ಬೇವು-ಬೆಲ್ಲ: ಜೂನ್-2016

0
546

 
ವಾರ್ತೆ ಹಿನ್ನೋಟ
2016 ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಹೊಸ ವರುಷದ ಸ್ವಾಗತಕ್ಕೆ ನಾಡು ಸಿದ್ಧವಾಗುತ್ತಿದೆ. ಈ
ಶುಭಾವಸರದಲ್ಲಿ ಕಳೆದುಹೋದ ದಿನಗಳ ಮೆಲುಕು ಹಾಕುತ್ತಾ ನಾಡು ಕಂಡ `ಬೇವು ಬೆಲ್ಲದ’ ಸವಿಯನ್ನು ಮತ್ತೆ ನೆನಪಿಸುತ್ತಾ ಇದ್ದೇವೆ…ನೀವೂ ನಿಮ್ಮ
ನೆನಪಿನ ಬುತ್ತಿಯನ್ನೊಮ್ಮೆ ಬಿಚ್ಚಿಡಬಹುದು…
2016ರ ಜೂನ್ ತಿಂಗಳು ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಏನೆಲ್ಲಾ ಆಯಿತು ಆರನೇ ತಿಂಗಳು ಎಂಬುದರ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…
ತೈಲ ದರ ಮತ್ತೆ ದುಬಾರಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಹೆಚ್ಚಳವಾದ ಕಾರಣ ಪೆಟ್ರೋಲ್-ಡಿಸೇಲ್ ದರ ಏರಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ದರ
2.58 ರೂ.ಹಾಗೂ ಪ್ರತಿ ಲೀಟರ್ ಡಿಸೇಲ್ ದರ 2.26 ರೂ. ಏರಿಕೆಯಾಗಿತ್ತು.
ಜಿಡಿಪಿ ವೃದ್ದಿದರ ಹೆಚ್ಚಳ
ಭಾರತದ ವಾರ್ಷಿಕ ಜಿಡಿಪಿ ವೃದ್ದಿದರ ಕಳೆದ 4ನೇ ತ್ತೈಮಾಸಿಕದಲ್ಲಿ ಏರಿಕೆಯಾಗಿತ್ತು. 2015-16ನೇ ಸಾಲಿನ ಜಿಡಿಪಿ ವೃದ್ದಿದರ ಶೇಕಡ 7.6ಕ್ಕೆ
ಏರಿಕೆಯಾಗಿದ ಹಿನ್ನೆಲೆಯಲ್ಲಿ ವಿಶ್ವದಲ್ಲೇ ಅತಿ ವೇಗವಾದ ಆರ್ಥಿಕ ಬೆಳವಣಿಗೆ ಕಂಡ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.
ವೈಮಾನಿಕ ದಾಳಿ: 60 ಜನರ ಹತ್ಯೆ
ಸಿರಿಯಾದ ಉಡ್ ಲಿಬ್ ನಗರದಲ್ಲಿ ಉಗ್ರರ ಗುರಿಯಾಗಿಸಿ ವೈಮಾನಿಕ ದಾಳಿ ನಡೆದಿದ್ದು, ರಷ್ಯಾ ಸೇನೆಯ ವೈಮಾನಿಕ ದಾಳಿಯಲ್ಲಿ 60 ಜನರ ಹತ್ಯೆ
ಮಾಡಲಾಗಿತ್ತು. ದೆ.
ಸೇನಾ ಶಸ್ತ್ರಾಗಾರದಲ್ಲಿ ಸರಣಿ ಸ್ಫೋಟ
ಮಹಾರಾಷ್ಟ್ರದ ಪುಲಂಗಾವ್ ಮಿಲಿಟರಿ ಶಸ್ತ್ರಾಗಾರದಲ್ಲಿ ಸಂಭವಿಸಿದ್ದ ಸರಣಿ ಸ್ಪೋಟ ಸಂಭವಿಸಿತ್ತು. ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇ
ಏರಿಕೆಯಾಗಿತ್ತು.
ಸಬ್ಸಿಡಿಯೇತರ ಎಲ್’ಪಿಜಿ ದರ ಏರಿಕೆ
ಸರ್ಕಾರ ಸಬ್ಸಿಡಿ ರಹಿತ ಎಲ್’ಪಿಜಿ ಸಿಲಿಂಡರ್ ಬೆಲೆಯು ರೂ.21 ಹೆಚ್ಚಳ ಮಾಡಿತ್ತು. ಕಳೆದ ತಿಂಗಳು ಸಬ್ಸಿಡಿಯೇತರ ಎಲ್’ಪಿಜಿ ಸಿಲಿಂಡರ್ ದರದಲ್ಲಿ
ರೂ.18 ಏರಿಕೆಯಾಗಿತ್ತು. ಇತ್ತ ಜೆಟ್ ಇಂಧನದ ದರವನ್ನೂ ಶೇಕಡ 9.2ರಷ್ಟು ಹೆಚ್ಚಳ ಮಾಡಲಾಗಿತ್ತು.
ಬತ್ತ-ಹತ್ತಿ-ದ್ವಿದಳ ಧಾನ್ಯಗಳ ಬೆಂಬಲ ಬೆಲೆ ಏರಿಕೆ
ಬತ್ತದ ಮೇಲಿನ ಬೆಂಬಲ ಬೆಲೆಯಲ್ಲಿ 60ರೂ. ಗೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ, ಪ್ರತೀ ಕ್ವಿಂಟಾಲ್ ಬತ್ತದ ಬೆಲೆಯನ್ನು 1, 470ಕ್ಕೇರಿಕೆ ಮಾಡಲಾಗಿತ್ತು.
ಖ್ಯಾತ ಬಾಕ್ಸಿಂಗ್ ಅಲಿ ಇನ್ನಿಲ್ಲ
ಅಮೆರಿಕಾದ ಮಾಜಿ ವಿಶ್ವ ಹೆವಿವೈಟ್ ಚಾಂಪಿಯನ್ ಹಾಗೂ ಬಾಕ್ಸಿಂಗ್ ರಂಗದ ದಂತಕಥೆ ಎಂದು ಹೆಸರುವಾಸಿಯಾದ 74 ರ್ಷದ ಮೊಹಮ್ಮದ್ ಅಲಿ
ಇಹಲೋಕ ತ್ಯಜಿಸಿದ್ದರು.
ಮಾಜಿ ಮಿಸ್ಟರ್ ಯೂನಿವರ್ಸ್ ಇನ್ನಿಲ್ಲ
104 ವರ್ಷದ ಭಾರತದ ದೇಹದಾರ್ಢ್ಯ ದಂತಕತೆ, ಮಾಜಿ ಮಿಸ್ಟರ್ ಯೂನಿವರ್ಸ್ ಮನೋಹರ್ ಐಚ್ ನಿಧನರಾಗಿದ್ದರು.
ಸಿಎಂ ಪದಗ್ರಹಣ
ಪುದುಚೇರಿ ಮುಖ್ಯಮಂತ್ರಿಯಾಗಿ ವಿ. ನಾರಾಯಣಸ್ವಾಮಿ ಪದಗ್ರಹಣ ಮಾಡಿದ್ದರು. 10 ನೇ ಸಿಎಂ ಆಗಿ ನಾರಾಯಣ ಸ್ವಾಮಿ ಅಧಿಕಾರ ಸ್ವೀಕರಿಸಿದ್ದರು.
ಎಂಟಿಸಿಆರ್ ಗೆ ಭಾರತ ಸೇರ್ಪಡೆ
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಗೆ ಭಾರತ ಅವಿರೋಧವಾಗಿ ಆಯ್ಕೆಯಾಗಿತ್ತು. ಹೀಗಾಗಿ ಭಾರತ ಇನ್ನು ವಿಶ್ವದ ಯಾವುದೇ
ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಅರ್ಹತೆ ಪಡೆದಿತ್ತು.
ಅನುಪಮಾ ಶೆಣೈ ರಾಜೀನಾಮೆ
ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಎರಡು ವರ್ಷ ಅಮಾನತುಗೊಂಡ ಶರಪೋವಾ
ಪಂದ್ಯಗಳ ವೇಳೆ ಉದ್ದೀಪನ ಮದ್ದು ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದ ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶೆರಪೋವಾ ಅವರಿಗೆ ಅಂತರ
ರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಎರಡು ವರ್ಷ ಆಟದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿತ್ತು.
ರೈಲಿನಲ್ಲಿ ಮಕ್ಕಳಿಗಾಗಿ ವಿಶೇಷ ಆಹಾರ
ಮಕ್ಕಳಿಗೆಂದೇ ರೈಲು ನಿಲ್ದಾಣಗಳಲ್ಲಿ ಬಿಸಿ ಹಾಲು, ಬಿಸಿ ನೀರು ಮತ್ತು ಶಿಶು ಆಹಾರಗಳನ್ನು ಒದಗಿಸಲು ರೈಲ್ವೆ ಇಲಾಖೆ ನಿರ್ಧರಿಸಿತ್ತು. ಆರಂಭದಲ್ಲಿ 25
ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಆರಂಭವಾಗಿದೆ.
ಮೀನುಗಾರರ ಬಂಧನ
ಆರು ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, ಜಲಗಡಿ ಕಾನೂನು ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಪಾಕ್ ಗೆ ಚೀನಾ ನೆರವು
ಪಾಕಿಸ್ತಾನದ ಯೋಜನೆಗಳಿಗೆ ಚೀನಾ ದೇಶ ಸಾವಿರಾರು ಕೋಟಿ ನೆರವು ನೀಡಿತ್ತು. ಪಾಕ್ ನ ರೈಲ್ವೆ ಸಂಪರ್ಕ ಜಾಲ ಮೇಲ್ದರ್ಜೆಗೇರಿಸುವ ಯೋಜನೆ
ಮತ್ತು ಇರಾನ್ ಗೆ ಅಗತ್ಯ ಇಂಧನ ಪೂರೈಸುವ ಅನಿಲ ಪೈಪ್ ಲೈನ್ ಯೋಜನೆಗಳಿಗೆ ನೆರವು ನೀಡಿತ್ತು.
ತರಬೇತಿ ವೆಚ್ಚ ಏರಿಕೆ
10ಮೀ. ಏರ್ ರೈಫಲ್ ಶೂಟಿಂಗ್ ನಲ್ಲಿ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಹೀನಾ ಸಿಧು ಅವರ ತೆರಬೇತಿ ವೆಚ್ಚ 75 ಲಕ್ಷ ರೂ.ದಿಂದ ಒಂದು
ಕೋಟಿ ರೂ.ಗೆ ಏರಿಕೆಯಾಗಿತ್ತು.
ವಿಮಾನ ಪತನ: ಪೈಲಟ್ ಪಾರು
ಭಾರತೀಯ ವಾಯುಪಡೆಯ ಮಿಗ್-27 ಯುದ್ಧವಿಮಾನ ಸೋಮವಾರ ರಾಜಸ್ತಾನದ ಜೋಧಪುರದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು
ಪೈಲಟ್ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.
ಹಾಲ್ ಮಾರ್ಕ್ ಕಡ್ಡಾಯ
ದೇಶಾದ್ಯಂತ ಎಲ್ಲ ಚಿನ್ನಾಭರಣಕ್ಕೂ ಹಾಲ್ ಮಾರ್ಕ್ ಕಡ್ಡಾಯವಾದ ಹಿನ್ನೆಲೆಯಲ್ಲಿ ದ್ರ ಸರ್ಕಾರದಿಂದ ಹಾಲ್ ಮಾರ್ಕ್ ಕಡ್ಡಾಯ ಪ್ರಕ್ರಿಯೆ ಶುರುವಾಗಿತ್ತು.
ಶುದ್ಧತೆ ಮುದ್ರೆ ಹಾಲ್ ಮಾರ್ಕ್ ಕಡ್ಡಾಯಗೊಳಿಸುವ ಪ್ರಕ್ರಿಯೆ ನಡೆದಿದೆ.
ಕರೀಷ್ಮಾ-ಸಂಜಯ್ ದಾಂಪತ್ಯ ಅಂತ್ಯ
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಹಾಗೂ ಉದ್ಯಮಿ ಸಂಜಯ್ ಕಪೂರ್ ಅವರು ದಾಂಪತ್ಯ ಜೀವನ ಅಂತ್ಯವಾಗಿತ್ತು.
ಐಸಿಸ್ ಮುಖ್ಯಸ್ಥನ ಹತ್ಯೆ
ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ನ ಮುಖ್ಯಸ್ಥ ಅಬು ಬಕ್ರ್ ಆಲ್-ಬಗ್ಧಾದಿ ಹತ್ಯೆ ಮಾಡಲಾಗಿತ್ತು.
ಇರಾಕ್ ನಲ್ಲಿ ಅಮೇರಿಕಾ ಮುಂದಾಳತ್ವದ ಮಿತ್ರ ದೇಶಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು.
ನಿವಾಸ ಸ್ಫೋಟಿಸುವುದಾಗಿ ಬೆದರಿಕೆ
ಗುಜರಾತ್ ನ ರಾಜ್ ಕೋಟ್ ನಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿವಾಸ ಸ್ಪೋಟಿಸುವುದಾಗಿ ಬೆದರಿಕೆ ಪತ್ರ ಬಂದಿತ್ತು.
ರಾಜಕೋಟ್ ಬಸ್ ನಿಲ್ದಾಣದ ಮ್ಯಾನೇಹರ್ ಗೆ ಪತ್ರ ಬಂದಿದ್ದು, ಪತ್ರವನ್ನು ಹಿಂದಿ ಭಾಷೆಯಲ್ಲಿ ಬರೆದಿದ್ದರು.
ಸರ್ಕಾರಿ ನೌಕರರ ಪ್ರಯತ್ನಕ್ಕೆ ಫಲ
ಕೊನೆಗೂ ಸರ್ಕಾರಿ ನೌಕರರ ಪ್ರಯತ್ನಕ್ಕೆ ಫಲ ದೊರಕಿದ್ದು, ಕೇಂದ್ರ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು
ನಿರ್ಧರಿಸಿತ್ತು. ಇದರಿಂದ 47 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 52 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಿದೆ. ಆ.1ರಿಂದ ಏಳನೇ ವೇತನ
ಆಯೋಗದ ಶಿಫಾರಸು ಜಾರಿಗೆ ಬಂದಿದೆ.
ಇಂದು ಮಹಿಳಾ ಪೈಲೆಟ್ ಗಳ ಸೇರ್ಪಡೆ
ವಾಯುಸೇನೆ ಯುದ್ಧವಿಮಾನಗಳಿಗೆ ಮಹಿಳಾ ಫೈಲಟ್ ಗಳ ಮೊದಲ ಬ್ಯಾಚ್ ಸೇರ್ಪಡೆಯಾಗಿದ್ದರು. ಮೂವರು ಭಾರತೀಯ ಪೈಲೆಟ್ ಗಳು
ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು. ಮೂವರು ಪೈಲಟ್ ಗಳಾದ ಬಿಹಾರದ ಭಾವನಾ ಕಾಂತ್, ಮಧ್ಯಪ್ರದೇಶದ ಅವನಿ
ಚತುರ್ವೇದಿ,ಪಂಜಾಬ್ ಮೋಹನಾ ಸಿಂಗ್ ರ ಮೊದಲ ಬ್ಯಾಚ್ ಸೇರ್ಪಡೆಯಾಗಿದ್ದರು.
ಬೇಳೆಕಾಳುಗಳ ಅಮದಿಗೆ ನಿರ್ಧಾರ
ಬೇಳೆಕಾಳು ಆಹಾರ ವಸ್ತು ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೇಳೆಕಾಳುಗಳನ್ನು ಅಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಕೇಂದ್ರ
ಗ್ರಾಹಕ ವ್ಯವಹಾರಗಳ ಸಚಿವಾಲಯ ಸುಮಾರು 6.5ಲಕ್ಷ ಟನೆ ಬೇಳೆ ಅಮದಿಗೆ ಆದೇಶಿಸಿತ್ತು.
ಅಂಬರೀಶ್ ರಾಜೀನಾಮೆ
ಅಂಬರೀಶ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಅಂಬರೀಶ್ ಅವರು ರಾಜೀನಾಮೆ ನೀಡಿದ್ದರು. ತನ್ನ ಆಪ್ತ ಕಾರ್ಯದರ್ಶಿ ಸಚಿವ ಶ್ರೀನಿವಾಸ್ ಮೂಲಕ
ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದರು.
ಪಾಕ್ ನಲ್ಲಿ ಹಿಂದೂ ಗಳಿಗೆ ಅವಮಾನ: ಓಂ ಚಿಹ್ನೆಯಿರುವ ಶೂಗಳ ಮಾರಾಟ
ಪಾಕಿಸ್ತಾನದಲ್ಲಿ ಹಿಂದೂ ಧರ್ಮಿಯರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾದಲಾಗಿದ್ದು, ಸಿಂದ್‌ ಪ್ರಾಂತ್ಯದಲ್ಲೀ ಹಿಂದೂ ಧರ್ಮದ ಪವಿತ್ರ ಓಂ ಚಿಹ್ನೆ
ಇರುವ ಶೂ ಗಳನ್ನು ಮಾರಾಟ ಮಾಡಲಾಗಿತ್ತು.
ಐತಿಹಾಸಿಕ ಸಾಹಸಕ್ಕೆ ಕ್ಷಣಗಣನೆ
ಇಸ್ರೋ, ಆಂಧ್ರಪ್ರದೇಶ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 20 ಉಪಗ್ರಹಗಳನ್ನು ಯಶಸ್ವಿಯಾಗೆ ಉಡಾವಣೆ
ಮಾಡಿತ್ತು.
ಪಾಕ್ ನಿಂದ ಉ.ಕೊರಿಯಾಕ್ಕೆ ಅಣ್ವಸ್ತ್ರ ಪೂರೈಕೆ
ಉತ್ತರ ಕೊರಿಯಾಗೆ ಪಾಕ್ ನಿಂದ ಪರಮಾಣು ಉತ್ಪನ್ನ ಸಾಗಣೆ ಮಾಡಿದ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಯೊಂದರ ಉನ್ನ ತ ಮೂಲಗಳಿಂದ
ವರದಿಯಾಗಿತ್ತು. ಅಣ್ವಸ್ತ್ರಗಳನ್ನು ಹಾಗೂ ಹಾಗೂ ಅಣ್ವಸ್ತ್ರ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಮಾರಾಟವಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು.
ಟೀಂ ಇಂಡಿಯಾದ ಕೋಚ್ ಸ್ಥಾನಕ್ಕೆ ಕನ್ನಡಿಗ ಆಯ್ಕೆ
ಸ್ಪಿನ್ ಮಾಂತ್ರಿಕ, ಮಾಜಿ ನಾಯಕ ಕನ್ನಡಿಗ ಅನಿಲ್ ಕುಂಬ್ಳೆ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು. ಭಾರತೀಯ ಕ್ರಿಕೆಟ್
ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಅನಿಲೆ ಅವರ ಹೆಸರನ್ನು ಪ್ರಕಟಿಸಿದ್ದಾರೆ.
ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ
ಮೈಸೂರು ಅರಮನೆಯ ಮಯೂರ ಮಂಟಪದಲ್ಲಿ ಮೈಸೂರು ಮಹಾರಾಜ ಯದುವೀರ್ ಮತ್ತು ರಾಜಸ್ತಾನದ ಡುಂಗುರಪುರ ಮನೆತನದ ತ್ರಿಶಿಕಾ ಸಿಂಗ್
ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು.
ಫುಟ್ಬಾಲ್ ಗೆ ವಿದಾಯ ಹೇಳಿದ ಲಿಯೋನೆಲ್
ಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟಿನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದರು.
ವೈನ್ ದರದಲ್ಲಿ ಹೆಚ್ಚಳ
ರಾಜ್ಯಾದ್ಯಂತ ವೈನ್ ದರದಲ್ಲಿ ಹೆಚ್ಚಳವಾಗಲಿದೆ. ಶೇಕಡ 177ರಷ್ಟು ದರ ಹೆಚ್ಚಳ ಮಾಡುವಂತೆ ರಾಜ್ಯ ಗೆಜೆಟ್ ನಲ್ಲಿ ಸರ್ಕಾರ ಆದೇಶಿಸಿತ್ತು. ಜುಲೈ 1ರಿಂದ
ರಾಜ್ಯಾದ್ಯಂತ ನೂತನ ದರ ಜಾರಿಗೆ ಬಂದಿದೆ.
ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಇಸ್ರೇಲ್ ತಂತ್ರಜ್ಞಾನ ಸಹಯೋಗದೊಂದಿಗೆ ಭಾರತ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ
ನಡೆದಿತ್ತು. ಹೈದ್ರಾಬಾದ್ ಮೂಲದ ಡಿಆರ್​ಡಿಒ ಅಭಿವೃದ್ಧಿ ಪಡಿಸಿದ ಈ ಅತ್ಯಾಧುನಿಕ ಏರ್ ಮಿಸೈಲ್ ಚಂಡೀಪುರದಲ್ಲಿರುವ ರಕ್ಷಣಾ ಇಲಾಖೆ ನೆಲೆಯಲ್ಲಿ
ಪ್ರಯೋಗಕ್ಕೆ ಒಳಗಾಯಿತು.

LEAVE A REPLY

Please enter your comment!
Please enter your name here