ಬ್ರೆಡ್ ಉಪ್ಪಿಟ್ಟು

0
336

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
1 ಪೌಂಡ್ ಬ್ರೆಡ್, ಮೂರು ಈರುಳ್ಳಿ, ಆರು ಹಸಿಮೆಣಸಿನ ಕಾಯಿ, ಸ್ವಲ್ಪ ಶುಂಠಿ, ಕೊತ್ತಂಬರಿ ಸೊಪ್ಪು,
ಒಗ್ಗರಣಗೆ: ಅರ್ಧ ಚಮಚ ಸಾಸಿವೆ, ತಲಾ ಒಂದು ಚಮಚ ಉದ್ದಿನಬೇಳೆ-ಕಡಲೇಬೇಳೆ, ಆರು ಗೋಡಂಬಿ, ಎರಡು ಎಸಳು ಕರಿಬೇವು, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು
 
 
ತಯಾರಿಸುವ ವಿಧಾನ:
ಮೊದಲು ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು ಸಣ್ಣಗೆ ಹಚ್ಚಿಟ್ಟುಕೊಳ್ಳಬೇಕು. ಕಾದ ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಸಾಸಿವೆ ಉದ್ದಿನಬೇಳೆ, ಕಡಲೆಬೇಳೆ, ಹೆಚ್ಚಿಟ್ಟ ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವ, ಗೋಡಂಬಿಯನ್ನು ಹಾಕಿ ಕೆಂಪಗೆ ಫ್ರೈ ಮಾಡಿ, ನಂತರ ಅದಕ್ಕೆ ಬ್ರೆಡ್ ಪುಡಿ ಮಾಡಿ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ. ಮೇಲೆ ಉಪ್ಪಿನ ಪುಡಿಯನ್ನು ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬಿಸಿಬಿಸಿಯಾದ ಬ್ರೆಡ್ ಉಪ್ಪಿಟ್ಟಿ ರೆಡಿ ಟು ಈಟ್.

LEAVE A REPLY

Please enter your comment!
Please enter your name here