ಬೇವು-ಬೆಲ್ಲ: ಫೆಬ್ರವರಿ-2016

0
665

ವಾರ್ತೆ ಹಿನ್ನೋಟ
2016 ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಹೊಸ ವರುಷದ ಸ್ವಾಗತಕ್ಕೆ ನಾಡು ಸಿದ್ಧವಾಗುತ್ತಿದೆ. ಈ ಶುಭಾವಸರದಲ್ಲಿ ಕಳೆದುಹೋದ ದಿನಗಳ ಮೆಲುಕು ಹಾಕುತ್ತಾ ನಾಡು ಕಂಡ `ಬೇವು ಬೆಲ್ಲದ’ ಸವಿಯನ್ನು ಮತ್ತೆ ನೆನಪಿಸುತ್ತಾ ಇದ್ದೇವೆ…ನೀವೂ ನಿಮ್ಮ ನೆನಪಿನ ಬುತ್ತಿಯನ್ನೊಮ್ಮೆ ಬಿಚ್ಚಿಡಬಹುದು…
 
 
2016ರ ಮೊದಲ ತಿಂಗಳು ಮಿಶ್ರಫಲಬಾಗಿದ್ದು. ಎರಡನೇ ತಿಂಗಳಲ್ಲೂ ಹೌದು ಹಲವು ಘಟನೆಗಳು ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ದಾಖಲಾಗುವಂತಹುದಾದುರೆ ಇನ್ನು ಕೆಲವು ಕರಿಛಾಯೆ ಮೂಡಿಸುವಂತಹದು ಎಂದರೆ ತಪ್ಪಲ್ಲ.
2016ರ ಫೆಬ್ರವರಿ ತಿಂಗಳು ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ವರ್ಷದ ಪ್ರಾರಂಭದ ತಿಂಗಳಲ್ಲಿ ಪ್ರಮುಖ ಹಲವು ಸಂತಸದ ವಿಷಯಗಳು ನಡೆದರೆ ಉಗ್ರರದಾಳಿ, ಅಪಘಾತಗಳು, ಸೇರಿದಂತೆ ಇನ್ನು ಹಲವು ಘಟನೆಗಳು ಮನಕಲಕುವಂತಹುದು. ವಾಣಿಜ್ಯ ದೃಷ್ಟಿಯಲ್ಲಿ ಉತ್ತಮ, ಕೃಷಿಕರಿಗೆ ಒಂದಿಷ್ಟು ವರದಾನ ಎಂದರೂ ತಪ್ಪಲ್ಲ.ಕ್ರಿಕೆಟ್ ಹವಾ ಜೋರಾಗಿಯೇ ಇತ್ತು. ಇರಲಿ…ಏನೆಲ್ಲಾ ಆಯಿತು 2ನೇ ತಿಂಗಳು ಎಂಬುದರ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…
 
ನಂಬರ್ 1 ಸ್ಥಾನಕ್ಕೇರಿದ ಭಾರತ
3 ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಕೈವಶ ಮಾಡಿಕೊಂಡ ಭಾರತ ತಂಡ, ಅಂತಾರಾಷ್ಟ್ರೀಯ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ಅಂಕಗಳನ್ನು 2032ಕ್ಕೆ ಏರಿಕೆ ಮಾಡಿಕೊಂಡಿತು. ಅಲ್ಲದೆ ಆಸ್ಟ್ರೇಲಿಯಾ ತಂಡವನ್ನು ವೈಟ್ ವಾಶ್ ಮಾಡುವ ಮೂಲಕ ತನ್ನ ರೇಟಿಂಗ್ ಅನ್ನು 120ಕ್ಕೇರಿಸಿಕೊಂಡ ಭಾರತ ಟಿ20ಯಲ್ಲಿ ಅಗ್ರಸ್ಥಾನಕ್ಕೇರಿತ್ತು.
 
 
ಶೃತಿ ಮುಡಿಗೆ ಬಿಗ್ ಬಾಸ್ ಕಿರೀಟ
ಬಿಗ್ ಬಾಸ್ ಸೀಸನ್-3ಗೆ ವರ್ಣರಂಜಿತ ತೆರೆ ಬಿದ್ದಿತ್ತು. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ – 3ನೇ ಸೀಸನ್ ನಲ್ಲಿ ನಟಿ ಶ್ರುತಿ ಅವರು ತನ್ನ ಮುಡಿಗೇರಿಸಿಕೊಂಡಿದ್ದರು. ರನ್ನರ್ ಅಪ್ ಆಗಿ ನಟ ಚಂದನ್ ಪ್ರಬಲ ಸ್ಪರ್ಥೆ ನೀಡಿದ್ದರು.
 
 
ಕಿರಣ್ ಬೇಡಿ ಪತಿ ನಿಧನ
ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಪತಿ ಬ್ರಿಜ್ ಬೇಡಿ ಭಾನುವಾರ ವಿಧಿವಶರಾಗಿದ್ದರು.
 
 
ಸಿರಿಯಾದಲ್ಲಿ ಐಸಿಸ್ ಅಟ್ಟಗಾಸ
ಐಎಸ್ ಉಗ್ರ ಸಂಘಟನೆ ಬಾಂಬ್ ದಾಳಿ ನಡೆಸಿದ ಪರಿಣಾಮ 45 ಮಂದಿ ಸಾವನ್ನಪ್ಪಿದ್ದ ಘಟನೆ ಸಿರಿಯಾ ರಾಜಧಾನಿ ಡಮಾಸ್ಕಸ್ ನಲ್ಲಿ ನಡೆದಿದೆ.
 
 
ತೈಲ ಬೆಲೆಯಲ್ಲಿ ಇಳಿಕೆ
ಗ್ರಾಹಕರಿಗೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೆರೇಷನ್ ತಿಳಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 4 ಪೈಸೆ ಹಾಗೂ ಡೀಸೆಲ್ ದರ 3 ಪೈಸೆ ಇಳಿಕೆ ಮಾಡಲಾಗಿತ್ತು.
ಭ್ರೂಣ ಪರೀಕ್ಷೆ ಕಡ್ಡಾಯ?
ದೇಶದಲ್ಲಿ ಭ್ರೂಣ ಪರೀಕ್ಷೆ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕೇಂದ್ರ ಸಂಪುಟದೆದುರು ಮನೇಕಾ ಗಾಂಧಿ ಪ್ರಸ್ತಾಪಿಸಿದ್ದರು.
ಅತಿಕಿರಿಯ ಜಿಹಾದಿ ಬಂಧನ
ಉತ್ತರಪ್ರದೇಶದಲ್ಲಿ ಅತಿಕಿರಿಯ ಶಂಕಿತ ಜಿಹಾದಿಯನ್ನು ಬಂಧಿಸಲಾಗಿತ್ತು. ಐಸಿಸ್ ಉಗ್ರರ ಕಾರ್ಯಚಟುವಟಿಕೆಗೆ ನೆರವಾಗುತ್ತಿದ್ದ ಎಂಬ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು. ಮುಂಬೈ ಎಟಿಎಸ್, ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
 
 
ಖೇರ್ ಗಿಲ್ಲ ಪಾಕ್ ವೀಸಾ
ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಗೆ ವೀಸಾ ನೀಡಲು ಪಾಕಿಸ್ತಾನ ಸರ್ಕಾರ ನಿರಾಕರಣೆ ಮಾಡಿತ್ತು. ಇದರಿಂದ ಪಾಕ್ ಹೈಕಮೀಷನ್ ನಡೆಗೆ ಅನುಪಮ್ ಖೇರ್ ಅಸಮಾಧಾನಗೊಂಡಿದ್ದರು.
 
 
ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದ ಗಡ್ಕರಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಳ್ಳುತ್ತಿರುವ ಇನ್ ವೆಸ್ಟ್ ಕರ್ನಾಟಕ-2016 ಸಮಾವೇಶಲ್ಲಿ ನಡೆಯುತ್ತಿರುವ ವಸ್ತುಪ್ರದರ್ಶನಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದರು.
 
 
ಸರ್ದಾರ್ ಗೆ ಸಂಕಷ್ಟ
ಹಾಕಿ ತಂಡದ ನಾಯಕ ವಿರುದ್ಧ ಲೈಂಗಿಕ ಕಿರುಕುಳ ಆರೋಪ ದಾಖಲಾಗಿತ್ತು. ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಆರೋಪ ದಾಖಲಾಗಿದೆ. ಸಿಂಗ್ ವಿರುದ್ಧ 21ವರ್ಷದ ಯುವತಿ ಲೈಂಗಿಕ ಕಿರುಕುಳ ಆರೋಪದ ದೂರು ದಾಖಲಿಸಿದ್ದರು.
 
 
ವಿದ್ಯುಕ್ತ ಚಾಲನೆ
‘ಇನ್ವೆಸ್ಟ್ ಕರ್ನಾಟಕ’ ಸಮಾವೇಶ-2016ಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಮಾವೇಶವನ್ನು ಉದ್ಘಾಟಿಸಿದ್ದರು.
10 ಯೋಧರು ನಾಪತ್ತೆ
ಹಿಮಪಾತದಲ್ಲಿ 10 ಯೋಧರು ಸಿಲುಕಿಕೊಂಡ ಘಟನೆ ಸಿಯಾಚಿನ್ ನಲ್ಲಿ ನಡೆದಿತ್ತು. ಮದ್ರಾಸ್ ರೆಜಿಮೆಂಟ್ ಗೆ ಸೇರಿದ 10 ಯೋಧರು ಹಿಮಪಾತದಿಂದ ನಾಪತ್ತೆಯಾಗಿದ್ದಾರೆ.
 
 
ಬುಲೆಟ್ ಪ್ರಕಾಶ್ ಗೆ ಬೆದರಿಕೆ
ನಟ ಬುಲೆಟ್ ಪ್ರಕಾಶ್ ಜೀವ ಬೆದರಿಕೆ ಆರೋಪದಲ್ಲಿ ದಿನಕರ ತೂಗುದೀಪ್ ವಿರುದ್ಧ ದೂರು ದಾಖಲಾಗಿತ್ತು. ಬುಲೆಟ್ ಪ್ರಕಾಶ್ ಬೆದರಿಕೆ ಹಿನ್ನೆಲೆಯಲ್ಲಿ ದಿನಕರ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
 
 
ಸಂಧಾನ ಸಫಲ
ನಟ ಬುಲೆಟ್ ಪ್ರಕಾಶಗ ಗೆ ಜೀವ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಅಮೃತಹಳ್ಳಿ ಠಾಣೆಯಲ್ಲಿ ನಡೆದ ಒಂದು ತಾಸಿನ ಸಂಧಾನ ಸಭೆ ಸಫಲವಾಗಿತ್ತು. ಇನ್ಸ್ ಪೆಕ್ಟರ್ ಶ್ರೀನಿವಾಸರಾಜು ಸಮ್ಮುಖದಲ್ಲಿ ಬುಲೆಟ್ ಪ್ರಕಾಶ್, ದಿನಕರ್ ತೂಗುದೀಪ್ ಮಧ್ಯೆ ನಡೆದ ಸಂಧಾನ ಸಭೆ ಸಫಲವಾಗಿತ್ತು.
ಸಾ.ಶಿ.ಮರುಳಯ್ಯ ನಿಧನ
ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ(85) ವಿಧಿವಶರಾಗಿದ್ದರು. ಸಾಸಲು ಶಿವರುದ್ರಯ್ಯ ಮರುಳಯ್ಯ ಅವರು ಇಂದು ಬೆಳಗ್ಗೆ 8ಗಂಟೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
 
 
ಹಳಿ ತಪ್ಪಿದ ಎಕ್ಸ್ ಪ್ರೆಸ್ ರೈಲು
ಐಲ್ಯಾಂಡ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪಂಜೂರ್ ಗ್ರಾಮದ ಬಳಿ ಸಂಭವಿಸಿತ್ತು. ಕನ್ಯಾಕುಮಾರಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಎಸ್ 4 – ಎಸ್ 9 ವರೆಗಿನ 6 ಬೋಗಿಗಳು ಬೆಳಿಗ್ಗೆ 4 :15 ವೇಳೆ ಹಳಿತಪ್ಪಿದ್ದು, ರೈಲು ಹಳಿತಪ್ಪಿದ ಪರಿಣಾಮ 15 ಪ್ರಯಾಣಿಕರು ಗಾಯಗೊಂಡಿದ್ದರು.
ಅನುಮಾನಾಸ್ಪದ ಡ್ರೋಣ್ ಪತ್ತೆ
ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದ ಅರಮನೆ ಮೈದಾನದಲ್ಲಿ ಯಾವುದೇ ಅನುಮತಿ ಇಲ್ಲದೆ, ಹಾರಾಡುತ್ತಿದ್ಡ ಡ್ರೋಣ್ ಅನ್ನು ಪೊಲೀಸರು ವಶಕ್ಕೆ ಪಡೆದಿತ್ತು.
ಮಹಾಮಾರಿ ಝೀಕಾ…
ಈ ಹಿಂದೆ ಎಬೊಲಾ ವೈರಸ್ ವಿಶ್ವದ ನಿದ್ದೆಗೆಡಿಸಿತ್ತು. ಈಗ ಜಗತ್ತಿನಾದ್ಯಂತ ಝೀಕಾ ವೈರಸ್ ನ ಭಯ ಆವರಿಸಿದೆ. ಬ್ರೆಜಿಲ್ ನಿಂದ ಝೀಕಾ ಅಟ್ಟಹಾಸ ಶುರುವಾಗಿದೆ. ನಂತರ ಆಫ್ರಿಕಾ, ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳಲ್ಲಿ ವ್ಯಾಪಿಸತೊಡಗಿದೆ.
ನೌಕಾ ಸಮಾರಾಭ್ಯಾಸ
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನೌಕಾ ಸಮರಾಭ್ಯಾಸ ಆರಂಭವಾಗಿತ್ತು. ಭಾರತ ಸೇರಿ 54 ವಿವಿಧ ದೇಶಗಳ ನೌಕಾಪಡೆಗಳು ಭಾಗಿಯಾಗಿತ್ತು. ಫೆಬ್ರವರಿ 4ರಿಂದ ಆರಂಭವಾಗಿರುವ ನೌಕಾ ಸಮಾರಾಭ್ಯಾಸ ಫೆ.8ರವರೆಗೆ ನಡೆಯಿತ್ತು.
ಹೈದ್ರಾಬಾದ್ ಪಾಲಾದ ಯುವಿ
ಐಪಿಎಸ್ ಸೀಸನ್-9 ಅವೃತ್ತಿಗಾಗಿ ಆಟಗಾರರ ಹರಾಜು ನಡೆದಿದೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದೆ. ಬಿಡ್ಡಿಂಗ್ ನಲ್ಲಿ 311 ಆಟಗಾರರು ಭಾಗಿಯಾಗಿದ್ದರು.
ತೈವಾನ್ ನಲ್ಲಿ ಭೂಕಂಪನ
ತೈವಾನ್ ನಲ್ಲಿ ಭೂಕಂಪ ಸಂಭವಿಸಿದೆ. ದಕ್ಷಿಣ ಭಾಗದಲ್ಲಿ ಶನಿವಾರ ಬೆಳಗ್ಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ರಷ್ಟು ಕಂಪನದ ತೀವ್ರತೆ ದಾಖಲಾಗಿತ್ತು.
 
 
ನೇಪಾಳದಲ್ಲಿ ಭೂಕಂಪನ
ಈಗಾಗಲೇ ಭೂಕಂಪನದಿಂದ ತತ್ತರಿಸಿದ ಹೋಗಿದ್ದ ಕಠಂಡುವಿನಲ್ಲಿ ಮತ್ತೊಮ್ಮೆ ಆತಂಕ ಶುರುವಾಗಿತ್ತು. ಶುಕ್ರವಾರ ತಡರಾತ್ರಿ ನೇಪಾಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿತ್ತು ಭೂಕಂಪದ ಮೂಲ ಕೇಂದ್ರ ಕಠ್ಮಂಡುವಿನಿಂದ 16 ಕಿ.ಮೀ ದೂರದಲ್ಲಿತ್ತು.
ಪಾಕ್ ಬೋಟ್ ವಶ
ಭಾರತ ಸಮುದ್ರದ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪಾಕ್ ಬೋಟ್ ಮತ್ತು ಬೋಟ್ ನಲ್ಲಿದ್ದ ಸಿಬ್ಬಂದಿಗಳನ್ನು ವಶಪಡಿಸಲಾಗಿತ್ತು. ಪಾಕಾ ಬೋಟ್ ಗುಜರಾತ್ ಸುಮುದ್ರ ತೀರ ಪ್ರವೇಶಿಸಿತ್ತು. ಕಾರ್ಯಾಚರಣೆ ನಡೆಸಿದ್ದ ಗುಜರಾತ್ ಕರಾವಳಿ ಪಡೆ ಪಾಕ್ ಬೋಟ್ ನಲ್ಲಿದ್ಗ 11 ಮಂದಿ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಸ್ಮಗ್ಲರ್ ಗಳ ಹತ್ಯೆ
ಭಾರತ – ಪಾಕ್ ಗಡಿಯಲ್ಲಿ ನಾಲ್ವರು ಅಂತಾರಾಷ್ಟ್ರೀಯ ಸ್ಮಗ್ಲರ್ ಗಳ ಹತ್ಯೆಯಾಗಿದೆ. ಗಡಿಯಲ್ಲಿ ಹೆರಾಯಿನ್ ಸ್ಮಗ್ಲಿಂಗ್ ನಡೆಸುತ್ತಿದ್ದ ವೇಳೆ ಹತ್ಯೆ ಮಾಡಲಾಗಿತ್ತು. ಪಂಜಾಬ್ ಗಡಿಯಲ್ಲಿ ಖೇಮ್ ಕರಣ್ ಗಡಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಸ್ಮಗ್ಲರ್ ಗಳಲ್ಲಿ ಇಬ್ಬರು ಪಾಕಿಸ್ತಾನಿಗಳು ಮತ್ತಿಬ್ಬರು ಭಾರತೀಯರಗಿದ್ದಾರೆ. ಭಾರತ – ಪಾಕ್ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಯತ್ನಿಸಿದ್ದಾರೆ. 4 ಮಂದಿ ಸ್ಮಗ್ಲರ್ ಗಳನ್ನು ಬಿಎಸ್ಎಫ್ ತಂಡ ಹೊಡೆದುರುಳಿಸಿದೆ. ಅಲ್ಲದೆ 10ಕೆಜಿ ಹೆರಾಯಿನ್ ಬಿಎಸ್ಎಫ್ ಯೋಧರು ವಶಪಡಿಸಿಕೊಂಡಿದ್ದರು.
ಶಾಲೆಗೆ ನುಗ್ಗಿದ ಚಿರತೆ
ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನೂರಾರು ಜನರು ಚಿರತೆ ನೋಡಲು ಶಾಲಾ ಆವರಣಕ್ಕೆ ಆಗಮಿಸಿದ್ದರು.
ತುರ್ತು ರಕ್ಷಣೆಗೆ162 ಶ್ವಾನಗಳ ಟೀಮ್ ರೆಡಿ
ಭೂಕಂಪದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭ ಕುಸಿದು ಬೀಳುವ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ತುರ್ತು ರಕ್ಷಣೆಗೆ ಅನುಕೂಲವಾಗುವಂತೆ, ಅತ್ಯಂತ ಕಠಿಣ ತರಬೇತಿ ಪಡೆದ 162 ಶ್ವಾನಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ(ಎನ್‌ಡಿಆರ್‌ಎಫ್) ದಳಕ್ಕೆ ಸೇರ್ಪಡೆ ಮಾಡಲು ಸರ್ಕಾರ ಮುಂದಾಗಿತ್ತು.
 
 
ಕಾನ್ಫೆರೆನ್ಸ್ ನಲ್ಲಿ ಹೆಡ್ಲಿ
26/11 ರಂದು ಮುಂಬೈ ಮೇಲೆ ಉಗ್ರರ ದಾಳಿ ಪ್ರಕರಣದಲ್ಲಿ ವೀಡಿಯೋ ಕಾನ್ಫೆರೆನ್ಸ್ ಮೂಲಕ ಡೇವಿಡ್ ಹೆಡ್ಲಿಯಿಂದ ಕೆಲವು ಸಾಕ್ಷ್ಯಗಳು ಪಡೆಯಲಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿ ಉಗ್ರನೊಬ್ಬನ ವೀಡಿಯೋ ಕಾನ್ಫೆರೆನ್ಸಿಂಗ್ ನಡೆಸಲಾಗಿದೆ. ಮುಂಬೈ ಸ್ಪೆಷಲ್ ಕೋರ್ಟ್ ನಲ್ಲಿ ನಡೆಸಿದ ವಿಚಾರಣೆಯಲ್ಲಿ ಹೆಡ್ಲಿ ಕೆಲವು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ. ವೀಡಿಯೋ ಕಾನ್ಫರೆನ್ಸ್ ನಲ್ಲಿ ಕೋರ್ಟ್ ಹೆಡ್ಲಿ ವಿಚಾರಣೆ ನಡೆಸಿದೆ. ಪಾಕ್-ಅಮೆರಿಕನ್ ಉಗ್ರ ಎಜೆಂಟ್ ಡೇವಿಡ್ ಚಿಕಾಗೋ ಜೈಲಿನಿಂದ ಹೇಳಿಕೆ ನೀಡಿದ್ದ.
ಶಾಲೆಗೆ ನುಗ್ಗಿದ ಚಿರತೆ ಸೆರೆ
ನಗರದ ವರ್ತೂರಿನಲ್ಲಿರುವ ವಿಬ್’ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದರು. ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿರುವ ಸುದ್ದಿಯನ್ನು ಅರಣ್ಯ ಇಲಾಖಾ ಪೊಲೀಸರಿಗೆ ಶಾಲೆಯ ಭದ್ರತಾ ಸಿಬ್ಬಂದಿ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ 50 ಮಂದಿ ಅರಣ್ಯ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ನಿರಂತರವಾಗಿ 10 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.
ಲೈಸೆನ್ಸ್ ಪಡೆದು ನಾಯಿ ಸಾಕಿ
ಇನ್ಮುಂದೆ ಮನೆಯಲ್ಲಿ ನಾಯಿ ಸಾಕೋಕು ಲೈಸೆನ್ಸ್ ಬೇಕು. ಬೆಂಗಳೂರು ನಗರದಲ್ಲಿ ನಾಯು ಸಾಕಲು ಲೈಸೆನ್ಸ್ ಪಡೆಯಬೇಕು. ಈ ರೂಲ್ಸ್ ನ್ನು ಬಿಬಿಎಂಪಿ ಜಾರಿಗೆ ತಂದಿದೆ. ಈ ನೀತಿಯನನ್ನು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯಿಸಲಾಗಿದೆ. ಪ್ರತಿವರ್ಷ ಪರವಾನಗಿಯನ್ನು ನವೀಕರಣ ಮಾಡಿಸಬೇಕು.
ರಿಯ್ಯಾಕ್ಟರ್ ಸ್ಫೋಟ: 4 ಸಜೀವ ದಹನ
ಫಾರ್ಮಾ ಕಂಪನಿಯಲ್ಲಿ ಸ್ಫೋಟವಾದ ಪರಿಣಾಮ ನಾಲ್ವರು ಸಜೀವ ದಹನವಾದ ಘಟನೆ ಹೈದರಾಬಾದ್ ಮಹೇಶ್ವರಂ ಕೈಗಾರಿಕಾಪ್ರದೇಶದಲ್ಲಿ ಸಂಭವಿಸಿತ್ತು. ಹಸೀತ ಕಂಪನಿಯಲ್ಲಿ ರಿಯ್ಯಾಕ್ಟರ್ ಸ್ಫೋಟವಾಗಿ ದುರಂತ ಸಂಭವಿಸಿದೆ. ಛತ್ತೀಸ್ ಗಡ ಮೂಲದ ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಐವರು ಕಾರ್ಮಿಕರಿಗೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದರು.
ವೆಬ್ ಸೈಟ್ ಹ್ಯಾಕ್
ಪಾಕಿಸ್ತಾನ ಹ್ಯಾಕರ್ ಗಳಿಂದ ಭಾರತದ ವೆಬ್ ಸೈಟ್ ಹ್ಯಾಕ್ ಆಗಿತ್ತು. ಇಂಡಿಯನ್ ರೆವೆನ್ಯೂ ಸರ್ವೀಸ್ ವೆಬ್ ಸೈಟ್ ಹ್ಯಾಕ್ ಆಗಿದೆ. ವೆಬ್ ಸೈಟ್ ಹ್ಯಾಕ್ ಮಾಡಿದ ಹ್ಯಾಕರ್ ಗಳ ಬರಹ ಪತ್ತೆಯಾಗಿದೆ. ‘ಸೈಬರ್ ಅಟ್ಯಾಕ್ ಟೀಮ್ ಆಫ್ ಪಾಕ್ ಎಂದು ಬರಹವಿತ್ತು ಎನ್ನಲಾಗಿತ್ತು.
ಮಾಜಿ ಸಚಿವ ನಾಣಯ್ಯ ನಿಧನ
ಹಿರಿಯ ಕಾಂಗ್ರೆಸ್‍ ಮುಖಂಡ, ಸಜ್ಜನ ರಾಜಕಾರಣಿ ಹಾಗೂ ಮಾಜಿ ಸಚಿವರಾಗಿದ್ದ ಮುಂಡಂಡ ಎಂ. ನಾಣಯ್ಯ ಅವರು ಮಡಿಕೇರಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ವಿಧಿವಶರಾಗಿದ್ದರು.
ನಾಡಿಗೆ ಬಂದ ಮರಿಆನೆ
ಕಾಡಿನಿಂದ ಬಂದ ಕಾಡಾನೆ ಮರಿ ಊರಲ್ಲೇ ಉಳಿದ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿತ್ತು. ಮರಿಯಾನೆ ಕಾಡಾನೆ ಹಿಂಡಿನಿಂದ ಬೇರ್ಪಟ್ಟಿತ್ತು. ನಾಡಿನ ಬಂದ ಮರಿಆನೆ ಜತೆ ಗ್ರಾಮಸ್ಥರು ಆಟವಾಡುತ್ತಿದ್ದರು.
ಕಟ್ಟಡ ಕುಸಿತ
ಹುಬ್ಬಳ್ಳಿಯಲ್ಲಿ ರೈಲ್ವೆ ಪೊಲೀಸ್ ಠಾಣೆ ಕುಸಿತವಾಗಿದೆ. ಹುಬ್ಬಳ್ಳಿಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ ಸಂಭಿವಿಸಿದೆ.ಘಟನೆಯಲ್ಲಿ ಐವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿ, ಮಹಿಳೆ ಮತ್ತು ಮಗು ಸೇರಿ ಸಿಲುಕಿಕೊಂಡಿದ್ದರು.
59 ಅಂಕ ಕಳೆದುಕೊಂಡ ಸೆನ್ಸೆಕ್ಸ್
ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಧಿಕ ಮಾರಾಟ ಒತ್ತಡ ಉಂಟಾದ ಹಿನ್ನಲೆಯಲ್ಲಿ ಸೆನ್ಸೆಕ್ಸ್ 59 ಅಂಕಗಳನ್ನು ಕಳೆದುಕೊಂಡಿತ್ತು. ವಿದೇಶ ಮಾರುಕಟ್ಟೆಗಳಿಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದ ಹಿನ್ನಲೆಯಲ್ಲಿ ಭಾರತೀಯ ಬಂಡವಾಳದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರು. ಇದರಿಂದ ಸೆನ್ಸೆಕ್ಸ್ 59 ಅಂಕಗಳನ್ನು ಕಳೆದುಕೊಳ್ಳುವ ಮೂಲಕ 24, 558 ಅಂಕಗಳಿಗೆ ಸ್ಥಿರವಾಗಿದೆ.ಇನ್ನು ನಿಫ್ಟಿಯಲ್ಲಿಯೂ ಕೂಡ ಅಲ್ಪ ಇಳಿಕೆ ಕಂಡುಬಂದಿದ್ದು, 17 ಅಂಕಗಳ ಇಳಿಕೆಯೊಂದಿಗೆ ನಿಫ್ಟಿ 7,472 ಅಂಕಗಳಿಗೆ ಸ್ಥಿರವಾಗಿತ್ತು.
 
 
ಔಷಧ ಕಂಪನಿಯಲ್ಲಿ ಅಗ್ಮಿ ಅವಘಡ
ಬೆಂಗಳೂರು ಹೊರವಲಯದಲ್ಲಿರುವ ಔಷಧಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನೆಲಮಂಗಲ ಬಾಣಾವಾಡಿ ಗ್ರಾಮದಲ್ಲಿರುವ ಜಕ್ಕಸಂದ್ರದಲ್ಲಿರುವ ಆಲೀವ್ ಲೈಫ್ ಸ್ಟೈಲ್ ನ ತೈಲ ಗೋದಾಮಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಸಾವನ್ನೇ ಗೆದ್ದುಬಂದ ಯೋಧ
ಸಿಯಾಚಿನ್ ಹಿಮಾಪಾತದಲ್ಲಿ ನಾಪತ್ತೆಯಾದ ಕರ್ನಾಟಕ ಮೂಲದ ಯೋಧ ಹನುಮಂತಪ್ಪ ಕೊಪ್ಪದ್ ಜೀವಂತವಾಗಿ ಪತ್ತೆಯಾಗಿದ್ದರು. ಪವಾಡಸದೃಶ್ಯವಾಗಿ ಬದುಕುಳಿದ ಕನ್ನಡಿಗ ಯೋಧನ ಬಗ್ಗೆ ಸೇನೆಯು ಅಧಿಕೃತ ಮಾಹಿತಿಯನ್ನು ಪ್ರಕಟಿಸಿತ್ತು.
ಮತಷ್ಟು ವಿಚಾರ ಬಾಯ್ಬಿಟ್ಟ ಹೆಡ್ಲಿ
26/11 ಮುಂಬೈ ದಾಳಿ ಪ್ರಕರಣದ ಅಪರಾಧಿ ಡೇವಿಡ್ ಹೆಡ್ಲಿನ ವಿಡಿಯೋ ಕಾನ್ಫರೆನ್ಸ್ ವಿಚಾರಣೆ 2ನೇ ದಿನವೂ ಮುಂದುವರಿದಿದ್ದು, ಚಿಕಾಗೋ ಜೈಲಿನಿಂದ ಹೆಡ್ಲಿ ಭಯೋತ್ಪಾದನೆ ಬಗ್ಗೆ ಮತ್ತೋಂದಿಷ್ಟು ಸಾಕ್ಷ್ಯಗಳನ್ನು ಬಿಚ್ಚಿಟ್ಟಿದ್ದ.
ಟ್ರೇನ್ ಪೇ ಚಾಯ್!
ರೈಲಿನಲ್ಲಿ ಪ್ರಯಾಣ ಬೆಳೆಸುವ ಟೀ ಪ್ರಿಯರಿಗೆ ಸಿಹಿ ಸುದ್ದಿಯೊಂದು ನೀಡಿತ್ತು. ಟೀ ಪ್ರಿಯ ರೈಲು ಪ್ರಯಾಣರಿಕೆ ಸಖತ್ ಕಿಕ್ ನೀಡಲಿದೆ. ಒಂದೇ ರೀತಿಯ ಚಾ ಕುಡಿದು, ಬೋರ್ ಆದವರಿಗೂ ವಿಭಿನ್ನ ಅನುಭವ ನೀಡಲಿದೆ.
ಇನ್ಮುಂದೆ ರೈಲು ಪ್ರಯಾಣಿಕರು 25 ವಿಧದ, 12 ಸಾವಿರ ರೀತಿಯಲ್ಲಿ ಟೀ ಆಫರ್ ಮಾಡಬಹುದಾಗಿದೆ. ನಾರ್ಮಲ್ ಟೀ ಜತೆ ಮಸಾಲಾ ಟೀ, ಆಮ್ ಪಾಪಡ್ ಟೀ, ಹರಿ ಮಿರ್ಚ್ ಟೀ, ಕುಲ್ಹಾಡ್ ಟೀ, ಶುಂಠಿ ತುಳಸಿಯುಕ್ತ ಟೀ ಸೇರಿ ಹಲವು ವಿಧದ ಟೀ ದೊರೆಯಲಿದೆ.
 
 
ಸಿಲಿಂಡರ್ ಸ್ಫೋಟ: ದಂಪತಿ ಸಾವು
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ದಂಪತಿಗಳು ಸಾವನ್ನಪ್ಪಿದ್ದ ಘಟನೆ ರಾಯಚೂರಿನ ವಾಸವಿನಗರದ ಮನೆಯೊಂದರಲ್ಲಿ ಸಂಭವಿಸಿತ್ತು.
9 ಯೋಧರು ಸಾವು
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಹಿಮಪಾತ ಪ್ರಕರಣದಲ್ಲಿ ನಾಪತ್ತೆಯಾದ 10 ಯೋಧರ ಬಗ್ಗೆ ಮಾಹಿತಿ ಲಭ್ಯವಾಗತ್ತು. ಹಿಮಪಾತದಲ್ಲಿ ಸಿಲುಕಿದ್ದವರಲ್ಲಿ ಓರ್ವ ಕನ್ನಡ ಯೋಧ ಜೀವಂತವಾಗಿ ಪತ್ತೆಯಾಗಿದ್ದು, ಉಳಿದ 9 ಮಂದಿ ಮೃತ್ತಪಟ್ಟಿದ್ದಾರೆ. ನಿನ್ನೆ ಆರು ಇಂದು ಮೂವರು ಯೋಧರ ಶವಪತ್ತೆಯಾಗಿದೆ. ಮೃತಪಟ್ಟವರೆಲ್ಲರೂ ಮದ್ರಾಸ್ ರೆಜಿಮೆಂಟ್ ನ ಯೋಧರಾಗಿದ್ದರು. ಮರತರಲ್ಲಿ ಓರ್ವ ಜಾಯಿಂಟ್ ಕಮಾಂಡಿಂಗ್ ಆಫೀಸರ್ ಕೂಡ ಇದ್ದಾರೆ. ಫೆ.3ರಂದು ಸಿಯಾಚನ್ ನಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ 10 ಮಂದಿ ಯೋಧರು ನಾಪತ್ತೆಯಾಗಿದ್ದರು.
 
 
ಭೀಕರ ರೈಲು ದುರಂತ
ಎರಡು ರೈಲುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಪ್ರಯಾಣಿಕರು ಸಾವನ್ನಪ್ಪಿದ ಘಟನೆ ದಕ್ಷಿಣ ಜರ್ಮನಿಯಲ್ಲಿ ಸಂಭವಿಸಿತ್ತು. ಜರ್ಮನಿಯ ಮ್ಯೂನಿಚ್ ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಬವೇರಿಯನ್ ನಗರದ ಸಮೀಪದಲ್ಲಿರುವ ಬ್ಯಾಡ್ ಏಬ್ಲಿಂಗ್ ಸಮೀಪ ಈ ದುರಂತ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ರೈಲುಗಳ ಹಲವು ಬೋಗಿಗಳು ನೆಲಕ್ಕುರುಳಿದ್ದು, ಮತ್ತೆ ಕೆಲವು ಹಳಿ ತಪ್ಪಿವೆ. ಘಟನೆಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು ದುರಂತದಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
 
 
ಮತ್ತೆ ಚಿರತೆ ಪ್ರತ್ಯಕ್ಷ..!
ಬೆಂಗಳೂರಿನ ವಿಬ್ ಗಯಾರ್ ಶಾಲೆ ಬಳಿ ಮತ್ತೆ 2ಚಿತರೆ ಪ್ರತ್ಯಕ್ಷವಾಗಿದೆ ಎಂದು ವದಂತಿ ಹಬ್ಬಿತ್ತು. ಶಾಲೆಯ ಹಿಂಭಾಗದಲ್ಲಿರುವ ನೀಲಗಿರಿ ತೋಪಿನ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು.
 
 
ಹಾಲಿ-ಮಾಜಿ ವಾಚ್ ವಾರ್
ಸಿಎಂ ಬಳಿ ದುಬಾರು ವಾಚ್ ಬಗ್ಗೆ ಹೇಳಿರುವ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಹೆಚ್ ಡಿ ಕೆ ಏಟಿಗೆ ಸಿಎಂ ತಿರುಗೇಟು ನೀಡಿದ್ದರು.
‘ಬೇಕಾದ್ರೆ ಈಗಾಲೇ ಕೊಡ್ತೀನಿ, 5ಲಕ್ಷಕ್ಕೆ ತಗೋತ್ತೀರಾ?’ ಎಂದು ಹೆಚ್ ಡಿಕೆ ಗೆ ಸಿಎಂ ಸವಾಲು ಹಾಕಿದ್ದಾರೆ. ಹೆಚ್ ಡಿಕೆ ಪುತ್ರನ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾರಿದೆ. ಅದು ಹೆಚ್ ಡಿಕೆ ಪುತ್ರ ದುಡಿದಿದ್ದಾ?’ ಎಂದು ಸಿದ್ದು ಮರುಪ್ರಶ್ನಿಸಿದ್ದರು.
 
 
 
ಹೆಡ್ಲಿ ವಿಚಾರಣೆ ಮುಂಡೂಡಿಕೆ
26/11 ರಂದು ಮುಂಬೈ ಮೇಲೆ ಉಗ್ರ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಕೋರ್ಟ್ ನಡೆಸುತ್ತಿದ್ದ ಉಗ್ರ ಡೇವಿಡ್ ಹೆಡ್ಲಿ ವಿಡಿಯೋ ಕಾನ್ಫೆರೆನ್ಸ್ ವಿಚಾರಣೆಯನ್ನು ಮುಂದೂಡಲಾಗಿತ್ತು. ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿತ್ತು.
ಲೀಲಾವತಿ ಆರೋಗ್ಯವದಲ್ಲಿ ಏರುಪೇರು
ಹಿರಿಯ ನಟಿ ಲೀಲಾವತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಆರೋಗ್ಯದಲ್ಲಿ ರಾತ್ರಿ ಏರುಪೇರಾದ ಹಿನ್ನೆಲೆಯಲ್ಲಿ ಅವರ ಮಗ ವಿನೋದ್ ರಾಜ್ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ವೀರಯೋಧ ಹನುಮಂತಪ್ಪ ವಿಧಿವಶ
ಚಿಕಿತ್ಸೆ ಫಲಕಾರಿಯಾಗದೆ ಸಿಯಾಚಿನ್ ನಲ್ಲಿ ಸಾವನ್ನೇ ಗೆದ್ದು ಬಂದ ಯೋಧ ಹನುಮಂತಪ್ಪ ಕೊಪ್ಪದ್ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರು. ಇವರ ಸ್ಥಿತಿ ತೀವ್ರ ಗಂಭೀರವಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಲಿವರ್ ಮತ್ತು ಕಿಡ್ನಿ ಕೆಲಸ ಮಾಡುತ್ತಿರಲಿಲ್ಲ.  ಕಳೆದ 6 ದಿನಗಳ(ಫೆ.3ರಂದು) ಹಿಂದೆ ಸಿಯಾಚನ್ ನಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ 10 ಮಂದಿ ಯೋಧರು ನಾಪತ್ತೆಯಾಗಿದ್ದರು. ಅವರಲ್ಲಿ ಧಾರವಾಡದ ಕುಂದಗೋಳ ತಾಲೂಕಿನ ಬೆಟದೂರಿನವರಾದ ಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಕಾಲ ಹಿಮಪಾತದಲ್ಲಿ ಜೀವಿಸಿ, ಬದುಕನ್ನೇ ಗೆದ್ದು ಬಂದಿದ್ದರು. 25 ಅಡಿ ಆಳದ ಹಿಮದ ರಾಶಿಯ ಮಧ್ಯೆ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ವಸ್ಥ ಯೋಧನನ್ನು ದೆಹಲಿಯ ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಣ್ಣಲ್ಲಿ ಮಣ್ಣಾದ ಕೊಪ್ಪದ್‌
ಜಮ್ಮು-ಕಾಶ್ಮೀರದ ಸಿಯಾಚಿನ್‌ ಯುದ್ಧಭೂಮಿಯಲ್ಲಿ ಕಳೆದ ವಾರ ನಡೆದ ಭೀಕರ ಹಿಮಪಾತದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ನಿನ್ನೆ ಸಾವನ್ನಪ್ಪಿದ್ದ ಲ್ಯಾನ್ಸ್‌ ನಾಯ್ಕ್‌ ಹನುಮಂತಪ್ಪ ಕೊಪ್ಪದ್‌ಗೆ ಅವರ ಹುಟ್ಟೂರು ಬೆಟದೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಹಿಂದು ಸಂಪ್ರದಾಯದ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗುಂಡಿಯಲ್ಲಿ ಬಿಲ್ವ ಪತ್ರಿ, ವಿಭೂತಿ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಯಿತು. ಅಂತ್ಯ ಸಂಸ್ಕಾರದ ವೇಳೆ ಕುಶಾಲ ತೋಪು ಸಿಡಿಸಿ ಭಾರತೀಯ ಸೇನೆ ಗೌರವ ವಂದನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಬಂಧುಗಳು ಹಾಗೂ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
 
 
ಮತದಾನ
ಮೊದಲ ಹಂತದ ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್ ಮತದಾನ ಆರಂಭಗೊಂಡಿದೆ. 15 ಜಿಲ್ಲಾ ಪಂಚಾಯಿತ್ ನಲ್ಲಿ ಮೊದಲ ಹಂತದ ಮತದಾನ ಜೋರಾಗಿತ್ತು. ಮತಗಟ್ಟೆಯ ಸುತ್ತಮುತ್ತ ಪೋಲಿಸ್ ಬಿಗಿ ಭದ್ರತೆ ಮಾಡಲಾಗಿತ್ತು.
ಗುರುತಿನ ಚೀಟಿ ಮರೆತ ಜಯಮಾಲ
ರಾಮ ನಾಯರಾಯಣ ಸರ್ಕಾರಿ ಶಾಲೆಯಲ್ಲಿ ನಟಿ ಜಯಮಾಲ ಮತದಾನ ಮಾಡಲು ಬಂದಿದ್ದರು. ಜಯಮಾಲ ಗುರುತಿನ ಚೀಟಿ ಮರೆದು ಬಂದ ಘಟನೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಮತ್ತೆ ಮನೆಗೆ ಹೋಗಿ ಗುರುತಿನ ಚೀಟಿ ತಂದು ಮತ ಚಲಾವಣೆ ಮಾಡಿದರು. ಪುತ್ರಿ ಸೌಂದರ್ಯ ಜೊತೆ ಜಯಮಾಲ ಮತ ಚಲಾಯಿಸಲು ಬಂದಿದ್ದರು.
2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
2014 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ, ವಾರ್ತಾ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಅವರು ಶುಕ್ರವಾರ ಬೆಂಗಳೂರು ವಾರ್ತಾ ಸೌಧದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಎಸ್. ಚನ್ನಪ್ಪಗೌಡ, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಚಲನಚಿತ್ರ ರಂಗದ ಗಣ್ಯರು, ಆಯ್ಕೆ ಸಮಿತಿಯ ಆಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉಗ್ರರ ಕಾಳಗದಲ್ಲಿ 2 ಯೋಧರು ಬಲಿ
ಉಗ್ರರು ನಡೆಸಿದ ಗುಂಡಿನ ದಾಳಿಗೆ ಭಾರತದ ಯೋಧರಿಬ್ಬರು ಸಾವನ್ನಪ್ಪಿದ್ದ ಘಟನೆ ಕಾಶ್ಮೀರದ ಕುಪ್ವಾರ ಜಿಲ್ಲೆಯ ಚೌಕಿಬಾಲ್ ಗಡಿ ಪ್ರದೇಶದಲ್ಲಿರುವ ಮರ್ಸಾರಿ ಹಳ್ಳಿಯಲ್ಲಿ ನಡೆದಿದೆ. ಉಗ್ರರು ಒಳ ನುಸುಳುತ್ತಿರುವ ಮಾಹಿತಿ ತಿಳಿದ ಯೋಧರು, ಕಾರ್ಯಾಚರಣೆಗೆ ಮುಂದಾದಾಗ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಯೋಧರು ಮೃತಪಟ್ಟಿಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ಸಿಯಾಚಿನ್ ನಲ್ಲಿ ತಗ್ಗಿದ ಹಿಮಪಾತ
ಸಿಯಾಚಿನ್ ನಿರ್ಗಲ್ ಪ್ರದೇಶಲ್ಲಿ ಹಿಮಪಾತ ತಗ್ಗಿದೆ. ಈ ಹಿನ್ನೆಲೆಯಲ್ಲಿ 9 ಹುತಾತ್ಮ ಯೋಧರ ಪಾರ್ಥಿವ ಶರೀರ ರವಾನೆಗೆ ಸಿದ್ಧತೆ ಮಾಡಲಾಗಿತ್ತು. ಸಿಯಾಚಿನ್ ನಿಂದ ಲೇಹ್ ಗೆ ಶವಗಳ ಸ್ಥಳಾಂತರಕ್ಕೆ ಸಿದ್ಧತೆ ನಡೆಸಲಾಗಿದೆ. ಸದ್ಯ ಮೃತದೇಹಗಳು ಸಿಯಾಚಿನ್ ಹೆಲಿಪ್ಯಾಡ್ ನಲ್ಲಿಡಲಾಗಿತ್ತು.
ಡಿಎಂಕೆ, ಕಾಂಗ್ರೆಸ್ ಮೈತ್ರಿ
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಎಂಕೆ, ಕಾಂಗ್ರೆಸ್ ಮಧ್ಯೆ ಮೈತ್ರಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಘೋಷಿಸಿದ್ದರು. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಒಗ್ಗೂಡಿ ಸ್ಪರ್ಧಿಸಲಿದೆ. ಆಜಾದ್ ತಮಿಳುನಾಡಿಗೆ ತೆರಳಿ ಕರುಣಾನಿಧಿಯನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಲಾಗುತ್ತದೆ. ಚೆನ್ನೈನ ಎಂ ಕರುಣಾನಿಧಿಯ ನಿವಾಸದಲ್ಲಿ ಚರ್ಚಿಸಿದ್ದರು.
ಉಗ್ರರ ಕಾಳಗದಲ್ಲಿ ಕನ್ನಡದ ಯೋಧ ಹುತಾತ್ಮ
ಜಮ್ಮು-ಕಾಶ್ಮೀರದಲ್ಲಿ ವಿಜಯಪುರದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಸಹದೇವ ಮಾರುತಿ ಮೋರೆ(26) ಬಲಿಯಾಗಿದ್ದರು.
ಹುತಾತ್ಮ ಯೋಧ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ನಿವಾಸಿಯಾಗಿದ್ದಾರೆ. ಮೃತ ಯೋಧನಿಗೆ ಮೂರು ತಿಂಗಳ ಹಿಂದೆ ನಿಶ್ಚಯವಾಗಿತ್ತು.
ಶೆಟ್ಟರ್-ಜೋಶಿ ಬಂಧನ
ಧಾರವಾಡದಲ್ಲಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಸೆರೆಯಾಗಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ನುಗ್ಗಲು ಯತ್ನಿಸಿದಾಗ ಬಂಧಿಸಲಾಗಿತ್ತು.
 
 
 
ಉಗ್ರರ ಅಡಗುದಾಣ ಧ್ವಂಸ
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಡಗುದಾಣವನ್ನು ಧ್ವಂಸಗೊಳಿಸಲಾಗಿತ್ತು. ಭಾರತೀಯ ಸೇನೆ ಬನಿಹಾಲ್ ನಲ್ಲಿ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಲಾಗಿದೆ. ಆರ್ ಆರ್ ಬೆಟಾಲಿಯನ್ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ. ಎಕೆ 47 ರೈಫಲ್, ಹ್ಯಾಂಡ್ ಗ್ರೆನೇಡ್ಸ್, ಮ್ಯಾಗಜಿನ್ಸ್, ಪಿಸ್ತೂಲ್ ಗಳು, ರೇಡಿಯೀ ಸೆಟ್ ಗಳು ಸೇರಿ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳನ್ನು ಸೇನೆ ವಶಪಡಿಸಿಕೊಳ್ಳಲಾಗಿತ್ತು.
ಮೈಸೂರಿನಲ್ಲಿ ವಿಶೇಷ ಪೂಜೆ
ರಥಸ್ತಪಮಿ ಹಿನ್ನಲೆಯಲ್ಲಿ ಮೈಸೂರಿನಲ್ಲಿ ವಿಶೇಷ ಪೂಜೆ ನಡೆಸಲಾಗಿದೆ. ಅರಮನೆ ಆವರಣದ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ನಟಿ ಪ್ರಣಿತಾ ಕಾರು ಅಪಘಾತ: ಅಪಾಯದಿಂದ ಪಾರು
ನಟಿ ಪ್ರಣಿತಾ ಸುಭಾಶ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿತ್ತು. ಈ ಅಪಘಾತದಲ್ಲಿ ನಟಿ ಪ್ರಣಿತಾ ಯಾವುದೇ ಗಾಯಗಳಾಗದೆ, ಅಪಾಯದಿಂದ ಪಾರಾಗಿದ್ದರು.
ಸಿಪಿಎಂ ಮುಖಂಡನಿಗೆ ಬೆದರಿಕೆ ಕರೆ
ಸಿಪಿಎಂ ಮುಖಂಡ ಸೀತಾರಾಮ್ ಯಚೂರಿಗೆ ಬೆದರಿಕೆ ಕರೆ ಬಂದಿದ್ದು, ಅಮ್ ಆದ್ಮಿ ಬಲವೀರ್ ಸೇನಾದ ಹೆಸರಲ್ಲಿ ಬೆದರಿಕೆ ಕರೆ ಬಂದಿತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಬೆದರಿಕೆ ಕರೆ ಬಂದಿತ್ತು. ಸೀತಾರಾಮ್ ಯಚೂರಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಪೊಲೀಸ್ ವ್ಯಾನ್ ಅಪಘಾತ
ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ವಾಹನ ಹಳ್ಳಕ್ಕೆ ಬಿದ್ದ ಪರಿಣಾಮ 14 ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತೂಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ.
ಬೋನಿಂದ ಚಿರತೆ ಎಸ್ಕೇಪ್
ವಿಬ್ ಗಯಾರ್ ಶಾಲೆಯ ಬಳಿ ಸೆರೆ ಸಿಕ್ಕಿದ್ದ ಚಿರತೆ ಪರಾರಿಯಾಗಿತ್ತು. ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿಟ್ಟಿದ್ದ ಬೋನಿನಿಂದ ಚಿರತೆ ತಪ್ಪಿಸಿಕೊಂಡಿತ್ತು. ನಿನ್ನೆ ರಾತ್ರಿ ಉದ್ಯಾನವನದಿಂದ ತಪ್ಪಿಸಿಕೊಂಡಿದೆ. ಸತತ 10 ಗಂಟೆ ಕಾರ್ಯಾಚರಣೆ ಬಳಿ ಚಿರತೆ ಸೆರೆಸಿಕ್ಕಿದೆ. ಸಿಬ್ಬಂದಿಗಳು ವಿಬ್ ಗಯಾರ್ ಬಳಿ ಚಿರತೆಯನ್ನು ಹಿಡಿದಿದ್ದಾರೆ. ಬಳಿಕ ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಮಿರ್ಜಾ – ಮಾರ್ಟಿನಾ ಜೋಡಿಗೆ ಪ್ರಶಸ್ತಿ
ಸೆಂಟ್ ಪೀಟರ್ಸ್ ಬರ್ಗ್ ಲೇಡೀಸ್ ಟ್ರೋಫಿ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಮಹಿಳಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜಯ ಗಳಿಸಿ ಚಾಂಪಿಯನ್ ಆಗಿದೆ.
ಮೈಸೂರಿಗೆ ಮತ್ತೊಂದು ಗರಿ
ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ಮೊದಲ ಸ್ಥಾನ ಲಭಿಸಿತ್ತು. ದೇಶದ 73 ನಗರಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಥಮ ಸ್ಥಾನದಲ್ಲಿ ಮಿಂಚುತ್ತಿದೆ.
2016ರ ಸ್ವಚ್ಛ ಭಾರತ ಸರ್ವೇಯಲ್ಲಿ ಮೈಸೂರಿಗೆ ಮೊದಲ ಸ್ಥಾನದ ಗರಿ ಗೆದರಿದ್ದು, ಚಂಡೀಗಢಕ್ಕೆ ಎರಡನೇ ಸ್ಥಾನ ದೊರಕಿದೆ. ವಾರಣಸಿ 65ನೇ ಸ್ಥಾನದಲ್ಲಿದೆ. ಇಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು 75 ಸ್ವಚ್ಛ ನಗರಗಳ ಘೋಷಣೆ ಮಾಡಿದ್ದಾರೆ.
ಸ್ವಚ್ಛ ಭಾರತ ರ್ಯಾಕಿಂಗ್ ಪಟ್ಟಿ ವಿವರ:
ಕರ್ನಾಟಕದ ಮೈಸೂರು ನಗರ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದು, ಚಂಡೀಗಡಕ್ಕೆ ದ್ವಿತೀಯ ಸ್ಥಾನ, ತಿರುಚನಾಪಳ್ಳಿಗೆ ಮೂರನೇ ಸ್ಥಾನ, ನ್ಯೂಡೆಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ಗೆ 4ನೇ, ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ 5ನೇ ಸ್ಥಾನ, ಗುಜರಾತ್ ಸೂರತ್ ಗೆ 6ನೇ, ರಾಜಕೋಟ್ ಗೆ 7ನೇ ಸ್ಥಾನ, ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ಗೆ 8ನೇ ಸ್ಥಾನ, ಪಿಂಪ್ರಿಚಿಂಚ್ವಾಡಕ್ಕೆ 9ನೇ, ಗ್ರೇಟರ್ ಮುಂಬೈಗೆ 10ನೇ ಸ್ಥಾನ,
ಕೊಳಕಿ ನಗರ ಪಟ್ಟಿಯಲ್ಲಿ ದನಾಬಾದ್ ಗೆ ಪ್ರಥಮ ಸ್ಥಾನ ಪಡೆದಿದೆ. ಕೊಳಕು ನಗರಗಳ ಟ್ಟಿಯಲ್ಲಿ ವಾರಾಣಸಿಗೆ 10 ಸ್ಥಾನವಿದೆ. ಸ್ವಚ್ಛ ರಾಜಧಾನಿ ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ ದೊರಕಿದೆ. ಕೇರಳ ರಾಜಧಾನಿ ತಿರುವನಂತಪುರಂಗೆ ದ್ವೀತಿಯ ಸ್ಥಾನ, ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ಗೆ ತೃತೀಯ ಸ್ಥಾನ, ನ್ಯೂಡೆಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ಗೆ 4ನೇ, ಚಂಡೀಗಡಕ್ಕೆ 5ನೇ, ಪುದುಚೆರಿಗೆ 6ನೇ, ಅಗರ್ತಲಾಗೆ 7ನೇ ಸ್ಥಾನ ದೊರಕಿದೆ.
 
 
 
ಭಾರತದ ಮಡಲಿಗೆ ಮತ್ತೆರಡುಚಿನ್ನ
12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ಲಭಿಸಿದೆ. ಭಾರತದ ಶೂಟರ್‌ಗಳಾದ ಗುರುಪ್ರೀತ್‌ ಮತ್ತು ಶ್ವೇತಾ ಚಿನ್ನ ಗೆದ್ದಿದ್ದಾರೆ. ಇದರೊಂದಿಗೆ ಶೂಟಿಂಗ್ ವಿಭಾಗದಲ್ಲಿ 26 ಚಿನ್ನದ ಪದಕಗಳಲ್ಲಿ 25 ಚಿನ್ನದ ಪದಕವು ಭಾರತ ಮಡಿಲಿಗೆ ಬಿದ್ದಿತ್ತು.
ಗುರುಪ್ರೀತ್‌ ಸಿಂಗ್‌ ಅವರು ವೈಯಕ್ತಿಕ 25ಎಂ ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಗೆದ್ದದ್ದು, ಮಹಿಳೆಯರ 10ಎಂ ಏರ್ ಪಿಸ್ತೂಲ್‌ ವಿಭಾಗದಲ್ಲಿ ಒಟ್ಟು 194.4 ಸ್ಕೋರ್‌ ಕಲೆ ಹಾಕಿ ಶ್ವೇತಾ ಸಿಂಗ್‌ ಪದಕ ಗೆದ್ದರು. ಮತ್ತೋರ್ವ ಒಲಿಂಪಿಯನ್‌ ಹೀನಾ ಸಿಂಧು ಮಹಿಳೆಯರ 10 ಎಂ ಏರ್‌ ಪಿಸ್ತೂಲ್‌ ಸ್ಫರ್ಧೆಯಲ್ಲಿ ಬೆಳ್ಳಿ ಮತ್ತು ಚಂಡಿಗಡದ ಯಶಸ್ವಿನಿ ಸಿಂಗ್‌ ದೇಸ್‌ವಾಲ್‌ ಕಂಚು ಗೆದಿದ್ದಾರೆ. ಭಾರತದ ಶೂಟರ್‌ಗಳು ಒಟ್ಟು 25 ಚಿನ್ನ, 10 ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಗೆದ್ದಿದ್ದರು.
ಭಾರತೀಯ ಪ್ರಜೆಗೆ ಪಾಕ್ ನಲ್ಲಿ ಜೈಲುವಾಸ
ಭಾರತೀಯ ಪ್ರಜೆಗೆ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. ಗೂಢಚರ್ಯೆ ಆರೋಪದಡಿ ಸಹಾಲ್ ಅನ್ಸರ್ ಗೆ ಶಿಕ್ಷೆ ವಿಧಿಸಲಾಗಿತ್ತು. ನೆಹ್ವಾಲ್ ಗೆ ಪಾಕ್ ಕೋರ್ಟ್ ಮೂಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈತ ಕೆಲವು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎನ್ನಲಾಗಿದೆ.
ಬಿಜೆಪಿಗೆ ಭರ್ಜರಿ ಗೆಲುವು
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಶಿವನಗೌಡ ಜಯ ಸಾಧಿಸಿದ್ದರು. 18,200 ಮತಗಳಿಂದ ಶಿವನಗೌಡ ನಾಯಕ್ ಗೆಲುವು ಸಾಧಿಸಿದ್ದರು.
ಬಿಜೆಪಿಗೆ ಹೆಬ್ಬಾಳ ಚುಕ್ಕಾಣಿ
ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಿದ್ದು ಬಿಜೆಪಿಯ ವೈ.ಎ.ನಾರಾಯಣಸ್ವಾಮಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೆಬ್ಬಾಳ ಕ್ಷೇತ್ರದಿಂದ ಬಿಜೆಪಿಗೆ ಸತತ 3ನೇ ಬಾರಿ ಗೆಲುವು ದೊರಕಿದೆ.
ಕಾಂಗ್ರೆಸ್ ಗೆ ಗೆಲುವು
ಬೀದರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಗೆಲುವು ಸಾಧಿಸಿದ್ದರು.
ಪೃಥ್ವಿ-2 ಉಶಸ್ವಿ ಉಡಾವಣೆ
ಸ್ವದೇಶಿ ನಿರ್ಮಿತ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಖಂಡಾಂತರ ಪೃಥ್ವಿ-2 ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಒಡಿಶಾದ ಚಾಂಡಿಪುರದಲ್ಲಿರುವ ಸೇನಾ ನೆಲೆಯಲ್ಲಿ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದೆ.ಪೃಥ್ವಿ-2 ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, 350 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಿಪಣಿಯನ್ನು ಕರಾವಳಿ ಭದ್ರತೆಗಾಗಿ ಸಂಶೋಧಿಸಲಾಗಿದೆ.
 
 
ಲೋಕಾ ಶಾಕ್...
ಬೆಳ್ಳಬೆಳಗ್ಗೆ ರಾಯಚೂರಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಯಾದಗಿರಿ ಆಹಾರ ಇಲಾಖೆ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಆಹಾರ ಇಲಾಖೆಯ ಫುಡ್ ಇನ್ಸ್ ಪೆಕ್ಟರ್ ವೆಂಕಣ್ಣ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಯಾದಗಿರಿಯಲ್ಲಿರುವ ಆಹಾರ ಇಲಾಖೆಯ ವೆಂಕಣ್ಣ ಕಚೇರಿ ಮತ್ತು ನಗರದ ಹೊರವಲಯದ ಯರಮರಸ್ ನಲ್ಲಿರುವ ಮನೆ ಮೇಲೆ ಲೋಕಾ ದಾಳಿ ನಡೆದಿದೆ.ಎಸ್ ಪಿ ಬಿ.ವಿ. ಕುಂಬಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಲೋಕಾಯುಕ್ತ ಪೊಲೀಸರು ಕೆಲ ದಾಖಲೆಗಳನ್ನು ಪರಿಶೀಲಿಸಿದ್ದರು.
ಶಂಕಿತ ಭಯೋತ್ಪಾದಕರ ಸೆರೆ
ರೂರ್ ಕೆಲಾದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಒಡಿಶಾದ ರೂರ್ ಕಲಾದಲ್ಲಿ ಪೊಲೀಸರು ಉಗ್ರರನ್ನು ಬಂಧಿಸಿದ್ದರು.
ಸೇನೆಗೆ ಮುಧೋಳ ಉಡುಗೊರೆ
ಬೇಟೆನಾಯಿಗಳಿಗೆ ಭಾರತೀಯ ಸೇನೆ ಸೇರೋ ಚಾನ್ಸ್ ಸಿಕ್ಕಿದ್ದು ಸಿಯಾಚಿನ್ ಹೀರೋ ಹನುಮಂತಪ್ಪನ ಸ್ಮರಣಾರ್ಥ ಆರ್ಮಿಗೆ ರಾಜ್ಯದಿಂದ ಮುಧೋಳ ಶ್ವಾನಗಳನ್ನು ಗಿಫ್ಟ್ ನೀಡಲಾಗಿತ್ತು. ಭಾರತೀಯ ಸೇನೆಗೆ 6 ಸ್ವದೇಶಿ ಮುಧೋಳ ನಾಯಿಗಳನ್ನು ಹಸ್ತಾಂತರಿಸಲಾಗಿದೆ. ಮೂರು ಗಂಡು, ಮೂರು ಹೆಣ್ಣು ನಾಯಿಗಳನ್ನು ನೀಡಲಾಗಿದೆ. ಬಾಗಲಕೋಟೆಯ ಶ್ವಾನ ಸಂವರ್ಧನಾ ಕೇಂದ್ರದಲ್ಲಿದ್ದ ಶ್ವಾನಗಳನ್ನು ಫೆ.12ರಂದು ಸೇನೆಗೆ ಶ್ವಾನಗಳನ್ನು ಹಸ್ತಾಂತರಿಸಲಾಗಿದೆ. ಸದ್ಯ ಮಧೋಳ ಶ್ವಾನಗಳಿಗೆ ಮೀರತ್ ನಲ್ಲಿ ಸೇನೆ ತರಬೇತಿ ನೀಡಲಾಗುತ್ತಿದೆ.
ಶಂಕುಸ್ಥಾಪನೆ
ಆಂಧ್ರಪ್ರದೇಶದ ತಾತ್ಕಾಲಿಕ ರಾಜಧಾನಿಗೆ ಸಿಎಂ ಚಂದ್ರಬಾಬು ನಾಯ್ಡು ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಆಂಧಪ್ರದೇಶದ ಗುಂಟೂರು ಜಿಲ್ಲೆಯ ವೆಲಗಪುಡಿ ಗ್ರಾಮದಲ್ಲಿ ತಾತ್ಕಾಲಿಕ ರಾಜಧಾನಿ ನಿರ್ಮಾಣವಾಗಲಿದೆ. 45 ಎಕರೆ ಪ್ರದೇಶದಲ್ಲಿ ಸಚಿವಾಲಯ ನಿರ್ಮಾಣವಾಗಲಿದೆ. ಜೂನ್ ವೇಳೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂನ್ ತಿಂಗಳಿಂದ ಆಂಧ್ರ ಸಚಿವಾಲಯ ಹೈದರಾಬಾದ್ ನಿಂದ ವೆಲಗಪುಡಿಗೆ ಸ್ಥಳಾಂತರವಾಗಲಿದೆ.
ಬಿಜೆಪಿ ಯೋಜನೆಗೆ ಅಮೀರ್ ಅಂಬಾಸಿಡರ್
ಬಿಜೆಪಿ ಸರ್ಕಾರದ ಯೋಜನೆಗೆ ಬಾಲಿವುಡ್ ನಟ ಅಮಿರ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು. ಮಹಾರಾಷ್ಟ್ರದ ಜಲ್ ಯುಕ್ತ ಶಿವರ್ ಯೋಜನೆಗೆ ಅಮೀರ್ ಖಾನ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಜಲ್ ಯುಕ್ತ ಶಿವರ್ ಯೋಜನೆ ಮಹಾರಾಷ್ಟ್ರ ಸಿಎಂ ಫಡ್ನಿವಿಸ್ ಕನಸಿನ ಮಹತ್ವದ ನೀರು ಪೂರೈಕೆ ಯೋಜನೆಯಾಗಿದೆ.
ಫಿರಂಗಿ ಪೂರೈಕೆಗೆ ಅಮೆರಿಕ ಸಮ್ಮತಿ
ಅಮೆರಿಕ ಸೇನಾಪಡೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಎಂ-777 ಹೊವಿಟ್ಜರ್ ಫಿರಂಗಿಯನ್ನು ಭಾರತ ಮಾರಾಟ ಮಾಡಲು ಅಮೆರಿಕದ ರಕ್ಷಣಾ ಸಚಿವಾಲಯ ಸಮ್ಮತಿ ಸೂಚಿಸಿದೆ.
ಜೋಕ್ ತಡೆಗೆ ಸುಪ್ರೀಂ ಮಾರ್ಗಸೂಚಿ
ಅತಿ ಪ್ರಚಲಿತದಲ್ಲಿರುವ ಸರ್ದಾರ್ ಜೋಕ್ ಗಳನ್ನು ತಡೆಯಲು ಕೆಲವು ಮಾರ್ಗಸೂಚಿ ಜಾರಿಗೆ ತರಲು ಸುಪ್ರೀಂಕೋರ್ಟ್ ನಿರ್ಧರಿಸಿತ್ತು. ಸರ್ದಾರ್ ಜೋಕ್ ಗಳು ಸಿಖ್ ಜನಾಂಗೀಯ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಿನ್ನಲೆಯಲ್ಲಿ ಮಾರ್ಗಸೂಚಿಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಕಾರ್ಕಳಕ್ಕೆ ಭೇಟಿ ನೀಡಿದ ರವಿ
ಟೀಂ ಇಂಡಿಯಾದ ನಿರ್ದೇಶಕ ರವಿಶಾಸ್ತ್ರಿ ಕಾರ್ಕಳಕ್ಕೆ ಭೇಟಿ ನೀಡಿದ್ದಾರೆ. ಇಂದು ಎರ್ಲಪ್ಪಾಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದ್ದರು.
ಪಿಎಫ್ ಬಡ್ಡಿ ದರ ಏರಿಕೆ
2015-16ನೇ ಹಣಕಾಸು ಸಾಲಿನಲ್ಲಿ ಕಾರ್ಮಿಕರ ಭವಿಷ್ಯ ನಿಧಿ(ಪಿಎಫ್) ಬಡ್ಡಿ ದರವನ್ನು ಶೇ.8.8ರಷ್ಟು ಏರಿಕೆ ಮಾಡಲಾಗಿತ್ತು. ಕೇಂದ್ರ ಕಾರ್ಮಿಕ ಸಚಿವ ಬಂಡಾಯ ದತ್ತಾತ್ರೇಯ ಅವರ ಅಧ್ಯಕ್ಷತೆಯಲ್ಲಿ ನಡೆದ ಇಫಿಎಫ್ ನ ಕೇಂದ್ರ ಮಂಡಳಿ ಟ್ರಿಸ್ಟೀಸ್ ಸಭೆಯಲ್ಲಿ ಪ್ರಸಕ್ತ ಹಣಕಾಸು ಸಾಲಿಗೆ ಪಿಎಫ್ ಶೆ.8.8ರಷ್ಟು ಬಡ್ಡಿ ದರ ನಿಗದಿಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಶೇ.0.25ರಷ್ಟು ಕಡಿತ
ಕೇಂದ್ರ ಸರ್ಕಾರ ಅಂಚೆ ಕಚೇರಿಯ ಅಲ್ಪಾವಧಿ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಶೇ.0.25ರಷ್ಟು ಕಡಿತಗೊಳಿಸಿತ್ತು. ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ಬಡ್ಡಿದರಗಳನ್ನು ಸರಿದೂಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಡ್ಡಿದರವನ್ನು ಕಡಿತಗೊಳಿಸಿತ್ತು.
ರಾಷ್ಟ್ರಪತಿ ಆಡಳಿತ ಕೊನೆ
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ರದ್ದಾಗಿದೆ. ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ ತೀವ್ರ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ, ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು ಬುಧವಾರ ಶಿಫಾರಸು ಮಾಡಿತ್ತು. ಅರುಣಾಚಲ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಅವಕಾಶ ನೀಡದಂತೆ ರಾಜ್ಯಪಾಲರನ್ನು ತಡೆಯಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೆಟ್ರೋಲ್ ಇಳಿಕೆ-ಡೀಸೆಲ್ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ ಹಿನ್ನೆಲೆ ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಮಾಡಲಾಗಿದೆ. ಆದರೆ ಡೀಸೆಲ್ ದರದಲ್ಲಿ ಕೊಂಚ ಏರಿಕೆಯಾಗಿದೆ. ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಲೀಟರ್’ಗೆ 32 ಪೈಸೆಯಷ್ಟು ಇಳಿಸಿವೆ. ಡೀಸೆಲ್ ಬೆಲೆ ಲೀಟರ್’ಗೆ 29 ಪೈಸೆ ಏರಿಕೆಯಾಗಿದೆ. ಫೆ.17ರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬಂದಿದೆ.
 
 
ಲೋಕಾ ಶಾಕ್...
ಕಲಬುರಗಿ ಯಾದಗಿರಿ ನಗರದ ಪಿಡಬ್ಲ್ಯುಡಿ ಇಲಾಖೆ ಎಇಇ ಶಾಂತಪ್ಪ ಟಕ್ಕಳಕಿ ನಿವಾಸ-ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಗಳು ದಾಳಿ ನಡೆಸಿದ್ದಾರೆ. ಕಲಬುರಗಿಯ ಡಾಕ್ಟರ್ಸ್ ಕಾಲೋನಿಯ ಶಾಂರಪ್ಪ ನಿವಾಸ, ಕಚೇರಿ ಮೇಲೆ ಲೋಕ ದಾಳಿ ನಡೆದಿದ್ದು, ಯಾದಗಿರಿಯಲ್ಲಿನ ಕಚೇರಿ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ್ದರು.
ಸ್ವಚ್ಛ ನಗರಕ್ಕೆ ವಿದೇಶದ ಸಹಾಯ ಹಸ್ತ
ಭಾರತದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಮೈಸೂರು ಅಭಿವೃದ್ಧಿಗೆ ಫ್ರಾನ್ಸ್ ಮತ್ತು ಸಿಂಗಾಪುರ್ ನಿಂದ ಅರ್ಥಿಕ ನೆರವು ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾನ್ಸ್ ಭೇಟಿ ಪ್ರತಿಫಲವಾಗಿ ಈ ಎರಡು ದೇಶಗಳು ಮೈಸೂರು ಅಭಿವೃದ್ಧಿಗೆ ಹಣ ನೀಡಲು ಮುಂದಾಗಿದೆ. ಮೈಸೂರಿನಲ್ಲಿ ಸೋಲಾರ್ ಯೋಜನಗೆ ರಸ್ತೆ, ಬಸ್ ನಿಲ್ದಾಣ ಹಾಗೂ ವೃತ್ತಗಳ ಅಭಿವೃದ್ಧಿಗೆ 19 ಕೋಟಿ ರೂ. ವಿನಿಯೋಗಿಸಲು ಮುಂದಾಗಿದೆ. ಇದರೊಂದಿಗೆ ಸಿಂಗಾಪುರ್ ನ ಯುನಿಡಾ ಸಂಸ್ಥೆಯೂ ನಗರಗಳ ಸಮಗ್ರ ಅಭಿವೃದ್ಧಿ ದೃಷ್ಠಿಕೋನ ಎನ್ನುವ ಯೋಜನೆಯಡಿ ಭಾರತದ 5 ನಗರಗಳಲ್ಲಿ ಹಣಕಾಸಿನ ನೆರವು ನೀಡಲಿದೆ.
 
 
 
ಸೇನೆ ಸೇರಲು ಯುವಕರಲ್ಲಿ ಉತ್ಸಾಹ
ಭಾರತೀಯ ವಾಯುಸೇನೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮೈಸೂರಿನ ನಜರ್ ಬಾದ್ ನ ಚಾಮುಂಡಿವಿಹಾರ ಸ್ಟೇಡಿಯಂ ನಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ನೇಮಕಾತಿಗಾಗಿ ರಾಜ್ಯದೆಲ್ಲೆಡೆಯಿಂದ ಯುವಕರ ದಂಡೇ ಆಗಮಿಸಿತ್ತು. ಮೈಸೂರು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರ ಪಾಲಿಕೆ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಗೂ ವಿಮಾನ ಯೋಧರ ಆಯ್ಕೆ ಕೇಂದ್ರದ ವತಿಯಿಂದ ವಾಯುದಳ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನೇಮಕಾತಿ ನಡೆದಿದೆ.
 
 
 
ಕಿಸಾನ್ ಕಲ್ಯಾಣ್ ವಿಮಾ ಗೆ ಚಾಲನೆ
ಕಿಸಾನ್ ಕಲ್ಯಾಣ್ ವಿಮಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದರು. ಮಧ್ಯಪ್ರದೇಶದ ಸಿಹೋರ್ ನಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಐಪಿಎಸ್ ಅಧಿಕಾರಿ ಆತ್ಮಹತ್ಯೆ?
ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಚೆನ್ನೈನ ಎಗ್ಮೋರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರಾದ ಎನ್ ಹರೀಶ್ 2009ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದರು. ಹರೀಶ್ ಕಳೆದ ಮಾರ್ಚ್ ನಲ್ಲಿ ಮದುವೆ ನಿಶ್ಚಯವಾಗಿತ್ತು. ಹರೀಶ್ ಪೋಷಕರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
 
 
ಹಿರಿಯರಿಗೆ ಉಚಿತ ಬಸ್ ಸೇವೆ
ಇನ್ನು ಮುಂದೆ ತಮಿಳುನಾಡಿನ ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳು ಹಿರಿಯ ನಾಗರಿಕರಿಗೆ ಉಚಿತವಾಗಿ ಸೇವೆ ಸಲ್ಲಿಸಲಿದೆ. 2011ರ ವಿಧಾನಸಭಾ ಚುನಾವಣೆ ವೇಳೆ ನೀಡಲಾಗಿದ್ದ ಆಶ್ವಾಸನೆಯನ್ನು ಇದೀಗ ಮುಖ್ಯಮಂತ್ರಿ ಜಯಲಲಿತಾ ಅವರು ಈಡೇರಿಸಿದ್ದು, ಇದೀಗ ತಮಿಳುನಾಡಿನ ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಜಯಲಲಿತಾ ಅವರು ಒಪ್ಪಿಗೆ ಸೂಚಿಸಿದ್ದಾರೆ. ಫೆಬ್ರವರಿ 24 ಜಯಲಲಿತಾ ಅವರು ಹುಟ್ಟುಹಬ್ಬದಂದು ಯೋಜನೆ ಅಧಿಕೃತವಾಗಿ ಜಾರಿಯಾಗಲಿದೆ. ಯೋಜನೆಯಡಿಯಲ್ಲಿ ಹಿರಿಯ ನಾಗರಿಕರು ತಿಂಗಳಿಗೆ 10 ಬಾರಿ ಉಚಿತವಾಗಿ ಸಂಚರಿಸಬಹುದಾಗಿದೆ.
 
 
 
ಆರ್ ಟಿಪಿಎಸ್ ಘಟಕಗಳು ಸ್ಥಗಿತ
ನೀರಿನ ಕೊರತೆದಿಂದಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್‌) 7 ಮತ್ತು 8ನೇ ಘಟಕಗಳು ಬುಧವಾರ ಸ್ಥಗಿತಗೊಂಡಿವೆ. ಕೆಲವು ದಿನಗಳ ಹಿಂದೆ ನೀರಿನ ಕೊರತೆಯಿಂದಲೇ 5ನೇ ಘಟಕ ಎರಡು ದಿನ ಸ್ಥಗಿತಗೊಂಡಿತ್ತು. 1,720 ಮೆಗಾವಾಟ್‌ ಸಾಮರ್ಥ್ಯದ ಆರ್‌ಟಿಪಿಎಸ್‌ನಲ್ಲಿ ವಾರ್ಷಿಕ ದುರಸ್ತಿ ಕಾರಣ 1ನೇ ಘಟಕ ಸ್ಥಗಿತಗೊಂಡಿರುವುದರಿಂದ ಒಟ್ಟು 3ಘಟಕಗಳಲ್ಲಿ ಉತ್ಪಾದನೆ ಇಲ್ಲವಾಗಿದೆ. ಉಳಿದ ಐದು ಘಟಕಗಳಲ್ಲೂ ಉತ್ಪಾದನೆಯನ್ನು ತಾಂತ್ರಿಕ ನಿರ್ವಹಣೆಗೆ ಅಗತ್ಯ ಇರುವಷ್ಟರ ಮಟ್ಟಿಗೆ ಕಡಿಮೆ ಮಾಡಲಾಗಿದೆ.
 
 
ಆತ್ಮಹತ್ಯೆಗೆ ಯತ್ನ
ನಿರ್ಮಾಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ನಿವಾಸದಲ್ಲಿ ‘ಹಾಫ್ ಮೆಂಟ್ಲು’ ಚಿತ್ರದ ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದರು.ಚಿತ್ರ ಬಿಡುಗಡೆಗೆ ಸಹಕಾರ ಸಿಗಲಿಲ್ಲ ಎಂಬ ಕಾರಣಕ್ಕೆ ಹಾಫ್ ಮೆಂಟ್ಲು ಚಿತ್ರದ ನಿರ್ಮಾಪಕ ಶಶಿಕುಮಾರ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
 
 
ಶತಾಯುಷಿ ಸಂಗೀತ ವಿದ್ವಾಂಸ ಇನ್ನಿಲ್ಲ
ದೇಶದ ಅತ್ಯಂತ ಹಿರಿಯ ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಉಸ್ತಾದ್ ಅಬ್ದುಲ್ ರಶೀದ್ ಖಾನ್(107) ಅವರು ಫೆ.18 ರಂದುಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ.
 
 
200ಕ್ಕೂ ಹೆಚ್ಚು ಕೋಟಿ ನಷ್ಟ
ಫೆ.18ರಂದು ಸಂಜೆ ಜೋಗದ ಶರಾವತಿ ವಿದ್ಯುತ್ ಸ್ಥಾವರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿತ್ತು. ಇದರಿಂದ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ವಿದ್ಯುತ್ ಅವಘಡದಿಂದ 200 ಕೋಟಿಗೂ ಅಧಿಕ ನಷ್ಟವಾಗಿದೆ. ಬೇಜವ್ದಾರಿಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. 10 ಘಟಕಗಳ ವಿದ್ಯುತ್ ವಿತರಣಾ ಕೇಬಲ್‌ ಜಾಲ ಸುಟ್ಟು ಭಸ್ಮವಾಗಿದೆ.
 
 
ಕೊನೆಗೂ FIR ದಾಖಲೆ
ಪಂಜಾಬ್‌ನ ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣದ ತನಿಖೆಗೆ ಚುರುಕು ನೀಡಿರುವ ಪಾಕಿಸ್ತಾನ, ಪ್ರಕರಣ ಸಂಬಂಧ ಕೊನೆಗೂ ಎಫ್‌ಐಆರ್ ದಾಖಲಿಸಿದೆ.
2ನೇ ಹಂತದ ಮತದಾನ
ಫೆ.20ರಂದು ಎರಡನೇ ಹಂತದ ಜಿಲ್ಲಾ-ತಾಲೂಕು ಪಂಚಾಯತ್ ಮತದಾನ ನಡೆಯಿತು. ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಉಡುಪಿ, ಬೀದರ್, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಎರಡನೆ ಹಂತದ ಮತದಾನ ಆರಂಭವಾಗಿತ್ತು.
 
 
ಸಿಎಂ ಆಗಿ ಕಲಿಖೊ ಆಯ್ಕೆ
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ರದ್ದಾದ ಬೆನ್ನಲ್ಲೇ ಕಾಂಗ್ರೆಸ್ ನ ಬಂಡಾಯ ನಾಯಕ ಕಲಿಖೊ ಪುಲ್ ಅವರು ಅರುಣಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
 
 
ಬೂತ್ ನಲ್ಲಿ ಘರ್ಷಣೆ
ಮತದಾನ ಬೂತ್ ನಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ಘರ್ಷಣೆಯಾಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಡೂರು ಮತಗಟ್ಟೆಯಲ್ಲಿ ನಡೆದಿದೆ.ವಿಶ್ವ ಹಿಂದೂ ಪರಿಷತ್ ನ ಮುಖಂಡ, ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆ ನಡೆದಿದೆ. ಇಬ್ಬರು ಮುಖಂಡರ ಮೇಲೆ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
 
 
ಮಣ್ಣಲ್ಲಿ ಮಣ್ಣಾದ ಐಪಿಎಸ್ ಅಧಿಕಾರಿ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸ್ವಗ್ರಾಮ ಬಂಡೆ ಹೂಸೂರುನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಐಪಿಎಸ್ ಹರೀಶ್ ಅವರ ಅಂತ್ಯಕ್ರಿಯೆ ನಡೆದಿದೆ.
 
 
ಸಚಿವರಿಗೆ ಧಮ್ಕಿ
ಕಾಂಗ್ರೆಸ್ ಸಚಿವ ಅಭಯ್ ಚಂದ್ರ ಜೈನ್ ಮತ್ತು ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮಧ್ಯೆ ಭಾರಿ ಜಟಾಪಡಿ ನಡೆದಿದೆ.ಅಭಯ್ಚಂದ್ರ ಜೈನ್ ಗೆ ಬಿಜೆಪಿ ನಾಯಕ ಜಗದೀಶ್ ಧಮ್ಕಿ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೋರುಗುಡ್ಡೆ ಮತದಾನ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದ ವೇಳೆ ಈ ಘಟನೆ ಸಂಭವಿಸಿದೆ.ಜಗದೀಶ್ ಅಧಿಕಾರಿ ಏಕವಚನದಲ್ಲೇ ನಿಂದಿಸಿದ್ದಾರೆ ಎನ್ನಲಾಗಿದೆ.
 
 
ರಾಷ್ಷ್ರಪಿತ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಒಲಿ
ಆರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರು ಇಂದು ರಾಜ್ ಘಾಟ್ ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
 
 
ಐಎಂಎಫ್ ನಿರ್ದೇಶಕಿಯಾಗಿ ಲಗಾರ್ಡೆ
ಅಂತಾರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿಯಾಗಿ ಮುಂದಿನ ಐದು ವರ್ಷಗಳವರೆಗೆ ಕ್ರಿಸ್ಟಿನ್ ಲಗಾರ್ಡೆ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.ಜೂನ್ 5ರಿಂದ ಅವರ ಅಧಿಕಾರಾವಧಿ ಪ್ರಾರಂಭವಾಗಲಿದೆ. ಐಎಂಎಫ್ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೊಲ್ಲೂರು ದೇಗುಲದಲ್ಲಿ ಕಳವು
ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ದೇಗುಲಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣ ಕಳ್ಳತನವಾಗಿತ್ತು.
 
 
ಮುಂದುವರಿದ ಉಗ್ರರ ದಾಳಿ
ಕಾಶ್ಮೀರದ ಪ್ಯಾಂಪೋರ್ ನಲ್ಲಿ ಮುಂದುವರಿದ ಸೇನೆ – ಉಗ್ರರ ನಡುವೆ ಮುಂದುವರಿದ ಗುಂಡಿನ ದಾಳಿ.ಓರ್ವ ಸೈನಿಕನಿಗೆ ತಗುಲಿದ ಗುಂಡೇಟು,ಆಸ್ಪತ್ರೆಗೆ ದಾಖಲಿಸಲಾಗಿದೆ.
 
 
ಬಸದಿಯಲ್ಲಿ ಕಳ್ಳತನ
ಕಾರ್ಕಳ ತಾಲೂಕಿನ ಶಿರ್ಲಾಲು ಅನಂತನಾಥಸ್ವಾಮಿ ಬಸದಿಯ ಬೀಗ ಮುರಿದ ದರೋಡೆಕೋರರು, ಆದಿನಾಥ ಮೂರ್ತಿ ಸೇರಿದಂತೆ ಹಲವು ದೇವರ ಮೂರ್ತಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸಿಎಂರತ್ತ ಕವರ್ ಎಸೆದ ವ್ಯಕ್ತಿಯ ಬಂಧನ
ಬಾಂಬ್ ಇದೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಗೆ ವಸ್ತುವೊಂದನ್ನು ಎಸೆದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ವೇಳೆ, ಇದು ಬಾಂಬ್ ಎಂದು ಹೇಳಿ, ಕೈಯಲ್ಲಿದ್ದ ಕವರೊಂದನ್ನು ಸಿಎಂ ಕಡೆಗೆ ಎಸೆದಿದ್ದಾನೆ.
 
 
ಸಾಹಿತಿ ಡಾ.ಎಂ.ಅಕಬರ ಅಲಿ ಇನ್ನಿಲ್ಲ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾಹಿತಿ, ಚುಟುಕು ಕವಿ ಡಾ.ಎಂ.ಅಕಬರ ಅಲಿ(92 ವ) ಭಾನುವಾರ ಬೆಳಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮುಂದುವರಿದ ಉಗ್ರರ ದಾಳಿ
ಕಾಶ್ಮೀರದ ಪಂಪೋರ್ ನಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಈವರೆಗೆ ಐವರು ಯೋಧರು ಸೇರಿ ಆರು ಮಂದಿ ಬಲಿಯಾಗಿದ್ದಾರೆ. ಜೆಕೆಇಡಿ ಇನ್ಸ್ ಟಿಟ್ಯೂಟ್ ನಲ್ಲಿ ಉಗ್ರರು ಆಡಗಿದ್ದಾರೆ.
 
 
ಡಾಕ್ಟರೇಟ್ ಬೇಡವೆಂದ ಮೋದಿ
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ನೀಡಲು ಉದ್ದೇಶಿಸಿದ್ದ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂತಹ ಪದವಿಗಳನ್ನು ಪಡೆಯಬಾರದು ಎಂಬುದು ನನ್ನ ಸಿದ್ಧಾಂತವಾಗಿದೆ ಎಂದಿದ್ದಾರೆ.
 
 
ಮಹಾಕುಂಭಮೇಳಕ್ಕೆ ತೆರೆ
ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿರುವ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಲಿದೆ. ಕಾವೇರಿ, ಕಪಿಲ ನದಿಗಳು, ಸ್ಫಟಿಕ ಸರೋವರದ ಸಂಗಮಸ್ಥಳದಲ್ಲಿ ಮೂರು ದಿನಗಳ ಕಾಲ ನಡೆದ ಐತಿಹಾಸಿಕ ಮಹಾಕುಂಭಮೇಳ ಇಂದು ಕೊನೆಗೊಳ್ಳಲಿದೆ.
 
 
3 ರಾಜ್ಯಗಳಿಗೆ ನೋಟಿಸ್
ಹರಿಯಾಣದಲ್ಲಿ ಜಾಟ್ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಮುನಾಕ್ ಕೆನಾಲ್ ನಿಂದ ನೀರು ಸರಬರಾಜು ಸ್ಥಗಿತಗೊಳಿಸುವಂತೆ ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶಕ್ಕೆ ನೋಟಿಸ್ ನೀಡಲಾಗಿದೆ. ಎರಡು ದಿನದೊಳಗೆ ಉತ್ತರ ನೀಡುವಂತೆ ಸುಪ್ರೀಕೋರ್ಟ್ ಮೂರು ರಾಜ್ಯಗಳಿಗೆ ಸೂಚಿಸಿದೆ.
 
 
1080 ಯೋಜನೆಗಳಿಗೆ ಅನುಮೋದನೆ
ಬೆಂಗಳೂರಿನಲ್ಲಿ ‘ಇನ್ವೆಸ್ಟ್ ಕರ್ನಾಟಕ’ ಸಮ್ಮೇಳದ ಹಿನ್ನೆಲೆಯಲ್ಲಿ 1080 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 20 ವಿವಿಧ ಕ್ಷೇತ್ರಗಳ 1080 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಬೃಹತ್ ಕೈಗಾರಿಕಾಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
 
 
ವಿದ್ಯಾರ್ಥಿಗಳ ಮೇಲೆ ಹಲ್ಲೆ
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಬಿಹೆಚ್ ಯು ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲಿ ನಡೆದಿದೆ. ವಾರಾಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿ ಸಂಘದ ಚುನಾವಣೆಗೆ ಆಗ್ರಹಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ.
 
 
ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ
ಮಹಿಳೆಯೊಬ್ಬಳು ನಡುರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಾಗಭಾವಿ ಗ್ರಾಮದ ನಡೆದಿದೆ.ತುಂಬು ಗರ್ಭಿಣಿ ಈರಮ್ಮ ಗಂಡನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
 
 
 
ಹಾಪ್ ಕಾಮ್ಸ್ ಗೆ ಸುದೀಪ್ ಅಂಬಾಸಿಡರ್
ಹಾಪ್ ಕಾಮ್ಸ್ ಗೆ ನಟ ಸುದೀಪ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮಗಳಿಗೆ ಹಾಪ್ ಕಾಮ್ಸ್ ಎಂಡಿ ಡಾ. ಬಿ ಕೃಷ್ಣ ಮಾಹಿತಿ ನೀಡಿದ್ದಾರೆ. ನಟ ಸುದೀಪ್ ಉಚಿತವಾಗಿ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ರೈತರ ಪರ ಹಾಪ್ ಕಾಮ್ಸ್ ಪ್ರಮೋಷನ್ ಲ್ಲಿ ಸುದೀಪ್ ಭಾಗಿಯಾಗಿದ್ದಾರೆ.
 
 
ದೇಶದ್ರೋಹಿಯ ಬಂಧನ
ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.
 
 
ಬಾಲಿವುಡ್ ಗೆ ಹಾರಿದ ಮೈತ್ರೀಯ
ಸ್ಯಾಂಡಲ್ ವುಡ್ ನಟಿ ಮೈತ್ರೇಯಿ ಗೌಡ ಅವರು ಬಾಲುವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ‘ಹಾರರ್ ಶ್ರಾಪ್’ ಚಿತ್ರದ ಮೂಲಕ ಬಾಲಿವುಡ್ ಗೆ ಹಾರಿದ್ದಾರೆ.
 
 
ಫೆ.23ರಂದು ಜಿಲ್ಲಾ ಮತ್ತು ತಾಲೂಕುಗಳ ಪಂಚಾಯತ್ ಮತದಾನದ ಮತ ಎಣಿಕೆ ನಡೆಯಿತು.
 
 
ದ.ಕ.ಜಿ.ಪಂ ನಲ್ಲಿ ಅರಳಿದ ಹೂವಿಗೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಪೂರ್ಣ ಫಲಿತಾಂಶ ಲಭ್ಯವಾಗಿದೆ. ದ.ಕ. ಜಿಲ್ಲಾ ಪಂಚಾಯತ್ ಬಿಜೆಪಿ ಮಡಿಲಿಗೆ ಸೇರಿದೆ. ಇಲ್ಲಿ ಒಟ್ಟು 36 ಕ್ಷೇತ್ರಗಳಿದ್ದು, ಬಿಜೆಪಿ 21 ಸ್ಥಾನ ಗಳಿಸಿ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ 15 ಸ್ಥಾನ ಪಡೆದಿದ್ದು, ಜೆಡಿಎಸ್ ಮತ್ತು ಇತರೆ ಪಕ್ಷಗಳು ವಾಶ್ ಔಟ್ ಆಗಿದೆ.
ಉಡುಪಿ ಜಿ.ಪಂ ಬಿಜೆಪಿ ತೆಕ್ಕೆಗೆ
ಉಡುಪಿ ಜಿಲ್ಲಾ ಪಂಚಾಯತ್ ನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಉಡುಪಿ ಜಿ.ಪಂ ಬಿಜೆಪಿ ತೆಕ್ಕೆಗೆ ಸೇರಿದೆ.
ಒಟ್ಟು 26 ಜಿ.ಪಂ. ಕ್ಷೇತ್ರಗಳಿದ್ದು, 20 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 6 ಸ್ಥಾನ ಗಳಿದೆ.
ಮಂಗಳೂರು ತಾಲೂಕು ಪಂಚಾಯತ್
ಮಂಗಳೂರು ತಾಲೂಕು ಪಂಚಾಯತ್ ನ 39 ಕ್ಷೇತ್ರಗಳಲ್ಲಿ ಬಿಜೆಪಿ 19 ಸ್ಥಾನ ಪಡೆದಿದ್ದು, ಕಾಂಗ್ರೆಸ್ 20 ಸ್ಥಾನಗಳಲ್ಲಿ ಜಯ ಗಳಿಸಿದೆ.
ವಿಮಾನ ನಾಪತ್ತೆ
21 ಜನರನ್ನು ಕರೆದೊಯ್ಯುತ್ತಿದ್ದ ವಿಮಾನ ನಾಪತ್ತೆಯಾಗಿದೆ. ನೇಪಾಳದ ಪರ್ವತ ಪ್ರದೇಶದಲ್ಲಿ ನೇಪಾಳಕ್ಕೆ ಸೇರಿದ ವಿಮಾನ ನಾಪತ್ತೆಯಾಗಿದೆ.ಪೋಖ್ರಾ ವಿಮಾನ ನಿಲ್ದಾಣದಿಂದ ಬೆಳಗ್ಗೆ 7.45ಕ್ಕೆ ವಿಮಾನ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿತವಾಗಿದೆ.
 
ವಿಮಾನದ ಅವಶೇಷ ಪತ್ತೆ
ನೇಪಾಳದಲ್ಲಿ ನಾಪತ್ತೆಯಾದ ವಿಮಾನದ ಅವಶೇಷಗಳು ಪತ್ತೆಯಾಗಿದೆ. ನೇಪಾಳದ ಪರ್ವತ ಶ್ರೇಣಿಯಲ್ಲಿ ಲಘು ವಿಮಾನ ಪತನವಾಗಿದೆ.
 
 
ಸಾರಿಗೆ ಸಂಸ್ಥೆಯಲ್ಲಿ ಕಳ್ಳತನ
ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಮತ್ತೆ ಬಿಡಿಭಾಗಗಳ ಕಳವು ಆಗುತ್ತಿದೆ. ಹುಬ್ಬಳ್ಳಿ ವಾಯುವ್ಯ ಸಾರಿಗೆಯ ಪ್ರಾದೇಶಿಕ ಕಾರ್ಯಗಾರದಲ್ಲಿ ಬಿಡಿಭಾಗಗಳ ಕಳ್ಳತನವಾಗಿದೆ.
ಸುಮಾರು 20 ಲಕ್ಷ ಮೌಲ್ಯದ ಬಸ್ ನ ಬಿಡಿ ಭಾಗಗಳನ್ನು ಕದ್ದು ಸಾಗಿಸಲಾಗಿದೆ.
ಚೊಚ್ಚಲ ಪಂದ್ಯ ಆರಂಭ
ಇಂದಿನಿಂದ ಚೊಚ್ಚಲ ಟಿ-20 ಏಷ್ಯಾ ಕಪ್ ಪಂದ್ಯ ಆರಂಭವಾಗಲಿದೆ. ಬಾಂಗ್ಲಾ ದೇಶದ ಮೀರ್ ಪುರ್ ನಲ್ಲಿ ಟೀಂಇಂಡಿಯಾ ಮತ್ತು ಬಾಂಗ್ಲಾ ತಂಡಗಳ ನಡುವೆ ಫೈಟ್ ನಡೆಯಲಿದೆ.
ರೋಹಿತ್ ಆತ್ಮಹತ್ಯೆ ಪ್ರತಿಧ್ವನಿ
ರಾಜ್ಯ ಸಭೆ-ಲೋಕಾಸಭೆಯಲ್ಲಿ ಕಲಾಪ ಆರಂಭವಾಗಿದೆ. ರಾಜ್ಯಸಭೆಯಲ್ಲಿ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆ ಪ್ರಕರಣ ಪ್ರತಿಧ್ವನಿ ಎತ್ತಿದೆ. ಬಿಎಸ್ ಪಿ ಮುಖ್ಯಸ್ಥೆ, ಸಂಸದೆ ಮಾಯಾವತಿ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ.
ರೈಲ್ವೆ ಬಜೆಟ್ ನಲ್ಲಿ ಕರ್ನಾಟಕ ಕಡೆಗಣನೆ!
ಲೋಕಸಭೆಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರತಿಧ್ವನಿಯೆತ್ತಿದೆ. ಕರ್ನಾಟದ ಶೇ.40ರಷ್ಟು ಭಾಗಕ್ಕೆ ರೈಲ್ವೆ ಸಂಪರ್ಕವಿಲ್ಲ.ಪ್ರತಿ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕವನ್ನು ಕಡೆಗಣನೆ ಮಾಡಲಾಗಿದೆ ಎಂದು ಲೋಕಾಸಭೆಯಲ್ಲಿ ರೈಲ್ವೆ ಸಚಿವರಿಗೆ ಪ್ರಹ್ಲಾದ್ ಜೋಷಿ ಪ್ರಶ್ನಿಸಿದ್ದಾರೆ.
 
 
ಪ್ರಮಾಣ ವಚನ ಸ್ವೀಕಾರ
ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಸುಭ್ರೋ ಕಮಲ್ ಮುಖರ್ಜಿ ಅವರು ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು.
 
 
ಜಿಲ್ಲಾಧಿಕಾರಿಗಳೇ ನಿಮಗೆ ನಾಚಿಕೆಯಾಗ್ಬೇಕು!
ಗಂಗಾ ನದಿಯಲ್ಲಿ ಮೂತ್ರ ಮಾಡಿ ಜಿಲ್ಲಾಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಹಿಂದೂಗಳ ಪವಿತ್ರ ನದಿ ಗಂಗೆಯಲ್ಲಿ ಅಲಹಾಬಾದ್ ಡಿಸಿ ಒಬ್ಬರು ಮೂತ್ರ ಮಾಡಿ ಸಿಕ್ಕಿಬಿದ್ದಿದ್ದಾರೆ.ಗ೦ಗಾ-ಯಮುನಾ-ಸರಸ್ವತಿ ನದಿಗಳ ಸ೦ಗಮ ಸ್ಥಳವಾಗಿರುವ ತ್ರಿವೇಣಿ ಸಂಗಮದಲ್ಲಿ “ತ್ರಿವೇಣಿ ಮಹೋತ್ಸವ’ ಆಚರಿಸುವ ಸ೦ಬ೦ಧ ಪರಿಶೀಲನೆ ನಡೆಸುತ್ತಿದ್ದ ವೇಳೆ “ಕ್ಲೀನ್ ಗ೦ಗಾ’ ಬರಹವಿದ್ದ ಟಿ ಶಟ್‍೯ ಧರಿಸಿದ್ದ ಅಲಹಾಬಾದ್‍ನ ಹೆಚ್ಚುವರಿ ಜಿಲ್ಲಾಧಿಕಾರಿ ಒ.ಪಿ. ಶ್ರೀವಾಸ್ತವ ಈ ಕೃತ್ಯ ಎಸಗಿದ್ದಾರೆ.
 
 
ಇರಾನಿ-ಮಾಯಾವತಿ ವಾಗ್ವಾದ
ರಾಜ್ಯ ಸಭೆ ಕಲಾಪದಲ್ಲಿ ಹೈದರಾಬಾದ್ ವಿವಿಯಲ್ಲಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ ವಿಚಾರ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಮಾಯಾವತಿ ಮಧ್ಯೆ ವಾಗ್ವಾದ ನಡೆದಿದೆ.
 
 
ಬಾಡಿಗೆ ಬೈಕ್ ಗೆ ಚಾಲನೆ
ಇಂದು ಬೆಂಗಳೂರಿನ ಲಾಲ್ ಬಾಗ್ ಬಳಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಾಡಿಗೆ ಬೈಕ್ ಸೇವೆಗೆ ಚಾಲನೆ ನೀಡಿದ್ದಾರೆ. ಬೈಕ್ ಓಡಿಸಿ ಖುಷಿಪಟ್ಟ ಸಚಿವ ರಾಮಲಿಂಗಾ ರೆಡ್ಡಿಯವರು ಬಾಡಿಗೆ ಬೈಕ್ ಸೇವೆಗೆ ಚಾಲನೆ ನೀಡಿದ್ದಾರೆ. ಗಂಟೆಗೆ 10 ರೂಪಾಯಿಯಂತೆ ಬೈಕ್ ಗೆ ಬಾಡಿಗೆ ನಿಗದಿಪಡಿಸಲಾಗಿದೆ. ಈ ಬಾಡಿಕೆ ಸೇವೆಯನ್ನು ಖಾಸಗಿ ಸಂಸ್ಥೆ ಆರಂಭಿಸಿದೆ.
ಜಾಗೃತಿ ಮೂಡಿಸುವ ಚಿತ್ರ ಮುದ್ರಿಸಬೇಕು
ತಂಬಾಕು ಹಾಕಿಕಾರಕ ಎಂಬ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ತಂಬಾಕು ಉತ್ಮನ್ನಗಳ ಮೇಲೆ ಶೇ.85ರಷ್ಟು ಜಾಗೃತಿ ಚಿತ್ರ ಮುದ್ರಿಸಬೇಕು. ಈ ಹಿಂದೆ ಶೇ85ರಷ್ಟು ಪ್ರಮಾಣದ ಚಿತ್ರ ಮುದ್ರಿಸುವುದ್ದಕ್ಕೆ ತಡೆ ನೀಡಲಾಗಿತ್ತು. ಈಗ ಈ ತಡೆಯಾಜ್ಷೆಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ತೆರವುಗೊಳಿಸಿದೆ.
 
 
ಸಂಜಯ್ ರಿಲೀಸ್
1993ರ ಮುಂಬೈ ಸರಣಿ ಬಾಂಬ್ ಪ್ರಕರಣದ ಆರೋಪಿ ಬಾಲಿವುಡ್ ನಟ ಸಂಜಯ್ ದತ್ ಗೆ ಬಿಡುಗಡೆ ಭಾಗಯ್ ದೊರಕಿದೆ.ಮಹಾರಾಷ್ಟ್ರದ ಪುಣೆಯಲ್ಲಿರುವ ಯರವಾಡ ಜೈಲಿನಿಂದ ಸಂಜಯ್ ದತ್ ರಿಲೀಸ್ ಆಗಿದ್ದಾರೆ. ಬಿಡುಗಡೆಯಾದ ದತ್ ಅವರನ್ನು ಅವರ ಪತ್ನಿ ಮಾನ್ಯತಾ ಬರಮಾಡಿಕೊಂಡಿದ್ದಾರೆ. ಜತೆಗೆ ಬಾಲುವುಡ್ ನಿರ್ದೇಶಕ ರಾಜು ಇರಾನಿ ಉಪಸ್ಥಿತರಿದ್ದರು.
ಬಜೆಟ್ ಮಂಡಿಸಿದ ಸುರೇಶ್ ಪ್ರಭು
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಸಭೆ ಅಧಿವೇಶನದಲ್ಲಿ 2016-17ನೇ ಸಾಲಿನ ರೈಲ್ವೆ ಬಜೆಟ್ ಮಂಡನೆ ಮಾಡಿದ್ದಾರೆ.
ಅಮೆರಿಕಾದಲ್ಲಿ ಗುಂಡಿನ ದಾಳಿ
ಅಮೆರಿಕದ ಕನ್ಸಾಸ್ ನಗರದಲ್ಲಿರುವ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಏಳು ಮಂದಿ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.ಫೋರ್ಡ್ ಫ್ಯಾಕ್ಟರಿಯ ಮಾಜಿ ನೌಕರ ಸೆಡ್ರಿಕ್ ಫೋರ್ಡ್ ಗುರುವಾರ ಫ್ಯಾಕ್ಟರಿ ಒಳಗೆ ಗುಂಡು ಹಾರಿಸಿದ್ದಾನೆ, ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
 
 
ಯುನೈಟೆಡ್ ಸ್ಪಿರಿಟ್ಸ್ ಗೆ ಮಲ್ಯ ರಾಜೀನಾಮೆ
ಭಾರೀ ನಷ್ಟ ಅನುಭವಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯ ನಿರ್ವಹಣೇತರ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ಐಸಿಸಿ ಅಧಿಕಾರಿಗಳ ಪಟ್ಟಿಯಲ್ಲಿ ಶ್ರೀನಾಥ್ ಗೆ ಸ್ಥಾನ
ಐಸಿಸಿ ಟಿ20 ವಿಶ್ವಕಪ್ ಸರಣಿಗೆ ಭಾರತ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿ 6 ಮಂದಿ ಭಾರತೀಯರು ಆಧಿಕಾರಿಗಳ ಪಟ್ಟಿಗೆ ಆಯ್ಕೆಯಾಗಿದ್ದಾರೆ.
ಟಿ20 ವಿಶ್ವಕಪ್ ಸರಣಿಯಲ್ಲಿ ಐಸಿಸಿ ಪರವಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸುವ ಉನ್ನತ ಮಟ್ಟದ 31 ಅಧಿಕಾರಿಗಳ ಪಟ್ಟಿಯಲ್ಲಿ ಜಾವಗಲ್ ಶ್ರೀನಾಥ್ ಸೇರಿದಂತೆ ಒಟ್ಟು ಆರು ಭಾರತೀಯರು ಆಯ್ಕೆಯಾಗಿದ್ದಾರೆ.
ಪೊಲೀಸರ ಕ್ರಮಕ್ಕೆ ಖಂಡನೆ
ಜೆಎನ್ ಯು ನಲ್ಲಿ ದೇಶವಿರೋಧಿ ಘೋಷಣೆ ಪ್ರಕರಣದಲ್ಲಿ ಪೊಲೀಸರು ವಿವಿ ವಿದ್ಯಾರ್ಥಿಗಳನ್ನು ನಡೆಸಿಕೊಂಡ ಕ್ರಮಕ್ಕೆ ಖಂಡನೆ ವ್ಯಕ್ತವಾಗಿದೆ. ದೆಹಲಿ ಪೊಲೀಸರ ಕ್ರಮ ಖಂಡಿಸಿ ನಿವೃತ್ತ ಉಪನ್ಯಾಸಕ ಚಮನ್ ಲಾಲ್ ಪ್ರಶ್ತಿ ವಾಪಸ್ ನೀಡಿದ್ದಾರೆ. ಜೆಎನ್ ಯು ವಿವಿ ನಿವೃತ್ತ ಉಪನ್ಯಾಸಕ ಚಮನ್ ಲಾಲ್ ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ತೀವ್ರ ಅಸಮಾಧಾನಗೊಂಡಿದ್ದಾರೆ.
 
 
ಭಾರತೀಯರು ಪಾಕ್ ಜೈಲಿನಲ್ಲಿದ್ದಾರೆ!
ಪಾಕಿಸ್ತಾನ ಜೈಲಿನಲ್ಲಿ 445 ಭಾರತೀಯರು ಬಂಧಿಯಾಗಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಕೆ ಸಿಂಗ್ ಮಾಹಿತಿ ನೀಡಿದ್ದಾರೆ.1971ರಿಂದ ಈವರೆಗೆ 54 ಯುದ್ಧಕೈದಿಗಳು ನಾಪತ್ತೆಯಾಗಿದ್ದು, 74 ಜನ ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.ಇವರೆಲ್ಲರೂ ಪಾಕ್ ಜೈಲಿನಲ್ಲಿರುವುದಾಗಿ ಮಾಹಿತಿ ಲಭ್ಯವಾಗಿದೆ. ಪಾಕ್ ಜೈಲಿನಲ್ಲಿ 392 ಭಾರತೀಯ ಮೀನುಗಾಗರರು ಬಂಧಿಯಾಗಿದ್ದಾರೆ. ಬಂಧಿತರ ಬಿಡುಗಡೆಗೆ ಭಾರತ ಸರ್ಕಾರ ಪ್ರಯತ್ನ ಮಾಡುತ್ತಿದೆ. ಕೈದಿಗಳು ತನ್ನ ಜೈಲಿನಲ್ಲಿಲ್ಲ ಎಂದು ಪಾಕ್ ಹೇಳುತ್ತಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಹಂಚಿಕೆ
ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ ವಿದ್ಯುತ್ ಹಂಚಿಕೆಯಾಗಿದೆ. ವಿದ್ಯುತ್ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರದ ಸಹಕಾರ ದೊರಕಿದೆ. ಕೇಂದ್ರದ ಗ್ರಿಡ್ ನಿಂದ ರಾಜ್ಯಕ್ಕೆ 319 ಮೆಗಾವ್ಯಾಟ್ ವಿದ್ಯುತ್ ಬಿಡುಗಡೆಯಾಗಿದೆ. ಕರ್ನಾಟಕ ರಾಜ್ಯ ಬಿಜೆಪಿ ಸಂಸದರ ಮನವಿ ಮೇರೆಗೆ ವಿದ್ಯುತ್ ಹಂಚಿಕೆ ಮಾಡುವಂತೆ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಆದೇಶಿಸಿದ್ದಾರೆ.
 
 
ಕಲ್ಲಿದ್ದಲು ಪೂರೈಕೆ ಪ್ರಮಾಣ ಹೆಚ್ಚಳ
ರಾಜ್ಯದ ಎರಡು ಉಷ್ಣ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯ ಪ್ರಮಾಣವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ರಾಯಚೂರು, ಬಳ್ಳಾರಿ ಘಟಕಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿ ಹೆಚ್ಚಳ ಮಾಡಲಾಗಿದೆ. ರಾಯಚೂರು ಘಟಕಕ್ಕೆ ಈವರೆಗೆ 1.7 ಲಕ್ಷ ಟನ್ ಪೂರೈಕೆ ಮಾಡಲಾಗಿದೆ. ಈಗ 6,17,240 ಟನ್ ಕಲ್ಲಿದ್ದಲು ಪೂರೈಸಲು ತೀರ್ಮಾನಿಸಲಾಗಿದೆ. ಬಳ್ಳಾರಿ ಘಟಕಕ್ಕೆ ಈವರೆಗೆ 9300 ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ಈಗ 2.60 ಟನ್ ಕಲ್ಲಿದ್ದಲು ಪೂರೈಕೆಗೆ ಸರ್ಕಾರ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ.
 
 
ಉದಯ ಯೋಜನೆಗೆ ಸೇರ್ಪಡೆ
ಉದಯ’-ವಿದ್ಯುತ್ ಪೂರೈಕೆ ಎಲ್ ಇಡಿ ಬಲ್ಬ್ ಯೋಜನೆಗೆ ಕರ್ನಾಟಕವೂ ಸೇರಬೇಕೆಂದು ನಾನು ಒತ್ತಾಯ ಮಾಡುತ್ತೇನೆ ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ನಿಯಮ ಬಿಗಿಗೊಳಿಸಿದ ಪಿಎಎಫ್ಒ
ಪಿಂಚಣಿ ಹಣ ಹಿಂಪಡೆಯಲು ಹಾಗೂ ಆ ಹಣವನ್ನು ವರಿಷ್ಠ ಪಿಂಚಣಿ ಭೀಮಾ ಯೋಜನೆಯಡಿ ಹೂಡಿಕೆ ಮಾಡಲು ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (ಪಿಎಎಫ್ ಒ) ನಿಯಮಗಳನ್ನು ಬಿಗಿಗೊಳಿಸಿದೆ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಭವಿಷ್ಯ ನಿಧಿ ಗ್ರಾಹಕರು ಪಿಎಫ್ ಹಣದ ಶೇಕಡಾ 90 ಭಾಗವನ್ನು ತಮಗೆ 54 ವರ್ಷವಾದಾಗ ಪಡೆಯಬಹುದಾಗಿತ್ತು. ಆದರೆ ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಮತ್ತೆ ಮೂರು ವರ್ಷಗಳವರೆಗೆ ಕಾಯಬೇಕಾಗುತ್ತದೆ.
 
 
ಪಿಯುಸಿ ಪರೀಕ್ಷೆಯಲ್ಲಿ ವಾಚ್ ನಿಷೇಧ
ದ್ವಿತೀಯ ಪಿಯುಸಿ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ವಾಚ್ ಕಟ್ಟದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ. ವಿದ್ಯಾರ್ಥಿಗಳು ಮೊಬೈಲ್, ಪೆನ್‌ಡ್ರೈವ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತರದಂತೆ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದೆ.
ಕುಂದಾನಗರಿಯಲ್ಲಿ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಕುಂದಾನಗರಿಗೆ ಬೆಳಗಾವಿಗೆ ಆಗಮಿಸಿದ್ದರು. ಫಸಲ್ ಭೀಮಾ ಯೋಜನೆ ಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿ ಕುಂದಾನಗರಿ ಬೆಳಗಾವಿಯಲ್ಲಿ ಸಭೆ ನಡೆಸಿ, ಯೋಜನೆಗೆ ಚಾಲನೆ ನೀಡಿದ್ದಾರೆ.
 
 
ಪೋಸ್ಟರ್ ಪತ್ತೆ
ದೆಹಲಿ ಜೆಎನ್ ಯುನಲ್ಲಿ ದೇಶ ವಿರೋಧಿ ಘೋಷಣೆ ಪ್ರಕರಣದ ಹಿನ್ನೆಲೆಯಲ್ಲಿ ನೆಹರು ವಿವಿ ಆವರಣದಲ್ಲಿ ವಿವಾದಾತ್ಮಕ ಪೋಸ್ಟರ್ ಪತ್ತೆಯಾಗಿದೆ. ‘ಭಾರತ ವಿವಿಧ ರಾಷ್ಟ್ರೀಯತೆಗಳ ಜೈಲು’ ಎಂಬ ಬರವಣಿಗೆಯ ಪೋಸ್ಟರ್ ಪತ್ತೆಯಾಗಿದೆ. ಕಾಶ್ಮೀರದ ಸ್ವಯಂನಿರ್ಣಯ ಹಕ್ಕು ಬೆಂಬಲಿಸುವ ಪೋಸ್ಟರ್ ಇದಾಗಿದೆ.
 
 
 
74ನೇ ವಸಂತಕ್ಕೆ ಕಾಲಿಟ್ಟ ಬಿಎಸ್ ವೈ
ಇಂದು ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪರ 74ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ‘ಗೋ ಸಂರಕ್ಷಣೆ’ ಘೋಷವಾಕ್ಯದೊಂದಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.
ವಿದ್ಯಾರ್ಥಿಗಳ ನಡುವೆ ಘರ್ಷಣೆ
ವಿದ್ಯಾರ್ಥಿಗಳ ನಡುವೆ ಘರ್ಷಣೆಯಾದ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಸಂಭವಿಸಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯಗಳಾಗಿವೆ.
ಫಿಫಾಗೆ ಜಿಯಾನಿ ಆಯ್ಕೆ
ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಫಿಫಾ)ಗೆ ಸ್ವಿಜರ್ಲೆಂಡ್ ನ ಜಿಯಾನಿ ಇನ್‌ಫ್ಯಾಂಟಿನೊ ಆಯ್ಕೆಯಾಗಿದ್ದಾರೆ.
ಕರಾವಳಿ ಕಾವಲು ಪಡೆಯ ನೂತನ ಸಾರಥಿ
ರಾಷ್ಟ್ರೀಯ ಕರಾವಳಿ ಕಾವಲು ಪಡೆಯ ನೂತನ ಮಹಾ ನಿರ್ದೇಶಕರಾಗಿ ರಾಜೇಂದ್ರ ಸಿಂಗ್ ಶನಿವಾರ ಅಧಿಕಾರ ಸ್ವೀಕರಿಸಿದರು. ಕ್ಯಾಬಿನೇಟ್ ನೇಮಕಾತಿ ಸಮಿತಿ ಸಿಂಗ್ ಅವರ ನೇಮಕಾತಿ ಆದೇಶವನ್ನು ಗುರುವಾರ ಹೊರಡಿಸಿತ್ತು.ಫೆ.27ರಂದು ಮೀರ್ ಪುರದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ನ 4ನೇ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು.
ವಾರ್ಷಿಕ ಬಜೆಟ್ ಮಂಡನೆ
2016-17 ನೇ ಕೇಂದ್ರ ವಾರ್ಷಿಕ ಬಜೆಟ್ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಧಾನಮಂತ್ರಿ ಮೋದಿ ಸರ್ಕಾರದ 3ನೇ ಬಜೆಟ್ ಇದಾಗಿದ್ದು, ಸಚಿವ ಅರುಣ್ ಜೇಟ್ಲಿ ಅವರು ಮೂರನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ.
 
 
88ನೇ ಅಸ್ಕರ್ ಪ್ರಶಸ್ತಿ ಪ್ರದಾನ
ಪ್ರತಿಷ್ಠಿತ 88ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ಸೋಮವಾರ ಆರಂಭಗೊಂಡಿತ್ತು. ಹಾಲಿವುಡ್ ನ ಅದ್ದೂರಿ ಸಮಾರಂಭದಲ್ಲಿ ಭಾರತೀಯ ಬೆಡಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿರೂಪಕಿಯಾಗಿ ಮಿಂಚಿದ್ದಾರೆ.
ಈ ಬಾರಿ’ಮ್ಯಾಡ್ ಮ್ಯಾಕ್ಸ್-ಪ್ಯೂರಿ ರೋಡ್’ ಚಿತ್ರ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.ಮ್ಯಾಡ್ ಮ್ಯಾಕ್ಸ್ ಫ್ಯೂರಿ ಸಿನಿಮಾ ಖ್ಯಾತ ನಿರ್ದೇಶಕ ಜಾರ್ಜ್ ಮಿಲ್ಲರ್ ಅವರು ನಿರ್ದೇಶಿಸಿದ್ದು, ಉತ್ತಮ ಮೇಕಪ್ & ಹೇರ್ ಸ್ಟೈಲ್, ಉತ್ತಮ ವಸ್ತ್ರ ವಿನ್ಯಾಸ, ಉತ್ತಮ ಪ್ರೊಡಕ್ಷನ್ ಡಿಸೈನ್ ಸೇರಿ 8 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.
 
 
ಪೊಲೀಸರ ವಶಕ್ಕೆ ಶಂಕಿತ ಉಗ್ರರು
ಪಠಾಣ್ ಕೋಟ್ ಏರ್ ಬೇಸ್ ಮೇಲೆ ಉಗ್ರರ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಮೂವರು ಶಂಕಿತರನ್ನು 6 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಆದೇಶಿಸಿದ ಹಿನ್ನೆಲೆಯಲ್ಲಿ ಶಂಕಿತರನ್ನು ಬಂಧಿಸಲಾಗಿದೆ.
 
 
ರಾಹುಲ್ ವಿರುದ್ಧ ಎಫ್ ಐಆರ್
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ದೇಶದ್ರೋಹ ಆರೋಪದಡಿ ಎಫ್ ಐಆರ್ ದಾಖಲಾಗಿದೆ. ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಡಿ.ರಾಜಾ, ಆನಂದ್ ಶರ್ಮಾ, ಕೆ.ಸಿ.ತ್ಯಾಗಿ, ಸೀತಾರಾಮ್ ಯೆಚೂರಿ, ಕನ್ನೈಯಾ,ಉಮರ್ ಖಾಲಿದ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 124(ಎ) ಆಡಿ ಎಫ್ ಐ ಆರ್ ದಾಖಲಾಗಿದೆ.
ರಫ್ತಿನಲ್ಲಿ ಅಕ್ರಮ ಪತ್ತೆ
ಇರಾನ್ ಗೆ ಬಾಸ್ಮತಿ ಅಕ್ಕಿ ರಫ್ತು ವಹಿವಾಟಿನಲ್ಲಿ ಅಕ್ರಮ ನಡೆದಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮವನ್ನು ಪತ್ತೆಹಚ್ಚಿದ್ದಾರೆ.

LEAVE A REPLY

Please enter your comment!
Please enter your name here