ಬ್ಯಾಂಕ್ ನಲ್ಲಿ ಹಣ ಇಡಲು ಹೋದವ ಅರೆಸ್ಟ್

0
217

ರಾಷ್ಟ್ರೀಯ ಪ್ರತಿನಿಧಿ ವರದಿ
ನೋಟ್ ಬ್ಯಾನ್ ಹಿನ್ನೆಲೆಯಲ್ಲಿ ಮಾವೋವಾದಿ ಗೆರಿಲ್ಲಾಗಳಿಗೆ ಸೇರಿದ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಜಾರ್ಖಂಡ್ ನ ರಾಂಚಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
 
 
ರಾಂಚಿಯ ಹೊರವಲ ಬೆರೊ ಎಂಬಲ್ಲಿ ಪೆಟ್ರೋಲ್ ಬಂಕ್ ಮಾಲಿಕ ನಂದ ಕಿಶೋರ್ ಎಂಬಾತ 25 ಲಕ್ಷ ರೂಪಾಯಿಗಳನ್ನುಆತ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿಯಿಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಹಿಡಿದಿದ್ದಾರೆ.
 
 
 
ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆ ಹಣ ನಿಷೇಧಿತ ಮಾವೋವಾದಿ ಆರ್ಗನೈಸೇಶನ್ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ(ಪಿಎಲ್ಎಫ್ಐ)ಯ ಮುಖ್ಯಸ್ಥ ದಿನೇಶ್ ಗೊಪೆಯದ್ದು ಎಂದು ತಿಳಿದುಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಬಂದ ಹಣವೆಂದು ಬ್ಯಾಂಕಿನಲ್ಲಿ ಠೇವಣಿಯಿಡುವಂತೆ ಕಿಶೋರ್ ಗೆ ಆತ ಸೂಚಿಸಿದ್ದ.

LEAVE A REPLY

Please enter your comment!
Please enter your name here