ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾರ್ಯ

0
353

 
ಶ್ಯಾಮ್ ಪ್ರಸಾದ್, ಬದಿಯಡ್ಕ
ಉಕ್ಕಿನಡ್ಕ ಸಮೀಪದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ನೆಲ್ಲಿಕುಂಜೆಯ ಜೀರ್ಣೋದ್ಧಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು ಶ್ರೀ ದೇವರ ಗರ್ಭಗುಡಿ, ನಮಸ್ಕಾರ ಮಂಟಪಗಳ ಕಗ್ಗಲ್ಲಿನ ಕೆಲಸ ಕಾರ್ಯಗಳು ಕೊನೆಯ ಹಂತದಲ್ಲಿದೆ.
badiyadka_temple1
 
ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗೌರವಾಧ್ಯಕ್ಷರಾಗಿರುವ ಸಮಿತಿಯು ಜೀರ್ಣೋದ್ಧಾರ ಕಾರ್ಯದ ನೇತೃತ್ವವನ್ನು ವಹಿಸಿರುತ್ತದೆ. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿಗಳು ದೇಲಂಪಾಡಿ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಅಧ್ಯಕ್ಷರಾಗಿ ರಮಾನಾಥ ರೈ ಮೇಗಿನ ಕಡಾರು, ಕಾರ್ಯಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಕಾರ್ಯದರ್ಶಿ ಮಹೇಶ ಗುತ್ತು, ಖಜಾಂಜಿ ಜಿ.ಕೆ.ಶರ್ಮ ಸರವು, ಕ್ಷೇತ್ರದ ಅಧ್ಯಕ್ಷ ಸತೀಶ್ ರಾವ್ ನೆಲ್ಲಿಕುಂಜೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸಕಾರ್ಯಗಳನ್ನು ವಹಿಸಿಕೊಂಡು ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ.
 
 
 
ಕಾರ್ಕಳದ ಶಿಲ್ಪಿ ವಿಶ್ವನಾಥ ಕಗ್ಗಲ್ಲಿನ ಶಿಲ್ಪದ ನೇತೃತ್ವವನ್ನು ವಹಿಸಿರುತ್ತಾರೆ. ಊರ ಪರವೂರ ಭಕ್ತಾದಿಗಳು ಸೇರಿ ಶ್ರಮದಾನವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಶ್ರೀ ಕ್ಷೇತ್ರಕ್ಕೆ ಬರುವ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಿರುತ್ತಾರೆ.
 
 
ಗುರುವಾಯೂರಿನ ಕ್ಷೇತ್ರ ನಿರ್ಮಾಣ ಶಿಲ್ಪಿ ಉಣ್ಣಿಕೃಷ್ಣನ್ ಶ್ರೀ ಕ್ಷೇತ್ರದ ನಿರ್ಮಾಣ ನಕ್ಷೆಯನ್ನು ತಯಾರಿಸಿರುತ್ತಾರೆ. ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಸಮಗ್ರ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.
 
 
ಕಾರ್ಯಕ್ರಮದ ವಿವರ
ನವಂಬರ್ 7ರಂದು ಸೋಮವಾರ ಬೆಳಗ್ಗೆ 8.30ಕ್ಕೆ ಜೀರ್ಣೋದ್ಧಾರ ಕಾರ್ಯಕ್ಕೆ ಆವಶ್ಯಕವಾದ ಮರಗಳನ್ನು ಕಡಿಯುವ ಮುಹೂರ್ತ ನಿಶ್ಚಯಿಸಲಾಗಿದೆ. ಮರದ ಶಿಲ್ಪಿ ವಿಶ್ವಕರ್ಮ ಕೃಷ್ಣನ್ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಸಮಿತಿಯ ಖಜಾಂಜಿ ಸರವು ಕಾಚಿಕ್ಕಾಡು ಗೋಪಾಲಕೃಷ್ಣ ಶರ್ಮ ಅವರ ಮನೆಯವರು ಉದಾರವಾಗಿ ದೇಣಿಗೆ ನೀಡಿದ ಹಲಸಿನ ಮರವನ್ನು ಮುಹೂರ್ತದ ಮರವಾಗಿ ಉಪಯೋಗಿಸಲಾಗುತ್ತದೆ.
 
 
ಅಂದು ಬೆಳಗ್ಗೆ ಗಂಟೆ 7ಕ್ಕೆ ಶ್ರೀದೇವರಿಗೆ ಪೂಜೆ, ಜೀರ್ಣೋದ್ಧಾರ ಸಮಿತಿ ಹಾಗೂ ಪೆರಡಾಲ, ಪಡ್ರೆ, ಎಣ್ಮಕಜೆ, ಕುಂಬಡಾಜೆ ಗ್ರಾಮಸ್ಥರಿಂದ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಯ ಮೂಲಕ ಸರವು ಕಾಚಿಕ್ಕಾಡಿಗೆ ತೆರಳಿ ವಿಶ್ವಕರ್ಮ ಕೃಷ್ಣನ್ ಬೆದ್ರಂಪಳ್ಳ ಇವರಿಂದ ಗಣಪತಿ ಪೂಜೆ, ವಿಶ್ವಕರ್ಮ ಪೂಜೆ, ಸಾರ್ವಜನಿಕ ಪ್ರಾರ್ಥನೆ ಹಾಗೂ ಮರಕಡಿಯುವ ಮುಹೂರ್ತ ನೆರವೇರಿಸಲಾಗುತ್ತದೆ. ಈ ಕಾರ್ಯದಲ್ಲಿ ಊರ ಪರವೂರ ಭಕ್ತಾದಿಗಳು, ಜೀರ್ಣೋದ್ಧಾರ ಸಮಿತಿ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಶ್ರೀ ಕ್ಷೇತ್ರದ ಅಧ್ಯಕ್ಷ ಸತೀಷ ರಾವ್ ನೆಲ್ಲಿಕುಂಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here