ಭಾರತಕ್ಕೆ ಮತ್ತೊಮ್ಮೆ ಬೆಂಬಲ ನೀಡಿದ ಅಮೆರಿಕ

0
273

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೀಮಿತ ದಾಳಿ ನಡೆಸಿರುವ ಭಾರತದ ಕ್ರಮಕ್ಕೆ ಈಗಾಗಲೇ ಬೆಂಬಲಿಸಿ ಅಮೆರಿಕ ಮತ್ತೊಮ್ಮೆ ಬೆಂಬಲ ಘೋಷಿಸಿದೆ. ಅಲ್ಲದೆ ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ ಎಂದು ಅಮೆರಿಕಾ ಅಭಿಪ್ರಾಯ ಪಟ್ಟಿದೆ.
 
ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಆಫ್ಘಾನಿಸ್ತಾನ ಗಡಿ ಹಾಗೂ ಗಲಭೆಯಿಂದ ಕೂಡಿರುವ ಕಾಶ್ಮೀರ ಕುರಿತಂತೆ ನಿರ್ಣಯ ಕೈಗೊಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ತಳ್ಳಿ ಹಾಕಿರುವ ವೈಟ್ ಹೌಸ್, “ಯಾವುದೇ ದೇಶಕ್ಕೆ ತನ್ನ ಸ್ವರಕ್ಷಣೆಯ ಹಕ್ಕಿರುತ್ತದೆ. ಉರಿ ಉಗ್ರದಾಳಿ ಗಡಿಯಾಚೆಗಿನ ಭಯೋತ್ಪಾದನೆ ಎಂಬುದು ಸ್ಪಷ್ಟವಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಭಾರತ ನಡೆಸಿರುವ ದಾಳಿಯಲ್ಲಿ ಯಾವುದೇ ತಪ್ಪಿಲ್ಲ” ಎಂದು ಹೇಳಿದೆ.

LEAVE A REPLY

Please enter your comment!
Please enter your name here