ಭಂಡಾರ್ಕಾರ್ಸ್ ಗೆ ಜಯ

0
253

 
ಉಡುಪಿ ಪ್ರತಿನಿಧಿ ವರದಿ
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ವ್ಯಾಪ್ತಿಗೆ ಒಳಪಟ್ಟ ಮೂಡಬಿದ್ರೆಯ ಮಹಾವೀರ ಕಾಲೇಜು ಸಿಬ್ಬಂದಿ ಸಂಘ ಆಯೋಜಿಸಿದ್ದ ಅಂತರ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸಿಬ್ಬಂದಿಗಳ ತಂಡ ಜಯ ಗಳಿಸಿತು.
 
ಅಂತಿಮ (ಫೈನಲ್) ಪಂದ್ಯದಲ್ಲಿ ಎದುರಾಳಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಸಿಬ್ಬಂದಿಗಳ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಭಂಡಾರ್ಕಾರ್ಸ್ ಕಾಲೇಜಿನ ಉಪನ್ಯಾಸಕರಾದ ಶರಣ್ ಅವರು ಉತ್ತಮ ಬ್ಯಾಟ್ಸಮನ್ ಮತ್ತು ಅನಂತ ಪೈ ಅವರು ಉತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದರು.

LEAVE A REPLY

Please enter your comment!
Please enter your name here