ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಇಂದು ಬೆಂಗಳೂರಿನಲ್ಲಿ 2 ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ಶುರುವಾಗಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸ್ಟೇಡಿಯಂ ಸುತ್ತ ಬಿಗಿಭದ್ರತೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಬಿಗಿಭದ್ರತೆ ಮಾಡಲಾಗಿದೆ. ಬಂದೋಬಸ್ತ್ ಗಾಗಿ 800 ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಡಿಸಿಪಿ, 10 ಎಸಿಪಿ, 24 ಇನ್ಸ್ ಪೆಕ್ಟರ್ ಗಳ ನಿಯೋಜನೆ, ಕೆಎಸ್ ಆರ್ ಪಿ, ಬಾಂಬ್ ನಿಷ್ಕ್ರೀಯ ದಳ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕ್ರೀಡಾಂಗಣದ ಸುತ್ತಮುತ್ತ ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ.