ಬೇವು-ಬೆಲ್ಲ: ಜುಲೈ-2016

0
442

ವಾರ್ತೆ ಹಿನ್ನೋಟ
2016 ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಹೊಸ ವರುಷದ ಸ್ವಾಗತಕ್ಕೆ ನಾಡು ಸಿದ್ಧವಾಗುತ್ತಿದೆ. ಈ
ಶುಭಾವಸರದಲ್ಲಿ ಕಳೆದುಹೋದ ದಿನಗಳ ಮೆಲುಕು ಹಾಕುತ್ತಾ ನಾಡು ಕಂಡ `ಬೇವು ಬೆಲ್ಲದ’ ಸವಿಯನ್ನು ಮತ್ತೆ ನೆನಪಿಸುತ್ತಾ ಇದ್ದೇವೆ…ನೀವೂ ನಿಮ್ಮ
ನೆನಪಿನ ಬುತ್ತಿಯನ್ನೊಮ್ಮೆ ಬಿಚ್ಚಿಡಬಹುದು…
2016ರ ಜುಲೈ ತಿಂಗಳು ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಏನೆಲ್ಲಾ ಆಯಿತು ಏಳನೇ ತಿಂಗಳು ಎಂಬುದರ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…
ಯಕ್ಷಗಾನ ಕಲಾವಿದ ವಿಶ್ವನಾಥ ಶೆಟ್ಟಿ ಇನ್ನಿಲ್ಲ
ಯಕ್ಷವಾಚಸ್ಪತಿ, ಸಾಮಗ ಶೈಲಿಯ ಮಾತುಗಾರ, ತೆಂಕು-ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ನಿಧನರಾಗಿದರು.
ವಾಯುಪಡೆಗೆ ‘ತೇಜಸ್’ ಬಲ
ಬೆಂಗಳೂರು ಹೆಚ್ ಎಎಲ್ ನಲ್ಲಿ ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನ ‘ತೇಜಸ್’ ಸೇರ್ಪಡೆಯಾಗಿತ್ತು.
ತೈಲ ಬೆಲೆಯಲ್ಲಿ ಇಳಿಕೆ
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿತ್ತು. ಪೆಟ್ರೋಲ್ ದರ ಪ್ರತಿಲೀಟರ್ ಗೆ 89 ಪೈಸೆ ಮತ್ತು ಡೀಸೆಲ್ ದರ ಪ್ರತಿಲೀಟರ್ ಗೆ 49 ಪೈಸೆ ಇಳಿಕೆಯಾಗಿತ್ತು.
ರೆಸ್ಟೋರೆಂಟ್ ಮೇಲೆ ಉಗ್ರ ಅಟ್ಟಹಾಸ
26/11 ಮುಂಬೈ ದಾಳಿಯ ಮಾದರಿಯಲ್ಲಿ ಉಗ್ರರು ಬಾಂಗ್ಲಾದೇಶದಲ್ಲಿ ದಾಳಿ ನಡೆಸಿದ್ದರು. ರಾಜಧಾನಿ ಢಾಕಾದ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.
ಇಂದು ನೂತನ ಸಂಸದರ ಪ್ರಮಾಣ ವಚನ
ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದ್ದು, ನೂತನ 19 ಸಂಸದರು ಮೋದಿ ತಂಡಕ್ಕೆ ಸೇರ್ಪಡೆಯಾಗಿದ್ದರು.
ಬಯೋ ಡೀಸೆಲ್ ಬಸ್ ಗೆ ಚಾಲನೆ
ದೇಶದಲ್ಲೇ ಪ್ರಥಮ ಬಾರಿಗೆ ಬಯೋ ಡೀಸೆಲ್ ಆಧಾರಿತ ಬಸ್ಸನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕ ಬಳಕೆಗೆ ಸಮರ್ಪಿಸಿತ್ತು. ಸಂಪೂರ್ಣವಾಗಿ ಬಯೋ ಡೀಸೆಲನ್ನೇ ಬಳಸಿಕೊಂಡು ಈ ಸಾರಿಗೆ ಬಸ್ ಬೆಂಗಳೂರು- ಚೆನ್ನೈ ಮಾರ್ಗವಾಗಿ ಪ್ರತಿದಿನ ಸಂಚರಿಸುತ್ತಿದೆ.
ಜಗತ್ತಿನ ಅತಿದೊಡ್ಡ ಚರಕ ಲೋಕಾರ್ಪಣೆ
ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್-3 ರಲ್ಲಿ ಪ್ರತಿಷ್ಠಾಪಿಸಿದ್ದ ಜಗತ್ತಿನ ಅತಿದೊಡ್ಡ ಚರಕವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಉದ್ಘಾಟಿಸಿ, ಲೋಕಾರ್ಪಣೆಗೊಳಿಸಿದ್ದರು.
ನಮಾಮಿ ಗಂಗೆ ಯೋಜನೆಗೆ ಚಾಲನೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿತ್ತು. ಸಿಗಲಿದೆ. ನಮಾಮಿ ಗಂಗೆ ಕಾರ್ಯಕ್ರಮದ ಅನ್ವಯ 231 ಯೋಜನೆಗಳಿಗೆ ಚಾಲನೆ ಸಿಕ್ಕಿತ್ತು.
ಡಿವೈಎಸ್ ಆತ್ಮಹತ್ಯೆ
ರಾಜ್ಯದಲ್ಲಿ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ನಂತರ ಮತ್ತೊಬ್ಬ ಡಿವೈಎಸ್ ಪಿ ಆತ್ಮಹತ್ಯೆಗೆ ಶರಣಾಗಿದ್ದು, ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈ ಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ಕೊಡಗು ಕುಶಾಲನಗರದ ಎಂ ಕೆ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಂಡೆ ಪತ್ನಿ ವಿಧಿವಶ
ದಿವಂಗತ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ಬಂಡೆ ನಿಧನರಾಗಿದ್ದರು.
ಭಯೋತ್ಪಾದನಾ ತಡೆಗೆ ಒಪ್ಪಂದ
ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ತಡೆಗಾಗಿ ದಕ್ಷಿಣ ಆಫ್ರಿಕಾ ಜತೆ ಒಪ್ಪಂದ ಮಾಡಿಕೊಂಡಿದ್ದರು.
ಎಸ್ಕಲೇಟರ್‌ಗಳಿಗೆ ಚಾಲನೆ
ಮಂಗಳೂರು ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಎರಡು ಎಸ್ಕಲೇಟರ್‌ಗಳಿಗೆ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಚಾಲನೆ ನೀಡಿ, ಲೋಕಾರ್ಪನೆಗೊಳಿಸಿದ್ದರು.
ಪೋಸ್ಟ್ ಮೂಲಕ ಗಂಗಾ ಜಲ ಯೋಜನೆಗೆ ಚಾಲನೆ
ಪವಿತ್ರ ಗಂಗಾ ಜಲವನ್ನು ಸುಲಭದಲ್ಲಿ ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಗಂಗಾ ಜಲ ಯೋಜನೆಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿತ್ತು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಿದ್ದರು.
ಫ್ರಾನ್ಸ್ ನಲ್ಲಿ ಉಗ್ರರ ದಾಳಿ
ಫ್ರಾನ್ಸ್ ನಲ್ಲಿ ರಾಷ್ಟ್ರೀಯ ದಿನದಂದೇ ಉಗ್ರರು ಅಟ್ಟಹಾಸ ಮೆರೆದಿದ್ದರು. ನೀಸ್ ಪಟ್ಟದಲ್ಲಿ ಉಗ್ರರು ದಾಳಿ ನಡೆಸಿದ್ದು, ರೆಸಾರ್ಟ್ ನಲ್ಲಿ ಸೇರಿದ್ದ ನೂರಾರು ಜನರ ಮೇಲೆ ಟ್ರಕ್ ಹರಿಸಿ ಜನರ ಮಾರಣಹೋಮ ನಡೆಸಲಾಗಿತ್ತು. ಘಟನೆಯಲ್ಲಿ 80 ಮಂದಿಯನ್ನು ಹತ್ಯೆ ಮಾಡಲಾಗಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು.
ರಾಜ್ಯಸಭಾ ಸ್ಥಾನಕ್ಕೆ ಸಿದ್ಧು ರಿಸೈನ್
ರಾಜ್ಯಸಭಾ ಸದಸ್ಯತ್ವಕ್ಕೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧ ರಾಜೀನಾಮೆ ನೀಡಿದ್ದರು. ಸಿದ್ಧು ಅವರು ಏಪ್ರಿಲ್ ನಲ್ಲಿ ರಾಜ್ಯಸಭೆಗೆ ಬಿಜೆಪಿಯಿಂದ ನಾಮ ನಿರ್ದೇಶನಗೊಂಡಿದ್ದರು.
ಮುಬಾರಕ್ ಬೇಗಂ ವಿಧಿವಶ
ಬಾಲಿವುಡ್ ನ ಪ್ರಖ್ಯಾತ ಗಾಯಕಿ ಮುಬಾರಕ್ ಬೇಗಂ(80) ಅವರು ವಿಧಿವಶರಾಗಿದ್ದರು. ಮುಬಾರಕ್ ಬೇಗಂ ಅವರು ಸರಿಸುಮಾರು 110 ಸಿನಿಮಾಗಳಲ್ಲಿ ಹಾಡಿದ್ದಾರೆ. 1961ರ ಹಮಾರಿ ಯಾದ್ ಆಯೇಗಿ ಚಿತ್ರದಲ್ಲಿ ಕಭೀ ತನ್ ಹಾಯಿಯೋಂ ಮೇ ಹಮಾರಿ ಯಾದ್ ಆಯೇಗಿ ಗೀತೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು.
ಹಾಕಿ ದಂತಕಥೆ ಶಾಹಿದ್ ನಿಧನ
ಹಾಕಿ ದಂತಕಥೆ ಮೊಹಮ್ಮದ್ ಶಾಹಿದ್(56) ಉತ್ತರಪ್ರದೇಶದ ಗುರಗಾಂವ್ ನಲ್ಲಿ ವಿಧಿವಶರಾಗಿದ್ದರು.
ಬಾಬ್ರಿ ಮಸೀದಿ ಪರ ಹೋರಾಟಗಾರ ಅನ್ಸಾರಿ ನಿಧನ
ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ಅತ್ಯಂತ ಹಿರಿಯ ಕಕ್ಷಿದಾರ ಮೊಹಮದ್ ಹಸೀಮ್ ಅನ್ಸಾರಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದರು. .
ಎಫ್.ಎಂ.ಖಾನ್ ನಿಧನ
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಫ್.ಎಂ.ಖಾನ್(84) ವಿಧಿವಶರಾಗಿದ್ದರು.
ವಿಮಾನ ನಾಪತ್ತೆ
ಭಾರತೀಯ ವಾಯುಸೇನೆಗೆ ಸೇರಿದ AN-32 ವಿಮಾನ ನಾಪತ್ತೆಯಾಗಿತ್ತು. ವಿಮಾನದಲ್ಲಿ 29 ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು. ಚೆನ್ನೈನ ತಾಂಬ್ರಮ್ ಏರ್ ಬೇಸ್ ನಿಂದ ವಿಮಾನ ಹೊರಟಿದ್ದು, ಅಂಡಮಾನ್ ನ ಫ್ಲೋರ್ಟ್ ಬ್ಲೇರ್ ನತ್ತ ಹೊರಟಿತ್ತು.
ಗಾಳಿಪಟ: ‘ಚೈನೀಸ್ ದಾರ್’ ಕ್ಕೆ ನಿಷೇಧ
ಕರ್ನಾಟಕ ಸರ್ಕಾರವು ಗಾಳಿಪಟ ಹಾರಿಸಲು ಬಳಸುವ ನೈಲಾನ್ ದಾರ, ಸಾಮಾನ್ಯವಾಗಿ ಕರೆಯಲ್ಪಡುವ “ಚ್ಯನೀಸ್ ದಾರ್” ಅಥವಾ “ಚೈನೀಸ್ ಮಂಜ” ಅಥವಾ ಗಾಜು ಇಲ್ಲವೆ ಇತರ ಕೃತಕ ಜೈವಿಕವಲ್ಲದ ಹಾನಿಕಾರಕ ವಸ್ತುಗಳಿಂದ ತಯಾರಿಸಿದ ದಾರದ ಬಳಕೆಯನ್ನು ನಿಷೇಧಿಸಿತ್ತು.
ಬಸ್ ಮುಷ್ಕರ
ವೇತನ ಹೆಚ್ಚಳಕ್ಕೆ ಸಾರಿಗೆ ಬಸ್ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಬಸ್ ಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.
ನೌಕರರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ
ಸಾರಿಗೆ ಸಂಸ್ಥೆ ನೌಕರರ ವೇತನ ಶೇಕಡ 12ರಷ್ಟು ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದರು.
ಸಿಎಂ ಪುತ್ರ ನಿಧನ
ಸಿಎಂ ಸಿದ್ದರಾಮಯ್ಯ ಅವರ ಜೇಷ್ಠ ಪುತ್ರ ರಾಕೇಶ್ ಸಿದ್ದರಾಮಯ್ಯ(39) ಅವರು ಬೆಲ್ಜಿಯಂ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ನಿಧನರಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದರು.
ಬೆಳೆ ವಿಮೆಗೆ ಆನ್‍ಲೈನ್ ನೋಂದಣಿ ಸೌಲಭ್ಯ
ರೈತರ ಬೆಳೆ ವಿಮೆಗೆ ಆನ್‍ಲೈನ್ ನೋಂದಣಿ ಸೌಲಭ್ಯ ಕಲ್ಪಿಸುವ ಸಂರಕ್ಷಣಾ ತಂತ್ರಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು. ಬೆಳೆ ವಿಮೆಗಾಗಿ ರೈತರ ಆನ್ ಲೈನ್ ನೊಂದಣಿ ( ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ (ಪಿ.ಎಂ.ಎಫ್.ಬಿ.ವೈ) ಮತ್ತು ಪುನಾರಚಿತ ಹವಾಮಾನ-ಆಧಾರಿತ ಬೆಳೆ ವಿಮೆ ಯೋಜನೆ (ಡಬ್ಲ್ಯೂ.ಬಿ.ಸಿ.ಐ.ಎಸ್) ಯ ಸಂಯೋಜನೆ ಇದಾಗಿದೆ.

LEAVE A REPLY

Please enter your comment!
Please enter your name here