ಬ್ಯಾಂಕಿಂಗ್ ಕ್ಷೇತ್ರದ ಸುಧಾರಣಾ ಕಾರ್ಯಕ್ರಮ

0
454

 
ಉಡುಪಿ ಪ್ರತಿನಿಧಿ ವರದಿ
ಕಾಲೇಜಿನ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಅಸೋಶಿಯೇಶನ್ ವತಿಯಿಂದ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ(ಕಿಂಅ)ಯ ಸಹಯೋಗದೊಂದಿಗೆ ಕಾರ್ಪೊರೇಶನ್ ಬ್ಯಾಂಕ್ ನ ವಲಯ ಕಛೇರಿ(ಝೋನಲ್ ಆಫೀಸ್) ಉಡುಪಿ ಶಾಖೆಯ ವತಿಯಿಂದ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ’ ಕುರಿತು ಕಾರ್ಯಕ್ರಮ ಆಯೋಜಿಸಲಾಯಿತು.
 
 
 
ವಲಯ ಕಛೇರಿಯ ಪ್ರಬಂಧಕರಾದ ನವೀನ್ ಎಸ್ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದ ಕ್ಷಿಪ್ರ ಬದಲಾವಣೆ, ಹೊಸ ಅವಿಷ್ಕಾರ ಹಾಗೂ ತಂತ್ರಜ್ಞಾನಗಳಾದ ಕೋರ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮುಂತಾದವುಗಳ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳ ಜ್ಞಾನ ಭಂಡಾರವನ್ನು ಹೆಚ್ಚಿಸಿದರು.
 
 
 
ಹಿರಿಯಡಕ ಬ್ಯಾಂಕ್ ನ ಪ್ರಬಂಧಕರಾದ ವೆಂಕಟೇಶ್ ಕಾಮತ್ ಇವರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಿದರು. ಹರೀಶ್ ಪ್ರಬಂಧಕರು ಕಾರ್ಪೊರೇಶನ್ ಬ್ಯಾಂಕ್ ಉಡುಪಿ ಹಾಗೂ ಪುರುಷೋತ್ತಮ್ ಶೆಟ್ಟಿ ಅಸಿಸ್ಟೆಂಟ್ ಮ್ಯಾನೇಜರ್ ಕಾರ್ಪೊರೇಶನ್ ಬ್ಯಾಂಕ್ ಉಡುಪಿ ಇವರು ಉಪಸ್ಥಿತರಿದ್ದರು.
 
 
 
 
ಕಾಲೇಜಿನ ಪ್ರಾಂಶುಪಾಲರಾದ ಸೋಜನ್ ಕೆ. ಜಿ. ಅಧ್ಯಕ್ಷತೆ ವಹಿಸಿ, ವಾಣಿಜ್ಯಶಾಸ್ತ್ರ ಸಹಪ್ರಾಧ್ಯಾಪಕರಾದ ಸುಷ್ಮಾ ರಾವ್ಕೆ. ಎಲ್ಲರನ್ನು ಸ್ವಾಗತಿಸಿದರು. ಮಮತಾ ಅರ್ಥಶಾಸ್ತ್ರ ಉಪನ್ಯಾಸಕಿ ವಂದಿಸಿದರು. ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here