ಭಯೋತ್ಪಾದಕರ ಅಟ್ಟಹಾಸ

0
200

ರಾಷ್ಟ್ರೀಯ ಪ್ರತಿನಿಧಿ ವರದಿ
ಅಸ್ಸಾಂನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಹತ್ಯೆ ಮಾಡಿದ ಘಟನೆ ಅಸ್ಸಾಂನ ಕೋಕ್ರಝಾರ್ ನಲ್ಲಿ ಸಂಭವಿಸಿದೆ.
 
ಉಗ್ರರು 12 ಮಂದಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಭದ್ರತಾ ಪಡೆ, ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಮಾರ್ಕೆಟ್ ಪ್ರದೇಶದಲ್ಲಿ ಏಕಾಏಕಿ ಉಗ್ರರು ಫೈರಿಂಗ್ ನಡೆಸಿದ್ದಾರೆ. ಅಮಾನುಷ ಗುಂಡಿನ ದಾಳಿ ನಡೆಸಿದ್ದ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.
 
 
ಭಯೋತ್ಪಾದಕರ ತಂಡ ಗ್ರೆನೇಡ್ ದಾಳಿ ಕೂಡ ನಡೆಸಿದೆ. 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 3 ಅಥವಾ 4 ಮಂದಿ ಭಯೋತ್ಪಾದಕರು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಭದ್ರತಾ ಪಡೆಗಳಿಂದ ಉಗ್ರರ ಬಳಿಯಿದ್ದ 1 ಎಕೆ47 ಜಪ್ತಿ ಮಾಡಲಾಗಿದೆ.
 
 
ಭರವಸೆ ನೀಡಿದ ಗೃಹಸಚಿವರು:
ಅಸ್ಸಾ ಸಿಎಂ ಜತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಾತುಕತೆ ನಡೆಸಿದ್ದಾರೆ. ಎಲ್ಲಾ ರೀತಿ ನೆರವು ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ. ರಾಜನಾಥ್ ಸಿಂಗ್ ಅವರು ಉಗ್ರರ ದಾಳಿಯ ಪೂರ್ಣ ವಿವರಗಳನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here