ಬೇವು-ಬೆಲ್ಲ: ನವೆಂಬರ್ 2016

0
563

ವಾರ್ತೆ ಹಿನ್ನೋಟ
2016 ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಹೊಸ ವರುಷದ ಸ್ವಾಗತಕ್ಕೆ ನಾಡು ಸಿದ್ಧವಾಗುತ್ತಿದೆ. ಈ
ಶುಭಾವಸರದಲ್ಲಿ ಕಳೆದುಹೋದ ದಿನಗಳ ಮೆಲುಕು ಹಾಕುತ್ತಾ ನಾಡು ಕಂಡ `ಬೇವು ಬೆಲ್ಲದ’ ಸವಿಯನ್ನು ಮತ್ತೆ ನೆನಪಿಸುತ್ತಾ ಇದ್ದೇವೆ…ನೀವೂ ನಿಮ್ಮ
ನೆನಪಿನ ಬುತ್ತಿಯನ್ನೊಮ್ಮೆ ಬಿಚ್ಚಿಡಬಹುದು…
2016ರ ನವೆಂಬರ್ ತಿಂಗಳು ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಏನೆಲ್ಲಾ ಆಯಿತು ಹನ್ನೊಂದನೇ ತಿಂಗಳು ಎಂಬುದರ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…
 
ಕಮಲ್ ಹಾಸನ್-ಗೌತಮಿ ದೂರ ದೂರ
ಕಮಲ್ ಹಾಸನ್-ಗೌತಮಿ ಜೋಡಿಯ 13 ವರ್ಷಗಳ ಲಿವಿಂಗ್ ಟುಗೆದರ್ ಅಂತ್ಯವಾಗಿತ್ತು. ಪರಸ್ಪರ ದೂರವಾದ ಬಗ್ಗೆ ನಟಿ ಗೌತಮಿ ಟ್ವೀಟ್ ಮಾಡಿದ್ದರು.
ಇತಿಹಾಸದಲ್ಲಿ ದಾಖಲೆ ಬರೆದ ಹಾಸನಾಂಬೆ
ಹಾಸನಾಂಬೆ ದೇಗುಲದಲ್ಲಿ ಈ ಬಾರಿ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಹಣ ಹರಿದುಬಂದಿತ್ತು. ಇದರಿಂದ ಹಾಸನಾಂಬೆ ಇತಿಹಾಸದಲ್ಲೇ ದಾಖಲೆ ಮೊತ್ತದ ಕಾಣಿಕೆ ಹಣ ಸಂಗ್ರಹವಾಗಿತ್ತು. 13 ದಿನಗಳಲ್ಲಿ ಬರೋಬ್ಬರಿ 2.65 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದ್ದು, ದೇಗುಲದ ಹುಂಡಿಯಲ್ಲಿ 1.35 ಕೋಟಿ ರೂ. ಹಣ ಸಂಗ್ರಹವಾಗಿತ್ತು. ಸೀರೆ, ಲಾಡು, ವಿಶೇಷ ಟಿಕೆಟ್ ಮಾರಾಟದಿಂದ 1.30 ಕೋಟಿ ರೂ. ಬಂದಿತ್ತು.
ದಾವೂದ್ ಆಪ್ತ ಅರೆಸ್ಟ್
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತನೋರ್ವನನ್ನು ನೇಪಾಳದ ಸಿಐಬಿ ಅಧಿಕಾರಿಗಳು ಕಠ್ಮಂಡುವಿನಲ್ಲಿ ಬಂಧಿಸಿದ್ದರು. ರವಿರಾಜ್ ಸಿಂಗ್ ಎಂಬತಾ ಬಂಧಿತ ಆರೋಪಿಯಾಗಿದ್ದು, ಈತ ನೇಪಾಳದಲ್ಲಿ ನಕಲಿ ಹಣ ವರ್ಗಾವಣೆ ರಾಕೆಟ್ ನಡೆಸುತ್ತಿದ್ದ .
ಪ್ರವೇಶ ನೀಡಲು ಕೇರಳ ಗ್ರೀನ್ ಸಿಗ್ನಲ್
ಶಬರಿಮಲೆ ದೇಗುಲ ಗರ್ಭಗುಡಿಗೆ ಅನುಮತಿ ನೀಡಲು ಸಿದ್ಧ. ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಸಿದ್ಧವಿದ್ದೇವೆ ಎಂದು ಕೇರಳ ಸರ್ಕಾರ, ಸುಪ್ರೀಂಕೋರ್ಟ್ ಗೆ ತನನ್ ನಿಲುವು ತಿಳಿಸಿತ್ತು.
ಶೂಟಿಂಗ್ ವೇಳೆ ಅನಾಹುತ
ಶೂಟಿಂಗ್ ವೇಳೆ ಭೀಕರ ಅನಾಹುತ ನಡೆದಿತ್ತು. ‘ಮಾಸ್ತಿಗುಡಿ’ಚಿತ್ರಕ್ಕಾಗಿ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ ನಿಂದ ನಟ ದುನಿಯಾ ವಿಜಯ್, ಖಳನಟರಾದ ಅನಿಲ್, ಉದಯ್ ಎಂಬುವವರು ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ್ದರು. ಈ ಸಂದರ್ಭದಲ್ಲಿ ದುನಿಯಾ ವಿಜಯ್ ಈಜಿ ದಡ ಸೇರಿದರೆ, ಆದರೆ ಅನಿಲ್ ಮತ್ತು ಉದಯ್ ನೀರಿನಲ್ಲೇ ಕಣ್ಮರೆಯಾಗಿ, ಇಹಲೋಕ ತ್ಯಜಿಸಿದ್ದರು.
ದೇಶದಲ್ಲೇ ಯುದ್ಧ ಪರಿಕರಗಳನ್ನು ನಿರ್ಮಿಸಲು ಒಪ್ಪಿಗೆ
ಯುದ್ಧ ಪರಿಕರಗಳನ್ನು ಭಾರತದಲ್ಲೇ ನಿರ್ಮಾಣ ಮಾಡುವ ಮಹತ್ವದ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಯುದ್ಧಪರಿಕರಗಳಾದ 83 ತೇಜಸ್ ಯುದ್ಧ ವಿಮಾನ, 15 ಹೆಲಿಕಾಪ್ಟರ್ ಗಳು ಮತ್ತು 464 ಟಿ-90ಯುದ್ಧ ಟ್ಯಾಂಕರ್ ಗಳನ್ನು ಭಾರತದಲ್ಲೇ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು.
ಮಹಾತ್ಮ ಗಾಂಧಿ ಮೊಮ್ಮಗ ವಿಧಿವಶ
ಮಹಾತ್ಮ ಗಾಂಧಿ ಮೊಮ್ಮಗ ಹಾಗೂ ನಾಸಾ ನಿವೃತ್ತ ವಿಜ್ಞಾನಿ ಕನು ರಾಮ್ ದಾಸ್ ಗಾಂಧಿ(87) ಅವರು ಗುಜರಾತ್ ಸೂರತ್ ನಲ್ಲಿ ವಿಧಿವಶರಾಗಿದ್ದರು.
ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಬ್ರಹ್ಮಾಸ್ತ್ರ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರು ಹಾಗೂ 1000 ಮುಖ ಬೆಲೆಯ ನೋಟುಗಳ ಮೇಲೆ ನ.8 ಮಧ್ಯರಾತ್ರಿಯಿಂದಲೇ ನಿಷೇಧ ಹೇರಿದ್ದರು. ಭ್ರಷ್ಟಾಚಾರ, ಭಯೋತ್ಪಾದನೆ, ನಕಲಿ ನೋಟುಗಳ ಹಾವಳಿ ವಿರುದ್ಧ ನೇರ ಸಮರಕ್ಕೆ ನಿಂತಿರುವ ಕೇಂದ್ರ ಸರ್ಕಾರ ತನ್ನ ಅಂತಿಮ ಪ್ರಯತ್ನವಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ 500 ಹಾಗೂ 1000 ರು ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಹಳೇ ನೋಟುಗಳ ಬ್ಯಾನ್ ಆದ ಬೆನ್ನಲ್ಲೇ ಹೊಸ ಮಾದರಿಯ 500 ರು. ಹಾಗೂ 2000 ರು. ಮುಖಬೆಲೆಯ ನೋಟುಗಳ ಚಲಾವಣೆಗೆ ಬಂದಿದೆ.
ಡೊನಾಲ್ಡ್ ತೆಕ್ಕೆಗೆ ಅಮೆರಿಕಾದ ಅಧ್ಯಕ್ಷ ಸ್ಥಾನ
ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿದ್ದರು. ಟ್ರಂಪ್ ಅವರು 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ವಿರುದ್ಧ ಜಯ ಸಾಧಿಸಿದ್ದರು.
ಬ್ಯಾಂಕ್ ನಲ್ಲಿ ಜನವೋ ಜನ!
ಹಳೆ ನೊಟುಗಳು ಬ್ಯಾನ್ ಆದ ಹಿನ್ನೆಲೆಯಲ್ಲಿ ನೋಟುಗಳ ವಿನಿಮಯಕ್ಕೆ ದೇಶದ್ಯಾದಂತ ಬ್ಯಾಂಕ್ ಗಳಲ್ಲಿ ಸರತಿ ಸಾಲು ಏರ್ಪಟ್ಟಿತ್ತು. ಹಲವೆಡೆ ಬ್ಯಾಂಕ್ ಗಳ ಮುಂದೆ ಜನರು ಕ್ಯೂ ನಿಂತಿದ್ದರು.
ಬ್ಯಾಂಕ್ ನಲ್ಲಿ ಜನವೋ ಜನ!
ಹಳೆ ನೊಟುಗಳು ಬ್ಯಾನ್ ಆದ ಹಿನ್ನೆಲೆಯಲ್ಲಿ ನೋಟುಗಳ ವಿನಿಮಯಕ್ಕೆ ದೇಶದ್ಯಾದಂತ ಬ್ಯಾಂಕ್ ಗಳಲ್ಲಿ ಸರತಿ ಸಾಲು ಏರ್ಪಟ್ಟಿತ್ತು. ಹಲವೆಡೆ ಬ್ಯಾಂಕ್ ಗಳ ಮುಂದೆ ಜನರು ಕ್ಯೂ ನಿಂತಿದ್ದರು.
ಪ್ರಬಲ ಭೂಕಂಪ
ನ್ಯೂಜಿಲೆಂಡ್ ನಲ್ಲಿ ಸಂಭವಿಸಿದ ಭಾರಿ ಭೂಕಂಪ ಸಂಭವಿಸಿತ್ತು. ಇಲ್ಲಿನ ಕ್ರೈಸ್ಟ್ ಚರ್ಚ್ ನಿಂದ 90 ಕಿ.ಮೀ. ದೂರದಲ್ಲಿ 7.8 ಪ್ರಮಾಣದ ಪ್ರಬಲ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಪ್ರಬಲ ಭೂಕಂಪನದ ಪರಿಣಾಮ ಕ್ರೈಸ್ಟ್ ಚರ್ಚ್ ನ ಬಹುಮಹಡಿ ಕಟ್ಟಡಗಳು ಜಖಂಗೊಂಡಿದ್ದು, ಕನಿಷ್ಟ ಇಬ್ಬರು ಬಲಿಯಾಗಿದ್ದು, ನೂರಾರು ಕಟ್ಟಡಗಳ ಧರೆಗುರುಳಿದ್ದವು.
ಮೂನ್ ‘ಸೂಪರ್’
ಆಗಸದಲ್ಲಿ ಸೂಪರ್ ಮೂನ್ ದರ್ಶನವಾಗಿತ್ತು. ಚಂದ್ರ ಭೂಮಿಗೆ ಅತ್ಯಂತ ಸಮೀಪಕ್ಕೆ ಬಂದು, ಸೂರ್ಯ-ಚಂದ್ರರು 180 ಡಿಗ್ರಿ ಸಮಾನ ದೂರದಲ್ಲಿದ್ದ. 1948ರಲ್ಲಿ ಬಾನಂಗಳದಲ್ಲಿ ಬೃಹತ್ ಗಾತ್ರದ ಚಂದ್ರ ಕಾಣಿಸಿದ್ದ. 68ವರ್ಷಗಳ ಬಳಿಕ ಸೂಪರ್ ಮೂನ್ ರೀ ಎಂಟ್ರಿಯಾಗಿತ್ತು.
ಮೂವರು ಕನ್ನಡಿಗರಿಗೆ ಪ್ರಶಸ್ತಿ
ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ಕರ್ನಾಟಕದ ಮೂವರು ಸೇರಿ 31 ಮಕ್ಕಳಿಗೆ ಪ್ರಶಸ್ತಿ ಗೌರವ ಲಭಿಸಿತ್ತು.
ಸಪ್ತಪದಿ ತುಳಿದ ರೆಡ್ಡಿ ಪುತ್ರಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಣಿಧಣಿ ಜನಾರ್ಧನ ರೆಡ್ಡಿ ಪುತ್ರಿ ಬ್ರಹ್ಮಣಿಯ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಅದ್ಧೂರಿ ವೇದಿಕೆಯಲ್ಲಿ ಬ್ರಹ್ಮಣಿ ಹೈದ್ರಾಬಾದ್ ಮೂಲದ ಉದ್ಯಮಿ ರಾಜೀವ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪ್ರೋತ್ಸಾಹ ಧನ ಹೆಚ್ಚಳ
ರಾಜ್ಯ ಸರ್ಕಾರದಿಂದ ರೈತರಿಗೆ ಹಾಲಿನ ಮೇಲೆ ಪ್ರೋತ್ಸಾಹ ಧನವನ್ನು ಹೆಚ್ಚಿಸಿದ್ದು, ಪ್ರತಿ ಲೀಟರ್ ಹಾಲಿನ ಮೇಲೆ ರೈತರಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿತ್ತು. ಸರ್ಕಾರ 1ರೂ.ಪ್ರೋತ್ಸಾಹ ಧನವನ್ನು ಹೆಚ್ಚಿಸಿತ್ತು.
ಲಘು ಭೂಕಂಪನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿತ್ತು. ಹರಿಯಾಣ- ರಾಜಸ್ತಾನದ ಗಡಿಭಾಗದ ಬಾವಲ್ ನಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡು ಬಂದಿತ್ತು. ದೆಹಲಿಯ ವಿವಿಧ ಪ್ರದೇಶಗಳು, ಗಾಜಿಯಾಬಾದ್, ಗುರುಗ್ರಾಮದಲ್ಲಿ ಕಂಪಿಸಿದ ಅನುಭವವಾಗಿತ್ತು.
ಸೋನಮ್ ವಂಗ್ ಚುಕ್ ಗೆ ಪ್ರಶಸ್ತಿ
ಅಮೀರ್ ಖಾನ್ ಅಭಿನಯದ 2009ರ ‘3 ಈಡಿಯಟ್ಸ್’ ಚಿತ್ರದಲ್ಲಿ ಅಮೀರ್ ಖಾನ್ ರ ಫುನ್ಸುಕ್ ವಂಗ್ದು ಪಾತ್ರದ ಹಿಂದಿನ ಪ್ರೇರಣೆಯಾದ ಸೋನಮ್ ವಂಗ್ ಚುಕ್ ಅವರಿಗೆ 2016ನೇ ಸಾಲಿನ ವಿಶ್ವಮಾನ್ಯ ಪ್ರತಿಷ್ಠಿತ ರೊಲೆಕ್ಸ್ ಉದ್ಯಮ ಪ್ರಶಸ್ತಿ ದೊರಕಿತ್ತು.
ರೈಲ್ವೆ ದುರಂತ
ಉತ್ತರ ಪ್ರದೇಶದ ಕಾನ್ಪುರ ಪುಖರಾಯ ರೈಲ್ವೇ ನಿಲ್ದಾಣ ಸಮೀಪ ರೈಲು ಅಪಘಾತವಾಗಿತ್ತು. ಇಂದೋರ್-ಪಾಟ್ನಾ ರೈಲು ದುರಂತ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿತ್ತು.
 
ಡಾ ಎಂ. ಬಾಲ ಮುರಳಿ ಕೃಷ್ಣ ನಿಧನ
ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜ ಡಾ ಎಂ. ಬಾಲ ಮುರಳಿ ಕೃಷ್ಣ ಅವರು ನಿಧನರಾಗಿದ್ದರು.
‘ಪ್ರಗತಿ ಭವನ’ ಲೋಕಾರ್ಪಣೆ
ತೆಲಂಗಾಣ ಸಿಎಂ ನೂತನ ಗೃಹ ಕಚೇರಿ ಲೋಕಾರ್ಪಣೆ ಮಾಡಲಾಗಿತ್ತು.ಹೈದ್ರಾಬಾದ್‍ನ ಬೇಗಮ್ ಪೇಟ್‍ನಲ್ಲಿ ನಿರ್ಮಿಸಿರುವ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಮನೆಯ ಗೃಹ ಪ್ರವೇಶ ನಡೆದಿತ್ತು. 9 ಎಕರೆಯಲ್ಲಿ ನಿರ್ಮಾಣವಾಗಿರುವ 50 ಕೋಟಿಯ ಭವ್ಯ ಬಂಗಲೆಗೆ ‘ಪ್ರಗತಿ ಭವನ್’ ಎಂದು ಹೆಸರಿಡಲಾಗಿದೆ.
ಹಾಸ್ಯನಟ ಅಶೋಕ್ ಬಾದರದಿನ್ನಿ ನಿಧನ
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಅಶೋಕ್ ಬಾದರದಿನ್ನಿ ವಿಧಿವಶರಾಗಿದ್ದರು.
ಭೀಕರ ಅಪಘಾತ
ಎರಡು ರೈಲುಗಳ ನಡುವೆ ಮುಖಾಮಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ 40ಕ್ಕೂ ಹೆಚ್ಚು ಮಂದಿ ಬಲಿಯಾದ ಘಟನೆ ಇರಾನ್ ನ ಸೆಮ್ನಾನ್ ನಲ್ಲಿ ಸಂಭವಿಸಿತ್ತು. ಎರಡು ರೈಲುಗಳ ಡಿಕ್ಕಿ ಹೊಡೆದ ರಭಸಕ್ಕೆ ಟ್ರೈನ್ ಧಗಧಗನೆ ಹೊತ್ತಿ ಉರಿದಿತ್ತು.
ಫಿಡಲ್ ಕ್ಯಾಸ್ಟ್ರೊ ನಿಧನ
ಕ್ಯೂಬಾದ ಮಾಜಿ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೊ(90) ವಿಧಿವಶರಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಫಿಡಲ್ ನಿಧನರಾಗಿದ್ದರು. ಫಿಡಲ್ 1976ರಿಂದ 2008ರವರೆಗೆ ಕ್ಯೂಬಾದ ಅಧ್ಯಕ್ಷರಾಗಿದ್ದರು. 2008ರ ಫೆಬ್ರವರಿ 19ರಂದು ಅಧಿಕೃತವಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರು ಅಮೆರಿಕಕ್ಕೆ ಸೆಡ್ಡು ಹೊಡೆದ ಕ್ರಾಂತಿಕಾರಿ ನೇತಾರನಾಗಿದ್ದಾರೆ.
ಪ್ರಬಲ ಭೂಕಂಪ
ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿತ್ತು. ಭೂಕಂಪನದ ಕೇಂದ್ರ ನಮ್ಚೆ ಬಜಾರ್ ನಿಂದ 19 ಕಿ.ಮೀ. ದೂರದಲ್ಲಿದ್ದು, ಭೂಮಿಯ 10 ಕಿ.ಮೀ. ಆಳದಲ್ಲಿದೆ ಎಂದು ಹೇಳಲಾಗಿತ್ತು.
ವಿಮಾನ ಪತನ
ಕೊಲಂಬಿಯಾದಲ್ಲಿ ಬ್ರೆಜಿಲ್ ವಿಮಾನ ಪತನವಾಗಿತ್ತು. ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನ ಪತನವಾಗಿದ್ದು, ವಿಮಾನದಲ್ಲಿ ಪುಟ್ಬಾಲ್ ಆಟಗಾರರು ಸೇರಿ 81 ಜನರು ಪ್ರಯಾಣಿಸುತ್ತಿದ್ದರು.
ಪವಿತ್ರ ಮಸೀದಿಯಲ್ಲಿ ಹೊಸ ಶಕೆ
ಮುಂಬೈನ ಪವಿತ್ರ ಮಸೀದಿ ಹಾಜಿ ದರ್ಗಾಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದರು. 5 ವರ್ಷಗಳ ಕಾನೂನು ಹೋರಾಟದ ಬಳಿಕ ಹಾಜಿ ದರ್ಗಾಕ್ಕೆ 80 ನಾರಿಯರ ಗುಂಪು ಪ್ರವೇಶ ಮಾಡಿದ್ದರು.
ರಾಷ್ಟ್ರಗೀತೆ ಕಡ್ಡಾಯ
ದೇಶಾದ್ಯಂತ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ದೇಶದ ಎಲ್ಲ ಚಿತ್ರಮಂದಿರಗಳು ಮತ್ತು ಸಿನಿಮಾ ಹಾಲ್‍ಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯ ಮಾಡಲಾಗಿತ್ತು.
ವೀರಯೋಧ ಹುತಾತ್ಮ
ಜಮ್ಮು-ಕಾಶ್ಮೀರದ ನಗರೋಟಾದಲ್ಲಿ ಉಗ್ರರ ದಾಳಿಯಲ್ಲಿ ಬೆಂಗಳೂರಿನ ಯಲಹಂಕದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ (31) ಹುತಾತ್ಮರಾಗಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಮೇಜರ್ ಸೇರಿದಂತೆ ಏಳು ಯೋಧರು ಹುತಾತ್ಮರಾಗಿದ್ದರು.
ಕೊನೆಗೂ ಸಿಕ್ತು ಕನ್ನಡಿಗರಿಗೆ ಮೀಸಲಾತಿ
ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲು ವಿಚಾರದಲ್ಲಿ ಕಾನೂನು ತಿದ್ದುಪಡಿಗೆ ಇಲಾಖೆ ಒಪ್ಪಿಗೆ ನೀಡಿತ್ತು. ಕರ್ನಾಟಕದಲ್ಲಿ ಸ್ಥಾಪನೆಯಾಗುವ ಎಲ್ಲ ಕಾರ್ಖಾನೆಗಳಲ್ಲಿ ಶೇ.100ರಷ್ಟು ಮೀಸಲು ನೀಡಬೇಕು. ಐಟಿ ಹೊರತುಪಡಿಸಿ ಎಲ್ಲ ಉದ್ಯಮಗಳಲ್ಲಿ ಉದ್ಯೋಗ ನೀಡಬೇಕು ಎಂಬ ಕಾನೂನು ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.
ಸೇನಾ ಹೆಲಿಕಾಪ್ಟರ್ ಪತನ
ಪಶ್ಚಿಮಬಂಗಾಳ ಸುಕ್ನಾದಲ್ಲಿರುವ ಸೇನಾ ಕ್ಯಾಂಪ್ ಬಳಿ ಸೇನಾ ಹೆಲಿಕಾಫ್ಟರ್ ಗಳ ಪತನವಾಗಿದ್ದು, ಘಟನೆಯಲ್ಲಿ ಮೂವರು ಸೇನಾಧಿಕಾರಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದರು. ಓರ್ವ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here