ಸ್ಪೋರ್ಟ್ಸ್ ಪ್ರತಿನಿಧಿ ವರದಿ
update news: ಭಾರತ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ. ಭಾರತಕ್ಕೆ ಆಸರೆಯಾದ ಕನ್ನಡಿಗ ಕೆ.ಎಲ್. ರಾಹುಲ್ 88 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯುತ್ತಿದೆ. ಮೊದಲು ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಸಂಕಷ್ಟದಲ್ಲಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಫಲವಾಗಿದೆ. ಕೇವಲ 12 ರನ್ ಗೆ ಕೊಹ್ಲಿ ಔಟಾಗಿದ್ದಾರೆ.
ಇನ್ನು ಮುಕುಂದ್ ಡಕೌಟ್, ಪೂಜಾರ 17 ರನ್ ಗಳಿಸಿ ಔಟ್ ಆಗಿದ್ದಾರೆ. ಮೊದಲು ನೆಲಕಚ್ಚಿದ ಟೀಂ ಇಂಡಿಯಾಕ್ಕೆ ನಂತರ ಬಂದಿ ಕನ್ನಡಿಗ ರಾಹುಲ್ ಆಸರೆಯಾಗಿದ್ದಾರೆ. ಇದರಿಂದ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಕನ್ನಡಿಗ ರಾಹುಲ್ ಭರ್ಜರಿ ಶತಕ ಬಾರಿಸುವುದರ ಮೂಲ ತಂಡವನ್ನು ಮೇಲೆತ್ತಿದ್ದಾರೆ. ಔಟಗಾದೆ ಕನ್ನಡಿಗ ರಾಹುಲ್ 79 ರನ್ ಮತ್ತು ಮತ್ತೊರ್ವ ಕನ್ನಡಿಗ ಕರುಣ್ ನಾಯರ್ 9 ರನ್ ಗಳಿಸಿದ್ದಾರೆ.