ಭಾಗವತ ಸಪ್ತಾಹ ಸಂಪನ್ನ

0
378

 
ವರದಿ-ಚಿತ್ರ: ಗೋವಿಂದ ಬಿ ಜಿ
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಕಳೆದ ಒಂದುವಾರದಿಂದ ಆಚರಿಸಲಾದ ಭಾಗವತಹ ಸಪ್ತಾಹ ಸಮಾರಂಭವು ಸಂಪನ್ನಗೊಂಡು ಮುಕ್ತಾಯವಾಯಿತು. ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭವು ಜರಗಿತು.
 
 
” ಸಮಾಜದಲ್ಲಿ ಧಾರ್ಮಿಕತೆಯನ್ನು ಜಾಗೃತಿಗೊಳಿಸಿ ಸದ್ಭಾವನೆ, ಸದಾಚಾರಯುಕ್ತ ಸುವ್ಯವಸ್ತಿತವಾದ ಜೀವನ ನಡೆಸಲು ಮತ್ತು ಮಾನವೀಯತೆಯ ವಿಕಾಸಕ್ಕೆ ಶ್ರೀಮದ್ಭಾಗವತ ಸಪ್ತಾಹ ಯಜ್ನದಂತಹ ಸಮಾರ್ಭಗಳು ಅನಿವಾರ್ಯ. ಶ್ರೀ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರ ಜರಗುತ್ತಾ ಇರಲಿ” ಎಂಬುದಾಗಿ ವಿಶೇಷ ಅತಿಥಿಗಳಾಗಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ವಿಶೇಷ ಭಾಷಣದಲ್ಲಿ ನುಡಿದರು.
 
 
ಕೆ. ಪಿ. ಕುಮಾರನ್ ನಾಯರ್, ಡಾ. ಮಹಾಭಲಕೃಷ್ಣ ಭಟ್ ಶುಭಾಶಂಸನೆಯಿತ್ತರು. ಸುಬ್ರಾಯ ಬಳ್ಳುಳ್ಳಾಯ ಮೂಡುಮನೆ, ಗೋವಿಂದಬಳ್ಳಮೂಲೆ ಸಾಂದರ್ಭಿಕ ಸಲಹೆಸೂಚನೆಗಳನ್ನಿತ್ತರು ಬ್ರಹ್ಮಶ್ರೀ ಪೆರಿಗಮನ ಜಯಕೃಷ್ಣನ್ ನಂಬೂದಿರಿ ಸಂಪನ್ಮೂಲ ವ್ಯಕ್ತಿಯಾಗಿ ಸಪ್ತಾಹವನ್ನು ಪರಿಣಾಮಕಾರಿಯಾಗಿ ನಡೆಸಿದರು. ಕೃಷ್ಣನ್ ನಂಬೂದಿರಿ ವಾಚನಗಾರರಾಗಿ ಸಹಕರಸಿದರು. ಶ್ರೀ ಹರಿ ನಂಬೂದಿರಿ ವೈದಿಕ ಪೂಜಾದಿ ಉಪಾಸನಾ ಕಾರ್ಯಕ್ರಮಗಳನ್ನು ನಡೆಸಿದರು. ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು.
 
ವಿಷ್ಣು ಭಟ್ ಬಜೆ, ಚಂದು ನಾಯರ್ ಪುದಿಯಕಂಡಂ, ಗೋಪಾಲನ್ ಕೋಟೂರು ಇವರ ಮೇಲ್ನೋಟದಲ್ಲಿ ಅನುದಿನವೂ ಅನ್ನಸಂತರ್ಪಣೆಯು ಯಶಸ್ವಿಯಾಗಿ ಪ್ರಶಂಸನಾರ್ಹವಾಯಿತು. ಸೀತಾರಾಮ ಬಳ್ಳುಳ್ಳಾಯ ಸಾಮಾರಂಭ ಸಂಯೋಜನೆ ಮಾಡಿದರು. ಕುಂಜಿರಾಮನ್ ಅವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here