ಭನ್ನೇರು ಘಟ್ಟ ಸುತ್ತಮುತ್ತ ಗಣಿಗಾರಿಕೆ ರಾಜ್ಯ ಸರ್ಕಾರದಿಂದಲೆ ಲೈಸೆನ್ಸ್!

0
359

ಭನ್ನೇರುಘಟ್ಟ ಸುತ್ತ ಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ವೆಂಕಟೇಶ್ವರ ಕ್ರಷರ್ ಸೇರಿದಂತೆ ಅನೇಕ ಕ್ರಷರ್ಸ್ಗಳು ಭಾಗಿಯಾಗಿದ್ದವು, ಇದೀಗ ಅಕ್ರಮಗಣಿಗಾರಿಕೆಗೆ ಹಿಂದಿನ ಸರ್ಕಾರದಿಂದಲೆ ಅನುಮತಿ ಇತ್ತೆಂಬ ವಿಷಯ ತಿಳಿದುಬಂದಿದೆ.

ಅಕ್ರಮ ಗಣಿಗಾರಿಕೆಗೆ ಸರ್ಕಾರದ ಅಸ್ತು?

ಅಕ್ರಮ ಗಣಿಗಾರಿಕೆ ಸರ್ಕಾರದ ಗಮನಕ್ಕೂ ಬಂದಿದ್ದರೂ ಮೌನ ಮುರಿಯದ ಸರ್ಕಾರ ವೆಂಕಟೇಶ್ವರ ಕ್ರಷರ್ಸ್ ಸೇರಿದಂತೆ ಅನೇಕ ಕಂಪನಿಗೆ ಪರವಾನಗೆ ನೀಡಿತ್ತು ಎನ್ನಲಾಗಿದ್ದು ಹಿಂದಿನ ಡಿ.ಸಿಯಾಗಿದ್ದ ವಿ.ಶಂಕರ್ ಫಾರ್ಮ್ ಸಿ ನೀಡುವ ಮೂಲಕ ಪರವಾನಗಿ ನವೀಕರಿಸಿದ್ದರು, ೨೦೧೫ರಲ್ಲಿ ಕಲ್ಲು ಗಣಿಗಾರಿಕೆ ಲೈಸೆನ್ಸ್ ನವಿಕರಿಸಿದ್ದ ರಾಜ್ಯ ಸರ್ಕಾರ ೨೦೨೧ ಮಾರ್ಚ್ ೩೧ರವರೆಗೆ ಕನ್ನಕನಾಯಕನ ಹಳ್ಳಿ ಮತ್ತು ಬನ್ನೇರುಘಟ್ಟದಲ್ಲಿ ಸುಮಾರು 3 ಎಕರೆ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಿತ್ತು.

LEAVE A REPLY

Please enter your comment!
Please enter your name here