ಅಂಕಣಗಳು

ಬೇಹುಗಾರಿಕೆಗೆ ಭಾರತದಿಂದ್ಯಾಕಿಷ್ಟು ಮೌನ?

ಇತ್ತೆಚೆಗೆ Sarahah ಅನ್ನೋ ಜಾಲತಾಣ ಬಹಳಷ್ಟು ಅಲೆ ಎಬ್ಬಿಸಿತ್ತು, ನೀವು ಏನನ್ನದಾರು ಕಳುಹಿಸಬಹುದು ಆದರೆ ಯಾರು ಕಳುಹಿಸಿದ್ದೆಂದು ಓದಿದವನಿಗೆ ಗೊತ್ತಾಗುತ್ತಿರಲಿಲ್ಲ ಕೆಲವೇ ಕೆಲವು ದಿನಗಳಲ್ಲಿ ಕೋಟಿಗಟ್ಟಲೆ ಖಾತೆಗಳನ್ನ ಗಿಟ್ಟಿಸಿಕೊಂಡ ಖ್ಯಾತಿ ಈ ಜಾಲತಾಣದ್ದಾಯ್ತು, ಆದರೆ ಕೆಲವೆ ಕೆಲವು ದಿನಗಳಲ್ಲಿ ಒಂದು ಮಾಹಿತಿ ಬಹಿರಂಗವಾಗಿತ್ತು ಯಾರ್ಯಾರು ಖಾತೆ ತೆರೆದಿದ್ದಾರೋ ಅವರೆಲ್ಲರ ಖಾಸಗಿ ಮಾಹಿತಿಗಳನ್ನ‌ ಯಾರಿಗೂ ತಿಳಿಯದಂತೆ ರಹಸ್ಯವಾಗಿ ಸಂಗ್ರಹಿಸಲಾಗುತ್ತಿತ್ತೆಂದು,ಇದೆಲ್ಲರ ನಡುವೆ ಚೀನಾ ಮೂಲದ ವಿ ಚಾಟ್ ಇದೀಗ ಸುದ್ದಿ ಮಾಡಿದೆ,ತಾನು ಜನರ ಖಾಸಗಿತನವನ್ನ ಕದ್ದು ಗೂಡಾಚಾರಿಕೆ ಮಾಡುತ್ತಿರುವುದನ್ನ ಒಪ್ಪಿಕೊಂಡಿದೆ,ಚೀನಾ ಗೌರ್ಮೆಂಟ್ ವೀ ಚಾಟ್ನ ಖಾತೆಗಳನ್ನ ಕದ್ದೋದುತ್ತಿದೆ! ನಾವು ಸಾಮಾಜಿಕ ಜಾಲತಾಣದಲ್ಲಿ ಖಾಸಗಿತನ ಕದಿಯಬಾರದೆಂದು ಅತಿ ಕ್ಲಿಷ್ಟ ಪಾಸವರ್ಡಗಳ ಹಾಕಿದ್ದೆ ಬಂತು, ನಮಗರಿಯದೆ ಪೇಸ್ಬುಕ್ಕಿನಲ್ಲಿ ನಾವು ಬರೆಯೋ ಕಮೆಂಟ್ಗಳು, ಮೆಸೆಜ್ ಗಳು, ಸ್ಕೈಪ್ನ ವಿಡಿಯೋ ಕಾಲ್ಗಳು, ಗೂಗಲ್ ಮೈಲ್ನಲ್ಲಿ ತಳುಕು ಹಾಕಿಕೊಂಡಿರುವ ನಿಮ್ಮ ಕಾಂಟ್ಯಾಕ್ಟ್ ಲೀಸ್ಟ್, ಎಲ್ಲವೂ ನಿಮಗರಿಯದೆ ಒಬ್ಬ ನೋಡುತ್ತಿದ್ದಾನೆ ಆತ ಬೇರಾರು ಅಲ್ಲ “ಅಮೇರಿಕಾ” ಎಂಬ ದೊಡ್ಡಣ್ಣ, ಭಾರತದ ಸುಮಾರು 6.3 ಬಿಲಿಯನ್ ರಹಸ್ಯ ಮಾಹಿತಿಗಳನ್ನ ಇದೀಗಾಗಲೆ ಅಮೇರಿಕಾ ಸಂಗ್ರಹಿಸಿ ಇಟ್ಟುಕೊಂಡಿದೆ,ಇದರಲ್ಲಿ ನಿಮ್ಮ ಆಧಾರವಾಗಿರುವ ಆಧಾರ್ ಕೂಡ ಹೊರತಾಗಿಲ್ಲ ಇತ್ತೆಚೆಗೆ ಆಧಾರ್ ಮಾಹಿತಿ ಲೀಕ್ ಆಗಿದ್ದು ತಿಳಿದಿತ್ತು ಅದನ್ನ ಕದಿಯುತ್ತಿರೋದು ಅಮೆರಿಕಾ ಎಂಬುದು ತಿಳಿದ ವಿಚಾರ! ಅಮೇರಿಕಾ ತನ್ನ ದೇಶದ ರಕ್ಷಣೆಗಾಗಿ ಪೇಸ್ಬುಕ್ ಖಾತೆಗಳನ್ನ ಸ್ಕ್ಯಾನ್ ಮಾಡುತ್ತಿದೆ, ಈಗಾಗಲೆ ಬಹಳಷ್ಟು ದಾಳಿಯನ್ನ ತಡೆಗಟ್ಟಿದೆ, ಭಾರತ ಸೇರಿದಂತೆ ಕೆನಡಾ, ಆಸ್ಟ್ರೇಲಿಯಾ ಹೀಗೆ ಬಹಳಷ್ಟು ರಾಷ್ಟ್ರಗಳ ಮಾಹಿತಿ ಅಮೇರಿಕಾದ ತೆಕ್ಕೆಗೆ ಬೀಳುತ್ತಿವೆ, ಚೀನಾಕ್ಕೆ ಇದು ಬಹಳ ಹಿಂದೆಯೆ ತಿಳಿದಿತ್ತು ಚೀನಾದಲ್ಲಿ ಅಮೇರಿಕನ್ ಮೂಲದ ಗೂಗಲ್ ಸೇರಿದಂತೆ ಪೇಸ್ಬುಕ್ ಇನ್ನಿತರೆ ಸಾಮಾಜಿಕ ಜಾಲತಾಣಗಳ ಬದಲು ಅವರದ್ದೆ ಬೈಡು, ವೀ ಚಾಟ್ ನಂತಹ ಸಾಮಾಜಿಕ ಜಾಲತಾಣ ಬಳಸಲಾಗುತ್ತಿದೆ, ಅಷ್ಟೆಯಾಕೆ ಚೀನಿಯರು ಗೂಗಲ್‌ ಕ್ರೋಮ್ ಬದಲು ಯುಸಿ ಬ್ರೌಸರ್, ಬೈಡು ಬ್ರೌಸರ್ಗಳನ್ನ ಬಳಸುತ್ತಾರೆ, ಅವು ಸೇಫಾಗಿಲ್ಲ, ಚೀನಾ ಗವರ್ನಮೆಂಟ್ ಅವೆಲ್ಲವನ್ನು ಸ್ಕ್ಯಾನ್ ಮಾಡುತ್ತಿದೆ, ಭಾರತದಲ್ಲೂ ಚೀನಾ ಬೇಹುಗಾರಿಕೆ ಬೇರುರಿದೆ, ಯುಸಿ ಬ್ರೌಸರಿನಲ್ಲಿ‌ ಸರ್ಚ್ ಮಾಡೋ ಇಂಚಿಂಚು ಮಾಹಿತಿಗಳು ಚೀನಾದ ಪಾಲಾಗುತ್ತವೆ, ಇನ್ನೂ ಚೀನಾ ಮಲ್ವೆರ್ಗಳನ್ನ ಮೋಬೈಲ್ ಪೋನ್ ಹಾಗೂ ಕಂಪ್ಯೂಟರಿಗೆ ಇಂಜೆಕ್ಟ್ ಮಾಡಲಾಗುತ್ತೆ ನಿಮಗರಿಯದೆ ನಿಮ್ಮ ಖಾಸಗಿತನ ಅಮೇರಿಕಾ, ಚೀನಾ ಪಾಲಾಗುತ್ತಿವೆ, ಭಾರತ ಎಡವುತ್ತಿರೋದು ಇಲ್ಲೇನೆ ನಮಗೆ ನಮ್ಮದೆ ಆದ ಸ್ವಂತ ಜಾಲತಾಣವಿರಲಿ ನಮ್ಮದೆ ಆದ ಸ್ವಂತ ಸರ್ಚ್ ಇಂಜಿನ್ ಕೂಡ ಇಲ್ಲ! ಇದ್ದರೂ ಬಳಸೋರಿಲ್ಲ, ಪಾಪ ನಮ್ಮ ಜನರಿಗೇನು ಗೊತ್ತು ಗೂಗಲ್, ಸ್ಕೈಪ್, ವಿ ಚಾಟ್ ನಮ್ಮನ್ನರಿಯದೆ ನಮ್ಮ ಮಾಹಿತಿ ಕದಿಯುತ್ತಿರೋದು, ಭಾರತದಲ್ಲಿ ಬಾಂಬ್ ಬ್ಲಾಸ್ಟ್ ಆದರೆ ಉಗ್ರನ ರೇಖಾ ಚಿತ್ರ ಬರೆದು ಪೇಸ್ಬುಕ್,ವಾಟ್ಸಾಪ್ ಗೆ ಕಳುಹಿಸಿ ಮಾಹಿತಿ ಕೊಟ್ಟವರಿಗೆ ಇಂತಿಷ್ಟು ಕೊಡೋದಾಗಿ ಆಮಿಷ ಒಡ್ಡುತ್ತಾರೆ, ಅದೆಷ್ಟೋ ರಹಸ್ಯ ತನಿಖೆಗಳ ಮಾಹಿತಿಗಳನ್ನ ಭಾರತೀಯ ಬೇಹುಗಾರರು ಭಾರತಕ್ಕೆ ಕಳಿಸೋದು ಜಿ ಮೇಲ್, ಹಾಟ್ ಮೇಲ್ ನಂತಹ ಜಾಲತಾಣಗಳಿಂದ ವಿಪರ್ಯಾಸ ನೋಡಿ ಇವೆಲ್ಲವನ್ನೂ ಅಮೇರಿಕಾ ಕದ್ದೋದಿ ಬಿಡುತ್ತೆ! ಇನ್ನು ಚೈನಾವಂತು ಭಾರತದ ಮೇಲೆ ಕಣ್ಣಿಟ್ಟು ನೋಡುತ್ತಿದೆ ಭಾರತೀಯರು ಬಳಸುವ ಯುಸಿ‌ ಬ್ರೌಸರ್, ಬೈಡು, ಸಿ ಕ್ಲೀನರ್, ಚೀತಾ ಹೀಗೆ ಅದೆಷ್ಟೋ ಚೀನಾ ಮೂಲದ ಸಾಪ್ಟವೇರ್ಗಳು ರಹಸ್ಯ ಮಾಹಿತಿಯನ್ನ ಚೀನಿ ಗೌರ್ಮೆಂಟಿಗೆ ನಿಡುತ್ತಿದೆ, ಅಮೆರಿಕೆ ಮುಂದೆ ಬಂದದ್ದು ಹೇಗೆ ಅಂತ ಒಮ್ಮೆ ಇತಿಹಾಸ ನೋಡಿದರೆ ಯುರೋಪ್ ಒಕ್ಕೂಟಗಳ ಮೇಲೆ “ಎಲೆಕಾನ್” ಕಂಪ್ಯೂಟರ್ ಎಂಬ ಬೇಹುಗಾರಿಕೆ ಪ್ರೋಗ್ರಾಂನ ಮೂಲಕ ನಡೆಸಿದ ಬೇಹುಗಾರಿಕೆಯಿಂದ, ಇನ್ನೂ ಭಾರತದ ಮೋಬೈಲ್ ಮಾರುಕಟ್ಟೆಯಲ್ಲಿ ಚೀನಾ ಪ್ರಭಾವ ಜಾಸ್ತಿನೆ ಇದೆ, ಈ ಹಿಂದೆ ಅಮೆರಿಕಾ ನಡೆಸಿದ ಕಾರ್ಯಾಚರಣೆಯಲ್ಲಿ “ಹುವಾಇ” ಅಥವಾ “ಆನರ್” ಕಂಪನಿ ರಹಸ್ಯ ಮಾಹಿತಿಯನ್ನ ಕದಿಯುತ್ತಿರೋದು ಗೊತ್ತಾಗಿತ್ತು,ಅದರ ಬಗ್ಗೆ ತಲೆಕೆಡಿಸಿಕೊಂಡಿದ್ದ ಅಮೆರಿಕಾ ಆಳವಾಗಿ ಕಾರ್ಯಾಚರಣೆ ಮಾಡಿದಾಗ “ಹುವಾಇ” ಚಿನಾದ ಪಿಪಲ್ ಲಿಬರೇಷನ್ ಆರ್ಮಿಯ ನಿಕಟವರ್ತಿ ರೇನ್ ಜಿಂಗ್ ಫೆಯದ್ದೆಂದು ತಿಳಿದು ಹುವಾಇಗೆ ಗೇಟ್ ಪಾಸ್ ನೀಡಿತ್ತು! ಭಾರತದಲ್ಲಿ‌ ಈಗಲೂ ಹುವಾಇಯಂತೆ ಸುಮಾರು ೫೦ಕ್ಕೂ ಹೆಚ್ಚು ಚೀನಾ ಬ್ರಾಂಡ್ಗಳಿವೆ ಕ್ಸಿಯೋಮಿ,ಲೇಎಕೋ, ಕೂಲ್ ಪ್ಯಾಡ್, ಬ್ಲೂ,ಜಿಯೋನಿ,ವಿವೋ, ಒಪ್ಪೋ,ಒನ್ ಪ್ಲಸ್ ಎಲ್ಲವೂ ಚೀನಾ ಮೂಲದ್ದೆ ಅಷ್ಟೆಯಾಕೆ ಒಪ್ಪೋ, ವಿವೋ, ಒನ್ ಪ್ಲಸ್ ನೋಡಲು ಸ್ಪರ್ದಿಗಳೆನಿಸಿದರು ಅವೆಲ್ಲವೂ ಒಂದೆ ಕಂಪನಿಗೆ ಸೇರಿದ್ದು, ಆ ಕಂಪನಿ ಬೇರಾವುದು ಅಲ್ಲ “BBK ಇಲೆಕ್ಟ್ರಾನಿಕ್” ಇತ್ತೆಚೆಗೆ ಭಾರತ ಸರ್ಕಾರ ಬೇಹುಗಾರಿಕೆಯ ಸಂಶಯ ವ್ಯಕ್ತಪಡಿಸಿ ಸುಮಾರು ೨೭ ಮೋಬೈಲ್ ಕಂಪನಿಗಳಿಗೆ ಮಾಹಿತಿ ಕೇಳಿತ್ತು ಆದರೆ ಸರಿ ಮಾಹಿತಿ ನೀಡಿದ್ದು ಕೆಲವಷ್ಟು ಮಾತ್ರ! ಏನೆ ಇರಲಿ ನಾವು ಸಾಮಾಜಿಕ ಜಾಲತಾಣ ಎಷ್ಟೇ ಸೇಫ್ ಎನಿಸಿದರು ಅಷ್ಟೆ‌ ನಮ್ಮ ಎಲ್ಲ ಮಾಹಿತಿಗಳು ಲೀಕ್ ಆಗೆ ಆಗುತ್ತವೆ, ಅದರಲ್ಲೂ ದೇಶದ ಇಂಚಿಚು ಮಾಹಿತಿಯೂ ಅಮೇರಿಕಾ,ಚೀನಾ,ರಷ್ಯಾದಂತಹ ರಾಷ್ಟ್ರಗಳು ಎಗ್ಗಿಲ್ಲದೆ ಕದಿಯುತ್ತುವೆ,ಆದರೂ ನಮ್ಮವರು ತಲೆ ಕೆಡಿಸಿಕೊಂಡಿಲ್ಲ! ಇದೆಲ್ಲದರ ನಡುವೆ ನಮ್ಮ ಅತಿ ಹೆಚ್ಚು ರಹಸ್ಯ ಕದಿಯುತ್ತಿರೋದು ಇಂಚಿಚು ದಾಖಲೆ,ಲೊಕೆಷನ್ ಎಲ್ಲವನ್ನ ಕಲೆಆಕುತ್ತಿರೋದು ಅಮೆರಿಕಾ ಆದರೆ ಭಾರತವಿನ್ನೂ ಮೌನ ಮುರಿದಿಲ್ಲ, ಇದೀಗ ಚೀನಾ ಹೊಸತಾಗಿ ಸೇರ್ಪಡೆಯಾಗಿದೆ ಈಗಲಾದರೂ ಭಾರತ ಎಚ್ಚೆತ್ತು ಕೊಳ್ಳುತ್ತೋ ಅಥವಾ ಜಾಣಕುರುಡನಾಗಿ ಸುಮ್ಮನಿರುತ್ತೋ ನಾ ಕಾಣೆ!

ನಾಗರಾಜ್ ಬಾಳೆಗದ್ದೆ

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here