಂದು ಮತ್ತೊಮ್ಮೆ ಹೇಳಿದ ಪ್ರಧಾನಿಯವರು ಅಭಿವೃದ್ಧಿ ಮತ್ತು ಪರಿಸರದೊಂದಿಗೆ ನೇರ ನಂಟಿದೆ. ಆರ್ಥಿಕ ನೀತಿಗಳಲ್ಲಿ ಇಂತಹ ಪರಿಸರ ಸಂರಕ್ಷಣೆಗೂ ಅವಕಾಶ ನೀಡುವಂತೆ ಮಾರ್ಪಾಡು ಮಾಡಬೇಕಾಗಿದೆ ಎಂದವರು ಸಲಹೆ ನೀಡಿದರು.

LEAVE A REPLY

Please enter your comment!
Please enter your name here