ಭಾರತಕ್ಕೆ ಮತ್ತೊಂದು ರೋಚಕ ಜಯದೊಂದಿದೆ ಸರಣಿ ಕೈವಶ

0
547

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಕಟಕ್ ಬಾರಬತಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ ಮತ್ತೊಂದು ರೋಚಕ ಗೆಲುವು ದಾಖಲಿಸಿದೆ.
 
 
 
ಇಂಗ್ಲೆಂಡ್’ನ್ನು 15 ರನ್ ಗಳಿಂದ ಸೋಲಿಸುವಂತೆ ಮಾಡಿದ ಟೀಂ ಇಂಡಿಯಾ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಯುವರಾಜ್ ಸಿಂಗ್(150) ಹಾಗೂ ಮಹೇಂದ್ರ ಸಿಂಗ್ ಧೋನಿ(134) ಶತಕಗಳ ಜೊತೆಯಾಟದಿಂದ 381 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
 
 
 
ಗುರಿ ಬೆನ್ನಟ್ಟಿದ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 366 ಗಳಿಸಿ ಕಠಿಣ ಹೋರಾಟ ಮಾಡಿ ಕೊನೆಯಲ್ಲಿ ಸೋಲೊಪ್ಪಿಕೊಂಡಿತು. ಈ ಮೂಲಕ ವಿರಾಟ್ ಕೊಹ್ಲಿ ನಾಯಕನಾದಮೇಲೆ ಭಾರತ ಸತತ 2 ಏಕದಿನ ಪಂದ್ಯಗಳನ್ನು ಗೆದ್ದಂತಾಗಿದೆ.
 
 
 
ಸ್ಕೋರ್ ವಿವರ:
ಭಾರತ 6 ವಿಕೆಟ್ ನಷ್ಟಕ್ಕೆ 381 ರನ್ ​ಗಳಿಸಿತ್ತು. ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 366 ರನ್ ಗಳಿಸಿತ್ತು.
ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ 350ಕ್ಕಿಂತ ಹೆಚ್ಚು ಸ್ಕೋರ್ ಮಾಡಿದ ತಂಡಗಳ ಪೈಕಿ ಭಾರತ ಈಗ ಅಗ್ರಸ್ಥಾನಕ್ಕೇರಿ ದಾಖಲೆ ಬರೆದಿದೆ.

LEAVE A REPLY

Please enter your comment!
Please enter your name here