ಭಾರತಕ್ಕೆ ಬಂದಿಳಿದ ದಢೂತಿ ಮಹಿಳೆ

0
367

ರಾಷ್ಟ್ರೀಯ ಪ್ರತಿನಿಧಿ ವರದಿ
ವಿಶ್ವದಲ್ಲೇ ಅತಿ ತೂಕದ ಮಹಿಳೆ ಎಂದು ಗುರುತಿಸಿಕೊಂಡಿರುವ 500 ಕೆಜಿ ತೂಕವಿರುವ ಈಜಿಪ್ಟ್ ಮಹಿಳೆ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದಾರೆ.
 
 
 
ದಢೂತಿ ಮಹಿಳೆ ಎಮಾನ್ ಅಹ್ಮದ್ ಅಬ್ದ್ ಅಲ್ ಅಟಿ, ಈಜಿಪ್ಟ್ ಏರ್ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದು, ಮುಂಬೈ ನ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಮಾನ್ ಅಹ್ಮದ್ ಅಲ್ ಅಟಿ ಪ್ರಯಾಣ ಮಾಡಿದ್ದಾರೆ.
 
 
ಎಮಾನ್ ಅಹ್ಮದ್ ಅಲ್ ಅಟಿ ಅವರೊಂದಿಗೆ ಸಹೋದರಿ ಸಹ ಭಾರತಕ್ಕೆ ಆಗಮಿಸಿದ್ದು, ವಿಶ್ವದ ದಢೂತಿ ಮಹಿಳೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಕ್ರೇನ್ ಹಾಗೂ ಟ್ರಕ್ ಸಹಾಯದ ಮೂಲಕ ಎಮಾನ್ ಅಹ್ಮದ್ ಅಲ್ ಅಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಮಾನ್ ಅಹ್ಮದ್ ಅಬ್ದ್ ಅವರ ತೂಕಕ್ಕೆ ಸರಿ ಹೊಂದುವಂತಹ ವಿಶೇಷ ಹಾಸಿಗೆ ಸೇರಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here