ಬ್ರಿಟನ್ನಿನಿಂದ ಗಡಿಪಾಲಾಗ್ತಾರಾ ವಿಜಯ್ ಮಲ್ಯಾ?

0
3359

ಪ್ರತಿನಿಧಿ ವರದಿ: ಲಂಡನ್ನಿನ ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮಲ್ಯ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಮಲ್ಯಾರನ್ನ ಭಾರತಕ್ಕೆ ಗಡಿಪಾರು ಮಾಡುವ ಕುರಿತು ನ್ಯಾಯಲಯ ಇಂದು ತೀರ್ಪು ನೀಡಲಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೆ ಸಿಬಿಐ ಜಂಟಿ ನಿರ್ದೇಶಕ ಎ. ಸಾಯಿ ಮನೋಹರ್ ನೇತೃತ್ವದಲ್ಲಿ ಸಿಬಿಐ ಹಾಗೂ ಇ.ಡಿ ಅಧಿಕಾರಿಗಳ ತಂಡ ಬ್ರಿಟನ್ ತಲುಪಿದೆ.

ಗಡಿಪಾರು ತೀರ್ಪು ಹೊರಬಿದ್ದಲ್ಲಿ ಇಪ್ಪತ್ತೆಂಟು ದಿನ ಗಡುವು!

ಒಮ್ಮೆ ಇಂದು ಮಲ್ಯಾ ಗಡಿಪಾರಿಗೆ ಗುರಿಯಾದಲ್ಲಿ ತೀರ್ಪಿನ‌ ಆದೇಶವನ್ನ ಬ್ರಿಟನ್ನಿನ ಗೃಹ ಕಾರ್ಯದರ್ಶಿಗೆ ನೀಡಲಾಗುತ್ತದೆ ಹಾಗೂ ಸರ್ಕಾರದ ಪರವಾಗಿ ಕಾರ್ಯದರ್ಶಿ ಗಡಿಪಾರಿನ ಆದೇಶ ಹಸ್ತಾಂತರ ಪ್ರಕ್ರಿಯೆ ಆರಂಭಿಸುತ್ತಾರೆ ಈ ನಡುವೆ ಮಲ್ಯಾ ಮೇಲ್ಮನವಿ ಸಲ್ಲಿಸದೆ ಹೋದಲ್ಲಿ 28 ದಿನಗಳ ಒಳಗೆ ಮಲ್ಯ ಬ್ರಿಟನ್ ತೊರೆಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಲ್ಯಾ ಸಾಲ ವಾಪಸ್ಸಾಗುತ್ತಾ?

ಕೆಲದಿನಗಳ ಹಿಂದೆಯಷ್ಟೆ ಮಲ್ಯ ಸಾಲ ವಾಪಸ್ಸು ಮಾಡುವುದಾಗಿ ಟ್ವೀಟ್ ಮಾಡಿದ್ದರು.

LEAVE A REPLY

Please enter your comment!
Please enter your name here