ಭಗವಾನ್‌ ಲೀಲೆಗಳೇನೇನು ಗೊತ್ತೇ?

0
1348

ನಿತ್ಯ ಅಂಕಣ:೫೦

“ಹೌದು ಭಗವಾನ್‌ ನಿತ್ಯಾನಂದ ಸ್ವಾಮಿ ಅವರ ಕುರಿತಾದ ನಿತ್ಯ ಅಂಕಣ ಇಂದಿಗೆ ೫೦ ಸಂಚಿಕೆ ಪೂರೈಸುತ್ತಿದೆ.ಅಂಕಣ ನೀಡಿದ ನಿತ್ಯಾನಂದ ಭಗವಾನ್‌ ಅವರ ಭಕ್ತ ತಾರಾನಾಥ್‌ ಮೇಸ್ತ ಶಿರೂರು, ನಿತ್ಯ ಓದಿ ಪ್ರೋತ್ಸಾಹಿಸುತ್ತಿರುವ ಭಕ್ತವೃಂದ ಹಾಗೂ ವಾರ್ತೆ.ಕಾಂ ಓದುಗರಿಗೆ ಅಭಿನಂದನೆಗಳು. ನಿರಂತರ ಈ ಅಂಕಣ ಮುಂದುವಯಿವುದು.-ಸಂಪಾದಕ” ಭಗವಾನ್ ನಿತ್ಯಾನಂದ ಸ್ವಾಮಿಗಳ ಆಧ್ಯಾತ್ಮ ಸಾಂಗತ್ಯದಲ್ಲಿದ್ದವರು, ಸೇವೆಯಲ್ಲಿ ನಿರತರಾದ ಪರಮಭಕ್ತರಲ್ಲಿ 40 ಕ್ಕೂ ಅಧಿಕ ಆಸ್ತಿಕರು, ಸಂತರು, ಯೋಗಿಗಳು, ಅವಧೂತರು ಆದರು. ಸಂತ ಪರಿವಾರದಲ್ಲಿ ಎಲ್ಲಾ ಜಾತಿಯ, ಅನ್ಯಧರ್ಮದ ಸಂತರು ಇದ್ದರು. ಇವರೆಲ್ಲರೂ ನಿತ್ಯಾನಂದರ ಅನುಗ್ರಹದಿಂದಲೇ ಸಾಧಕರಾದರು. ಸನ್ಯಾಸ ಯೋಗ ಬಲದಂತೆ ಸನ್ಯಾಸಿಗಳಾದರು. ಇವರೆಲ್ಲರೂ ನಿತ್ಯಾನಂದ ಬಾಬಾರು ಸಂಚಾರದಲ್ಲಿದ್ದಾಗ ಪವಿತ್ರ ಚರಣಸ್ಪರ್ಶ ಮಾಡಿದ ಸ್ಥಳಗಲ್ಲಿ ಆಶ್ರಮಗಳ ಸ್ಥಾಪನೆ ಮಾಡಿದರು. ಕೆಲವರು ಗುರುದೇವರ ಆಜ್ಞೆಯಂತೆ, ಸೂಚಿಸಿದ ಸ್ಥಳಗಳಲ್ಲಿ ಆಶ್ರಮ ಸ್ಥಾಪಿಸಿದರು. ಅಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವಾಕಾರ್ಯಗಳಲ್ಲಿ ತೋಡಗಿಸಿಕೊಂಡರು. ನೆಲೆ ಕಂಡಿರುವ ಸ್ಥಳವನ್ನು ಪವಿತ್ರ ಶ್ರದ್ಧಾಕೇಂದ್ರಗಳಾಗಿಸಿದರು. ಅವರಿಂದಲೇ ಮುಂದೆ ಭಗವಾನ್ ನಿತ್ಯಾನಂದರ ತತ್ವ ಸಿದ್ಧಾಂತ ಪ್ರಚಾರಗೊಂಡವು.

ಸಾಧ್ವೀ ತುಳಸೀ ಮಾತಾ, ಶ್ರೀಜನಾನಂದ ಸ್ವಾಮೀಜಿ, ಶ್ರೀಮುಕ್ತಾನಂದ ಪರಮಹಂಸ ಸ್ವಾಮೀಜಿ, ಶ್ರೀಕುಟ್ಟಿ ರಾಮ ಸ್ವಾಮೀಜಿ, ಶ್ರೀಮಹಾಬಲಾನಂದ ಸ್ವಾಮೀಜಿ, ಶ್ರೀವಿಮಲಾನಂದ ಸ್ವಾಮೀಜಿ, ಸಾಲಿಗ್ರಾಮ ಸ್ವಾಮೀಜಿ, ಶ್ರೀಗೋವಿಂದ ಸ್ವಾಮೀಜಿ, ಶ್ರೀಗೋಪಾಲ ಮಾಮಾಜೀ, ಮೌನಿಬಾಬಾ ಕರುಣಾನಂದ ಸ್ವಾಮೀಜಿ, ಅವಧೂತ ಪೂತ್ತೂರು ಅಜ್ಜ, ಶ್ರೀವೃಂದಾವನ ಸ್ವಾಮೀಜಿ, ಸಾದ್ವೀ ಲಲಿತಾ ಮಾವುಲಿ.

ಶ್ರೀದಿಗಂಬರ ಸ್ವಾಮೀಜಿ, ಶ್ರೀರಾಜಯೋಗಿ ಕರೀಂಫೀರ್, ಅವಧೂತ ಭೀಮಪ್ಪಜ್ಜ, ಶ್ರೀನಾರಾಯಣ ಸ್ವಾಮೀಜಿ, ಶ್ರೀನಾಯಕ್ ಸ್ವಾಮೀಜಿ, ಶ್ರೀಸದಾನಂದ ಪಡಿಯಾರ್ ಸ್ವಾಮೀಜಿ, ಶ್ರೀಶಾರದದಾಸ್ ಸ್ವಾಮೀಜಿ, ಶ್ರೀಶಂಕರ ಗುರುದಾಸ್ ಸ್ವಾಮೀಜಿ, ಶ್ರೀಪರಮಾನಂದ ಸ್ವಾಮೀಜಿ, ಶ್ರೀಗೋಪಾಲ ಸ್ವಾಮೀಜಿ, ಶ್ರೀಸೂರ್ಯಾನಂದ ಸ್ವಾಮೀಜಿ, ಶ್ರೀಪ್ರಕಾಶಾನಂದ ಸ್ವಾಮೀಜಿ, ಶ್ರೀನಿತ್ಯಚೈತನ್ಯ ಯತಿ, ಶ್ರೀರಾಘವಾಂಕ ಮಹಾತ್ಮ, ಅವಧೂತ ಗಿರೀಶನಾಥ ಮಹಾರಾಜ್, ಶ್ರೀ ರಾಹುಲ್ ಮಹಾರಾಜ್.

ಶ್ರೀಶೇರ್ ನಾಥ್ ಜೀ ಮಹಾರಾಜ್, ಶ್ರೀಪೂರ್ಣಾನಂದ ಸ್ವಾಮೀಜಿ, ಶ್ರೀರಾಕ್ಡಿ ಬಾಬಾ, ಶ್ರೀ ಅತ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀಅಂಬಲಪಾಡಿ ವಿಜಯಾನಂದ ಸ್ವಾಮೀಜಿ, ಶ್ರೀರುದ್ರಾನಂದ ಸ್ವಾಮೀಜಿ, ಶ್ರೀಡೇವಿಡ್ ಸ್ವಾಮೀಜಿ, ಶ್ರೀವಿವೇಕಾನಂದ ಮುನಿ, ಮಾತಾ ಸಾದ್ಧಿ ಸೀತಮ್ಮ, ಶ್ರೀಬಾಲಯೋಗಿ ಸದಾನಂದ ಮಹಾರಾಜ್, ಶ್ರೀಆಲಯ ಸ್ವಾಮೀಜಿ, ಶ್ರೀಗೋವಿಂದಗಿರಿ ಮಹಾರಾಜ್, ಶ್ರೀಕೃಷ್ಣಾನಂದ ಸ್ವಾಮೀಜಿ, ಶ್ರೀಬಸವರಾಜ ರಾಜೇಂದ್ರ ಯೋಗಿ, ಮಹರ್ಷಿ ಶ್ರೀನಾಗಾರಾಜ ಸೂರ್ಯ ನಾರಾಯಣ ಪಾಂಡೆ ಮಹಾರಾಜ್, ಹೀಗೆ ಮೊದಲಾದವರು ಭಗವನ್ ನಿತ್ಯಾನಂದರಿಂದ ಅನುಗ್ರಹ ಪಡೆದು ಸಂತ ಪದವಿ ಪಡೆದರು. ಭಾರತ ದೇಶದ ಅಲ್ಲಲ್ಲಿ ಆಶ್ರಮ ಸ್ಥಾಪಿಸಿದರು. ಸದ್ದಿಲ್ಲದೆ ಗುರುದೇವರ ಆರಾಧನೆ, ಸಮಾಜಮುಖಿ ಸೇವಾಕಾರ್ಯಗಳಲ್ಲಿ ನಿರತರಾದರು. ಇವರಲ್ಲರೂ ಮಹಾಸಾಧಕರು, ತಪಸ್ವಿಗಳು. ಇವರಲ್ಲಿ ಬಹಳಷ್ಟು ಸಂತರು ಇವಾಗ ಸಮಾಧಿ ಪಡೆದಿದ್ದಾರೆ. -ತಾರಾನಾಥ್‌ ಮೇಸ್ತ ಶಿರೂರು.

Advertisement

LEAVE A REPLY

Please enter your comment!
Please enter your name here