ಭಜನೋತ್ಸವ ಕಾರ್ಯಕ್ರಮ

0
289

ವರದಿ: ಸುನೀಲ್ ಬೇಕಲ್
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 18ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ದಿನಾಂಕ 18.09.2016 ರಿಂದ 24.09.2016 ರವರೆಗೆ ಸಂಯೋಜಿಸಲಾಗಿದೆ. ಸೆ.25 ರಂದು ಭಜನೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಭಜನಾ ಸಮಿತಿಯ ಕಾರ್ಯದರ್ಶಿ ಮಮತಾ ರಾವ್ ತಿಳಿಸಿದ್ದಾರೆ.
 
 
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳ ಆಯ್ದ ಭಜನಾ ಮಂಡಳಿಗಳ 200 ಮಂದಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶವಿದ್ದು, ಇವರಿಗೆ ಭಜನಾ ಪರಿಣಿತರಿಂದ ವಿಶೇಷ ತರಬೇತಿಯನ್ನು ನೀಡಲಾಗುವುದು. ಕಮ್ಮಟದಲ್ಲಿ ಭಜನೆಯ ಹಾಡುಗಳು, ಸರ್ವಧರ್ಮ ಪ್ರಾರ್ಥನೆ, ನೃತ್ಯಭಜನೆ, ಚರ್ಚೆ, ಹರಿಕಥೆ, ಬೌದ್ಧಿಕ ಉಪನ್ಯಾಸ, ಯೋಗಾಭ್ಯಾಸವನ್ನು ವ್ಯವಸ್ಥೆಗೊಳಿಸಲಾಗಿದೆ. 100 ಭಜನಾ ಮಂಡಳಿಗಳಿಂದ 200 ಮಂದಿ ಭಜನಾ ಪಟುಗಳಿಗೆ ಭಜನಾ ಕಮ್ಮಟದಲ್ಲಿ ತರಬೇತಿ ಪಡೆಯಲು ಅವಕಾಶವನ್ನು ನೀಡಲಾಗಿದೆ.
 
 
ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ ಓದಲು, ಬರೆಯಲು ತಿಳಿದಿರಬೇಕು. 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಉಚ್ಛಾರ, ರಾಗ, ತಾಳ, ಜ್ಞಾನ ಹೊಂದಿರಬೇಕು ಮತ್ತು ಯಾವುದಾದರೂ ಒಂದು ಭಜನಾ ಮಂಡಳಿಯ ಸದಸ್ಯರಾಗಿರಬೇಕು. ಭಜನಾ ತರಬೇತಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ರಾಗ, ತಾಳ ಅಭ್ಯಾಸವನ್ನು ನಡೆಸಲಾಗುವುದು. ಅಲ್ಲದೇ ಮಹಿಳಾ ಶಿಬಿರಾರ್ಥಿಗಳಿಗೆ ಶೋಭಾನೆ ಹಾಡುಗಳ ಅಭ್ಯಾಸ, ನೃತ್ಯ ತರಬೇತಿ ನಡೆಯಲಿದೆ. ಶಿಬಿರದ ದಿನಗಳಂದು ವಿವಿಧ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
 
 
 
ಪ್ರತಿದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಸುತ್ತ ನಗರ ಸಂಕೀರ್ತನಾ ಕಾರ್ಯಕ್ರಮ ಜರುಗಲಿದೆ. ತರಬೇತಿ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಕಮ್ಮಟದ ಕೊನೆಯ ದಿನ ಭಜನೋತ್ಸವ ಕಾರ್ಯಕ್ರಮ ನಡೆಯಲಿದ್ದು ವಿವಿಧ ಭಜನಾ ಮಂಡಳಿಗಳ ಸುಮಾರು 4,000 ಕ್ಕೂ ಮಿಕಿ ಭಜಕರು ಪಾಲ್ಗೊಳ್ಳಲಿದ್ದಾರೆ.
 
 
ಈ ಭಜನಾ ಕಮ್ಮಟವು ಶುಲ್ಕರಹಿತವಾಗಿದೆ ಹಾಗೂ ಭಜಕರಿಗೆ ಉಚಿತ ವಾಸ್ತವ್ಯ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ:- ಮಮತಾ ರಾವ್ (9449776921) ಕಾರ್ಯದರ್ಶಿ, ಸುಬ್ರಹ್ಮಣ್ಯ ಪ್ರಸಾದ್(9448869340)ಸ0ಯೋಜಕರು, ನಾಗೇಂದ್ರ ಅಡಿಗ ಕೋಶಾಧಿಕಾರಿ (9448445304) ಭಜನಾ ಕಮ್ಮಟ 2016 ಶ್ರೀ ಕ್ಷೇತ್ರ ಧರ್ಮಸ್ಥಳ ಇವರನ್ನು ಸ0ಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here