ಬ್ಯಾಂಕ್ ಗ್ರಾಹಕರೇ ಎಚ್ಚರ! ನಿಮ್ಮ ಡೆಬಿಟ್ ಕಾರ್ಡ್ ನ್ನು ಪರೀಕ್ಷಿಸಿಕೊಳ್ಳಿ!

0
426

ರಾಷ್ಟ್ರೀಯ ಪ್ರತಿನಿಧಿ ವರದಿ
ವಿವಿಧ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಕಳ್ಳತನವಾಗಿದೆ ಎಂದು ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ವಿವಿಧ ಬ್ಯಾಂಕ್ ಗಳ ಸುಮಾರು 32 ಲಕ್ಷಕ್ಕೂ ಅಧಿಕ ಭಾರತೀಯ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿಯನ್ನು ಹ್ಯಾಕರ್ ಗಳು ಕದ್ದರಬಹುದೆಂದು ಶಂಕಿಸಲಾಗಿದೆ.
 
 
ಈ ಬಗ್ಗೆ ಸ್ವತಃ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆ ಭಾರತೀಯ ಬ್ಯಾಂಕ್ ಗಳಿಗೆ ಎಚ್ಚರಿಕೆ ನೀಡಿದೆ. “ದೇಶದ ಬ್ಯಾಕಿಂಗ್ ಇತಿಹಾಸದಲ್ಲೇ ಅತೀ ದೊಡ್ಡ ಮಾಹಿತಿ ಕಳವಾಗಿದೆ. ಅಲ್ಲದೆ ತನಗೆ ಬಂದ ದೂರಿನನ್ವಯ ಈ ವರೆಗೂ ಸುಮಾರು 1.3 ಕೋಟಿ ಹಣವನ್ನು ಕಳವು ಮಾಡಲಾಗಿದೆ ಎಂದಿದೆ.
 
 
ಆದರೆ ಎನ್ ಪಿಸಿಐ ನೀಡಿರುವ ಮಾಹಿತಿಯನ್ವಯ ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಾದ ಐಸಿಐಸಿಐ, ಎಚ್​ಡಿಎಫ್​ಸಿ, ಎಸ್​ಬಿಐ, ಎಕ್ಸಿಸ್ ಮತ್ತು ಯೆಸ್ ಬ್ಯಾಂಕ್ ಗಳ ಮಾಹಿತಿಗಳನ್ನು ಕದಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ 26 ಲಕ್ಷ ವೀಸಾ ಹಾಗೂ ಮಾಸ್ಟರ್ ಕಾರ್ಡ್, 6 ಲಕ್ಷ ರುಪೇ ಕಾರ್ಡ್ ಗಳ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿದುಬಂದಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಎಸ್​ಬಿಐ ಮುಂಜಾಗ್ರತಾ ಕ್ರಮವಾಗಿ 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಹಿಂಪಡೆದುಕೊಂಡು ಹೊಸ ಕಾರ್ಡ್​ಗಳನ್ನು ನೀಡುತ್ತಿದೆ.

LEAVE A REPLY

Please enter your comment!
Please enter your name here