ಭಟ್ಕಳ ಮೂಲದ ಮತ್ತೋರ್ವ ಉಗ್ರ ಬಂಧನ

0
187

ನವದೆಹಲಿ ಪ್ರತಿನಿಧಿ ವರದಿ
ಕುಖ್ಯಾತ ಭಯೋತ್ಪಾದನಾ ಸಂಘಟನೆ ಇಂಡಿಯನ್ ಮುಜಾಹಿದ್ದೀನ್​ನ ಪ್ರಮುಖ ಉಗ್ರ ಅಬ್ದುಲ್ ವಾಹಿದ್ ಸಿದ್ದಿಬಾಪನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇಂದು ಮಧ್ಯಾಹ್ನ ಬಂಧಿಸಿದ್ದಾರೆ.
 
 
ದೇಶ ತೊರೆದು ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತನಾಗಿದ್ದ ಅಬ್ದುಲ್ ವಾಹಿದ್ ಸಿದ್ದಿಬಾಪ ಶುಕ್ರವಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಸಿದ್ದಿಬಾಪ ದೆಹಲಿ ಬರುವ ಕುರಿತು ಖಚಿತ ಮಾಹಿತಿ ಪಡೆದಿದ್ದ ಎನ್ ಐಎ ಅಧಿಕಾರಿಗಳು ಆತ ಮಾರುವೇಷದಲ್ಲಿರುವಾಗಲೇ ಆತನನ್ನು ಬಂಧಿಸಿದ್ದಾರೆ.
 
 
 
ಮೂಲತಃ ಕರ್ನಾಟಕದ ಭಟ್ಕಳ ಮೂಲದವನಾದ ಅಬ್ದುಲ್ ವಾಹಿದ್ ವೃತ್ತಿಯಲ್ಲಿ ಸುಗಂಧ ವ್ಯಾಪಾರಿಯಾಗಿದ್ದು, ಕುಖ್ಯಾತ ಭಯೋತ್ಪಾದಕ ಯಾಸಿನ್ ಭಟ್ಕಳ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here