ಪ್ರಮುಖ ಸುದ್ದಿವಾರ್ತೆವಿದೇಶ

ಬ್ರಿಟನ್‌ ಪಾರ್ಲಿಮೆಂಟ್ ಮುಂಭಾಗ ಉಗ್ರರ ದಾಳಿ

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಅಧಿವೇಶನ ನಡೆಯುತ್ತಿದ್ದ ವೇಳೆ ಬ್ರಿಟನ್‌ ಪಾರ್ಲಿಮೆಂಟ್ ಮುಂಭಾಗದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಪಾದಚಾರಿಗಳ ಸೋಗಿನಲ್ಲಿ ಬಂದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
 
 
ಉಗ್ರರ ದಾಳಿಗೆ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಐವರು ಹತ್ಯೆಯಾಗಿದ್ದು, 40ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿದ್ದ ಐವರಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಇಬ್ಬರು ಪಾದಚಾರಿಗಳು ಎನ್ನಲಾಗಿದೆ.
 
 
 
ಸಂಸತ್ ಒಳಗೆ ಸುಮಾರು 200ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ಪ್ರಧಾನಿಯೂ ಭಾಗಿಯಾಗಿದ್ದರು. ಅಧಿವೇಶನ ನಡೆಯುತ್ತಿದ್ದ ವೇಳೆ ಹೊರಭಾಗದಲ್ಲಿ ಈ ದಾಳಿ ನಡೆದಿದೆ. ಇದು ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ, ಆದರೆ ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಘಟನೆಯ ಹೊಣೆಗಾರಿಕೆ ಹೊತ್ತಿಲ್ಲ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here