ಭವಿಷ್ಯದಲ್ಲಿ ಪ್ಲಾಸ್ಟಿಕ್, ಪಾಲಿಮಾರ್ ನೋಟುಗಳ ಚಲಾವಣೆ!

0
367

ನವದೆಹಲಿ ಪ್ರತಿನಿಧಿ ವರದಿ
ಭವಿಷ್ಯದಲ್ಲಿ ಪ್ಲಾಸ್ಟಿಕ್, ಪಾಲಿಮಾರ್ ನೋಟುಗಳು ಬರಲಿದೆ. ಹೌದು ಪ್ಲಾಸ್ಟಿಕ್, ಪಾಲಿಮಾರ್ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
 
 
 
ಈ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಹಣಕಾಸು ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಉತ್ತರಿಸಿದ್ದಾರೆ. ಮೊದಲಿಗೆ 10ರೂ.ನ 100ಕೋಟಿ ಪ್ಲಾಸ್ಟಿಕ್ ನೋಟುಗಳು ಮುದ್ರಣವಾಗಿದೆ. ಕೊಚ್ಚಿ, ಮೈಸೂರು, ಶಿಮ್ಲಾ, ಜೈಪುರ, ಭುವನೇಶ್ವರಗಳಲ್ಲಿ ಪ್ರಾಯೋಗಿಕವಾಗಿ ಚಲಾವಣೆ ಮಾಡಲಾಗಿದೆ.
 
 
 
ಪ್ಲಾಸ್ಟಿಕ್, ಪಾಲಿಮರ್ ನೋಟುಗಳು ದೀರ್ಘಕಾಲ ಬಾಳಿಕೆ ಬರುತ್ತದೆ. ಈ ನೋಟುಗಳನ್ನು ನಕಲಿ ಮಾಡಲು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನೋಟು ಮುದ್ರಿಸಲು ಸರ್ಕಾರ ಮುಂದಾಗಿದೆ.

LEAVE A REPLY

Please enter your comment!
Please enter your name here