ಬ್ಯಾಂಬೂ ಗಾರ್ಡನ್!

0
11296


ಇದೀರೋದು ನಮ್ಮ ಬೆದ್ರ'ದಲ್ಲಿ! - ಹರೀಶ್ ಕೆ.ಆದೂರು

ಮೂಡುಬಿದಿರೆ: ಹೆಸರೇ ಹೇಳುವಂತೆ ಮೂಡುಬಿದಿರೆಗೆ ಹೆಸರು ತಂದ ಬಿದಿರೇ ಇಲ್ಲವಲ್ಲ! ಎಂಬ ಚಿಂತೆಗೆ ಇದೀಗ ಮುಕ್ತಿ ಸಿಕ್ಕಿದೆ. ಒಂದೊಮ್ಮೆ ಬಿದಿರ ಮೆಳೆಗಳಿಂದ ತುಂಬಿದ್ದ ಮೂಡುಬಿದಿರೆಯಲ್ಲಿ ಬಿದಿರೆಂಬುದು ಸಂಪೂರ್ಣ ನಶಿಸಿ ಹೋಗಿತ್ತು. ಎಲ್ಲೂ ಬಿದಿರೇ ಕಾಣಸಿಗದಂತಾಗಿತ್ತು. ಹೌದು ಮೂಡುಬಿದಿರೆಯಲ್ಲಿ ಪುರಾತನ ಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿದಿರು ತುಂಬಿತ್ತು. ಇದು ಇತಿಹಾಸದ ಪುಟದಲ್ಲಿ ಉಲ್ಲೇಖವೂ ಆಗಿದೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಿದಿರಿನಿಂದಾವೃತಗೊ0ಡಿದ್ದ ಈ ಪ್ರದೇಶ ಬಿದಿರೆ, ಬೆದ್ರ ಎಂಬುದಾಗಿಯೇ ಖ್ಯಾತಿ ಪಡೆದಿತ್ತು. ಅದುಮೂಡುಬಿದಿರೆಗೆ’ ಹೆಸರು ತಂದ ಬಿದಿರಿನಿಂದಾಗಿಯೇ ಆಗಿತ್ತು…!
ಬಿದಿರೇ ನಾಶವಾಯಿತು! : ಮೂಡುಬಿದಿರೆ ನಗರವಾಗಿ ಪರಿವರ್ತನೆಯಾಯಿತು…ಅಂಗಡಿಗಳ ಸಂಖ್ಯೆ ಜನಸಂಖ್ಯೆಗಳು ಏರಿಕೆಯಾದವು. ಕೃಷಿ ಭೂಮಿಯೂ ಕಡಿಮೆಯಾಗತೊಡಗಿತು. ವಾಣಿಜ್ಯೀಕರಣ ಗಾಳಿ ಗಾಢವಾಗಿ ಬೀಸತೊಡಗಿತು. ಏಕಾಏಕಿ ಮೂಡುಬಿದಿರೆಯಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಆರಂಭಗೊAಡವು. ಇದೆಲ್ಲವೂ ಮೂಡುಬಿದಿರೆಯಲ್ಲಿ ಅನಾದಿಕಾಲದಿಂದಲೂ ಇದ್ದಂತಹ ಬಿದಿರಿ'ನ ನಾಶಕ್ಕೆ ಒಂದಿಲ್ಲೊAದು ಕಾರಣವಾಯಿತೆಂದರೆ ಅಚ್ಚರಿಪಡಬೇಕಾಗಿಲ್ಲ. ಕೊನೆ ಕೊನೆಗೆ ಮೂಡುಬಿದಿರೆಯಲ್ಲಿಬಿದಿರು’ ಸಂಪೂರ್ಣ ಮಾಯವಾಯಿತು ಎಂಬ ಸ್ಥಿತಿಯೂ ಬಂದೊದಗಿತು…
ಅವರು ಎಚ್ಚೆತ್ತರು!: ಇಂತಹ ಸ್ಥಿತಿಯಲ್ಲಿ ಮೂಡುಬಿದಿರೆಯ ಪರಿಸರ ತಜ್ಞ ಸೋನ್ಸ್ ಅವರ ಮುತುವರ್ಜಿಯಿಂದ ಸೋನ್ಸ್ ಫಾರಂನಲ್ಲಿ ಬಿದಿರ' ಕ್ರಾಂತಿಯೊAದು ಆರಂಭಗೊAಡಿತು. ಪುಟ್ಟ ಬಿದಿರಿನಿಂದ ಆರಂಭಗೊAಡು ಅನೇಕ ಪ್ರಬೇಧಗಳ ಬಿದಿರುಗಳನ್ನು ಸಂಗ್ರಹಿಸಿ ಬೆಳೆಸುವ ದೊಡ್ಡ ಸಾಧನೆಯು ನಡೆಯಿತು. ಹಲವು ಎಕ್ಕರೆ ಪ್ರದೇಶದಲ್ಲಿ ಬಾನೆತ್ತರದ ಬಿದಿರುಗಳನ್ನು ಬೆಳೆದು ಮೂಡುಬಿದಿರೆಯಲ್ಲಿ ಮತ್ತೊಮ್ಮೆ ಬಿದಿರು ಜೀವಂತವಾಗುವAತೆ ಮಾಡಿದರು. ಅನೇಕರಿಗೆ ಬಿದಿರು ಬೆಳೆಸಲು ಪ್ರೇರಣೆ ನೀಡಿದರು. ಭೇಷ್..ಭೇಷ್...: ವರ್ಷಂಪ್ರತಿ ಮಳೆಗಾಲ ಬಂತೆAದರೆಗಿಡನೆಟ್ಟು’ ವನಮಹೋತ್ಸವ ಆಚರಿಸುವ ಪರಿ ಪ್ರತೀ ತಾಲೂಕಿನಲ್ಲೂ ನಡೆಯುತ್ತದೆ. ಮೂಡುಬಿದರೆಯಲ್ಲೂ ಅದು ನಡೆಯುತ್ತಿತ್ತು. ಆದರೆ ಪರಿಸರ ಪ್ರೇಮಿಗಳ ಒತ್ತಾಸೆಯಂತೆ, ಕೆಲವೊಂದು ಮಾಧ್ಯಮ ಮಂದಿಯ ಒತ್ತಾಯದ ಮೇರೆಗೆ ಮೂಡುಬಿದಿರೆಯಲ್ಲಿ ಕೊಂಚ ವಿಭಿನ್ನ ಯೋಜನೆಯು ನಡೆದಿದೆ. ಕೆಲವೊಂದು ಸಂಘಟನೆಗಳು, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬಿದಿರ ಗಿಡಗಳನ್ನು ಬೆಳೆಸುವ, ನಡೆವ ಕಾರ್ಯವನ್ನು ಮಾಡಿದೆ. ಒಟ್ಟಿನಲ್ಲಿ ಮತ್ತೆ ಮೂಡುಬಿದಿರೆಯಲ್ಲಿ ಬಿದಿರ ವಂಶಾಭಿವೃದ್ಧಿಯಾಗುವ0ತಾಯಿತು…
ಮತ್ತೊ0ದು ಹೆಜ್ಜೆ ಮುಂದೆ: ಇದೀಗ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಅಂಚಿನಲ್ಲಿ ಅತ್ಯಂತ ವಿಶಾಲವಾದ ಎರಡೂವರೆ ಎಕ್ಕರೆಗಳ ಜಾಗದಲ್ಲಿ ಸುಂದರವಾದ ಬ್ಯಾಂಬೂ ಗಾರ್ಡನ್' ಆಕರ್ಷಕವಾಗಿ ನಿರ್ಮಾಣವಾಗಿದೆ. ೫೫ ಅತ್ಯಪರೂಪದ ತಳಿಗಳ ಬಿದಿರುಗಳ ವಂಶಾಭಿವೃದ್ಧಿಯೊ0ದಿಗೆ ತಳಿಗಳನ್ನು ಜತನದಿಂದ ಬೆಳೆಸಲಾಗಿದೆ. ಮುಂದಿನ ದಿನಗಳಲ್ಲಿ ಸಂಶೋಧನೆಗೂ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆಗಳನ್ನು ನಡೆಸಲಾಗಿದೆ. ಮೂಡುಬಿದಿರೆಯ ಕಡಲಕೆರೆ ಈಗಾಗಲೇ ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು ಅದರ ಅಂದವನ್ನು ಹೆಚ್ಚಿಸುವ ಕಾರ್ಯ ಈ ಬಿದಿರ ತೋಟದಿಂದಾಗಿದೆ. ಕೇರಳದಪೆರು’ ಎಂಬ ಪ್ರದೇಶದಿಂದ ಆಯ್ದ ತಳಿಗಳನ್ನು ಸಂಗ್ರಹಿಸಿ ತಂದು ಅತ್ಯಂತ ಜಾಗರೋಕತೆಯಿಂದ ಬೆಳೆಸುವ ಕಾರ್ಯ ನಡೆದಿದೆ. ಇದೀಗ ಈ ತೋಟ ಸುಂದರವಾಗಿ ಮೂಡಿಬಂದಿದೆ.
೫೫ ತಳಿಗಳು!: ಬುದ್ದಾಸ್ ಬೆಳ್ಳಿ ಬ್ಯಾಂಬೋ, ಗೋಲ್ಡನ್ ಬ್ಯಾಂಬೋ,ಗೈ0ಟ್ ಬ್ಯಾಂಬೋ, ಬರ್ಮಾ ಬ್ಯಾಂಬೋ,ಲಾಠಿ ಬ್ಯಾಂಬೋ ಸೇರಿದಂತೆ ಮೂಡುಬಿದಿರೆಯ ಸ್ಥಳೀಯ ತಳಿಗಳು, ಅಪರೂಪದ ತಳಿಗಳು ಈ ತೋಟದಲ್ಲಿವೆ. ಈಗಾಗಲೇ ೫೫ವಿವಿಧ ತಳಿಗಳನ್ನು ಮೂಡುಬಿದಿರೆಯ ಸೋನ್ಸ್ ಫಾರಂನವರ ನಿರ್ದೇಶನದಂತೆ ಬೆಳೆಸಲಾಗಿದೆ. ಇನ್ನಷ್ಟು ಹೆಚ್ಚು ಹೆಚ್ಚು ತಳಿಗಳನ್ನು ಸಂಗ್ರಹಿಸುವ ಪ್ರಯತ್ನದಲ್ಲಿ ಅರಣ್ಯ ಇಲಾಖೆಯಿದೆ. ಜನತೆಯ ಸಹಕಾರವನ್ನು ಇಲಾಖೆ ಯಾಚಿಸಿದೆ.
ಇಂದು ಉದ್ಘಾಟನೆ
ಈ ಸುಂದರ ಬಿದಿರ ಉದ್ಯಾನವನ ಇಂದು ಲೋಕಾರ್ಪಣೆಯಾಗಲಿದೆ. ಅರಣ್ಯ ಸಚಿವರು ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ. ಸಂಜೆ ೫ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here