ಬೇವು-ಬೆಲ್ಲ: ಜನವರಿ-2016

0
335

ವಾರ್ತೆ ಹಿನ್ನೋಟ
2016 ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಹೊಸ ವರುಷದ ಸ್ವಾಗತಕ್ಕೆ ನಾಡು ಸಿದ್ಧವಾಗುತ್ತಿದೆ. ಈ ಶುಭಾವಸರದಲ್ಲಿ ಕಳೆದುಹೋದ ದಿನಗಳ ಮೆಲುಕು ಹಾಕುತ್ತಾ ನಾಡು ಕಂಡ `ಬೇವು ಬೆಲ್ಲದ’ ಸವಿಯನ್ನು ಮತ್ತೆ ನೆನಪಿಸುತ್ತಾ ಇದ್ದೇವೆ…ನೀವೂ ನಿಮ್ಮ ನೆನಪಿನ ಬುತ್ತಿಯನ್ನೊಮ್ಮೆ ಬಿಚ್ಚಿಡಬಹುದು…
2016ರ ಜನವರಿ ತಿಂಗಳು ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ವರ್ಷದ ಪ್ರಾರಂಭದ ತಿಂಗಳಲ್ಲಿ ಹಲವು ಸಂತೋಷದ ವಿಷಯಗಳು, ಅಪಘಾತಗಳು, ಉಗ್ರರ ದಾಳಿಗಳು ಸೇರಿ ಹಲವು ಘಟನೆಗಳು ಸಂಭವಿಸಿದೆ.
* ಜಮ್ಮು-ಕಾಶ್ಮೀರದ ರಾಮ್ ಬಾಣ್ ಶ್ರೀನಗರ ಹೆದ್ದಾರಿ ಬಳಿಯ ಚಿನೆನೀ-ನಾಸರಿ ಸುರಂಗ ಮಾರ್ಗದ ಕಾಮಗಾರಿ ವೇಳೆ ಭೀಕರ ಅಗ್ನಿದುರಂತ ದುರಂತ ಸಂಭವಿಸಿತ್ತು. ಘಟನೆಯಲ್ಲಿ 10 ಕಾರ್ಮಿಕರು ಸಜೀವ ದಹನವಾಗಿದ್ದರು.
* ನಂದಿನಿ(ಕೆಎಂಎಫ್) ಹಾಲಿನ ದರ ಏರಿಕೆ- 4 ರೂ. ಏರಿಕೆ ಮತ್ತು ಮೊಸರಿನ ದರ 2ರೂ.ಏರಿಕೆ ಜನವರಿ 1. ಜನವರಿ 5ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ.
* ಸ್ಯಾಂಡಲ್ ವುಡ್ ನಲ್ಲಿ ಶಿವಣ್ಣ ಹವಾ… ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಚಿತ್ರ ಬಿಡುಗಡೆಯಾಗಿತ್ತು.
* ನವದೆಹಲಿಯಲ್ಲಿ ಆಪ್ ಸರ್ಕಾರದಿಂದ ಪ್ರಯೋಗಿಕವಾಗಿ ಹೊಸ ವಾಹನ ಸಂಚಾರ ನೀತಿ-ಸಮ/ಬೆಸ ವಾಹನಗಳ ಸಂಚಾರ ಆರಂಬಾಗಿತ್ತು. (ಜನವರಿ1ರಿಂದ 15ರವರೆಗೆ)
* ಪುಣೆಯಲ್ಲಿ ಆರ್ ಎಸ್ ಎಸ್ ಹೊಸ ಇತಿಹಾಸ-ಜನವರಿ 3- ಶಿವಶಕ್ತಿ ಸಂಗಮದಲ್ಲಿ 1,58,772 ಮಂದಿ ಗಣವೇಷಧಾರಿಗಳು ಭಾಗವಹಿಸಿದ್ದರು.
* ಪಂಜಾಬ್ ನ ಗುರುದಾಸ್ ಜಿಲ್ಲೆಯ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಏರ್ ಬೇಸ್-ಮಿಗ್-29ಗೆ ಹೆಲಿಕಾಷ್ಪರ್ ಏರ್ ಬೇಸ್ ಗೆ ಎಂಟ್ರಿ 7 ಯೋಧರು ಹುತಾತ್ಮರಾಗಿದ್ದರು. ಕೇರಳ ಮೂಲದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್, ಹರಿಯಾಣದ ಗುರುಸೇವಕ್ ಸಿಂಗ್ ಸೇರಿ 7 ಸಾವನ್ನಪ್ಪಿದ್ದರು.
* ಸಂಸತ್ತು ಭವನದ ಕ್ಯಾಂಟಿನ್ ದರ ಏರಿಕೆ-ಜನವರಿ 1ರಿಂದ ಕ್ಯಾಂಟೀನ್ ನ ಊಟ-ತಿಂಡಿ ಬೆಲೆ ಏರಿಕೆಯಾಗಿತ್ತು.
* 117 ವರ್ಷಗಳ ದಾಖಲೆ ಮುರಿದ ಮುಂಬೈ ಕುವರ
16 ವರ್ಷದೊಳಗೆ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಮಾಡಿದ್ದ ಮುಂಬೈನ ಪ್ರಣವ್ ಧನವಾಡ
ಮುಂಬೈ ಅಂತರ್ ಶಾಲಾ ಮಟ್ಟದಲ್ಲಿ ಕೆ.ಸಿ. ಗಾಂಧಿ ಸ್ಕೂಲ್ ಪರ ಆಟ-ಆರ್ಯ ಗುರುಕುಲ ಶಾಲಾ ವಿರುದ್ಧದ ಪಂದ್ಯ-ಆಟೋ ಚಾಲಕನ ಮಗ-323ಎಸೆತ-124ಬೌಂಡರಿ-59ಸಿಕ್ಸರ್-1009 ರನ್
ಈತ ಇಂಗ್ಲೆಂಡ್ 1899ರಲ್ಲಿ ಎಇಜೆ ಕಾಲಿನ್ಸ್ ದಾಖಲೆಂಯನ್ನು ಮುರಿದಿದ್ದಾನೆ.ಎಇಜೆ 628ರನ್ ಗಳಿಸಿದ್ದರು.
* ಮಾಜಿ ಶಿಕ್ಷಣ ಸಚಿವ ಗೋವಿಂದೇ ಗೌಡ ನಿಧನ
* ಜಮ್ಮು-ಕಾಶ್ಮೀರದ ಹಾಲಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ವಿಧಿವಶ.
* ಜಲ್ಲಿಕಟ್ಟು ನಿಷೇಧ ತೆರವು- ಕೇಂದ್ರ ಸರ್ಕಾರ ತಮಿಳುನಾಡಿನ ಈ ಆಚರಣೆಗೆ ಸುಪ್ರೀಂಕೊರ್ಟ್(2014) ವಿಧಿಸಿದ ನಿಷೇಧ ತೆರವು
* ವಿಶ್ವದ ನಂ.1 ಮಹಿಳಾ ಜೋಡಿಯಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಸಿದ್ಧತಾ ಟೂರ್ನಿಯಂತಿದ್ದ ಬ್ರಿಸ್ಬೇನ್ ಇಮಟರ್ ನ್ಯಾಷನಲ್ ಪಂದ್ಯಾವಳಿಯಲ್ಲಿ ಜ.9ರಂದು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
* ರಾಜ್ಯ ಸರ್ಕಾರದ ವತಿಯಿಂದ ಹೊಸ ಬೆಳಕು’ ಯೋಜನೆಯಡಿ ಎಲ್ ಇಡಿ ಬಲ್ಬ್ ಗಳನ್ನು ವಿತರಣೆ ಮಾಡುವುದರ ಮೂಲಕ ಹೊಸ ಯೋಜನೆಗೆ ಚಾಲನೆ ನೀಡಲಾಯಿತು.
* ಪಂಜಾಬ್ ಪಠಾಣ್ ಕೋಟ್ ವಾಯುನೆಮೆ ಮೇಲೆ ಉಗ್ರರ ದಾಳಿ ನಡೆಸಿದ ಉಗ್ರರು ಪಾಕ್ ನಿಂದಲೇ ಬಂದಿದ್ದರು ಎಂದು ಪ್ರಥಮ ಬಾರಿಗೆ ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದೆ.
* ಜ 16 ಪ್ರಧಾನಿ ನರೇಂದ್ರ ಮೋದಿಯವರು ಹೊಸ ಉದ್ಯಮಿಗಳಿಗೆ ನೆರವಾಗುವಂತೆ ಸ್ಟಾರ್ಟ್ ಅಪ್ ಆಕ್ಷನ್ ಪ್ಲಾನ್ ಘೋಷಣೆ ಮಾಡಿದ್ದರು. ಇದರೊಂದಿಗೆ ಸ್ಮಾರ್ಟ್ ಆ್ಯಪ್ ಕೂಡ ಬಿಡುಗಡೆಗೊಳಿಸಿದ್ದರು.
* ಭಾರತ-ಜಪಾನ್ ನಡುವೆ ಉನ್ನತಮಟ್ಟದ ಜಂಟಿ ಸಮರಾಭ್ಯಾಸ ಬಂಗಾಳಕೊಲ್ಲಿಯಲ್ಲಿ ನಡೆಯಿತ್ತು. ಸಮರಾಭ್ಯಾಸದಲ್ಲಿ ಉಭಯ ರಾಷ್ಟ್ರಗಳ ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡಲಾಯಿತ್ತು.
* ಬೆಂಗಳೂರು ಲಾಲ್ ಬಾಗ್ ನ ವ್ಯವಸ್ಥಾಪಕರಾದ ಜಿ ಹೆಚ್ ಕೃಂಬಿಗಲ್ ಸ್ಮರಣಾರ್ಥವಾಗಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ನಡೆಯಿತು. ಜ.16ರಿಂದ ಜ.26ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಿತು.
* ಜ.16ರಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯದ ಉಡುಪಿ ಶ್ರೀ ಕೃಷ್ಣಮಠದಲ್ಲಿ ಪರ್ಯಯ ಮಹೋತ್ಸವ ನಡೆಯಿತು. ಪರ್ಯಾಯದಲ್ಲಿ ಪೀಠವೇರಿದ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳಿಗೆ ಇದು ಪಂಚಮ ಪರ್ಯಾಯವಾಗಿತ್ತು.
* ಸುಪ್ರೀಂ ಕೋರ್ಟ್ ನ ಆದೇಶದಂತೆ ಜ 20ರಿಂದ ಮೋಟಾರ್ ವಾಹನ ಕಾಯ್ದೆಯಡಿ ರಾಜ್ಯಾದ್ಯಂತ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ನೀತಿ ಜಾರಿಗೆ ಬಂತು. ಈ ನಿಯಮದಂತೆ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ.
* ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಐಆರ್ ಎನ್ ಎಸ್ ಎಸ್ 1-ಇ ಉಪಗ್ರಹ ಉಡಾವಣೆಯಾಗಿತ್ತು.
* ಉಡಾವಣೆಯಾದ 5ನೇ ಉಪಗ್ರಹ ಜಿಪಿಎಸ್ ವ್ಯವಸ್ಥೆ ಸುಧಾರಣೆ ನೆರವಾಗಲಿದೆ. ಇಸ್ರೋ ವಿಜ್ಞಾನಿಗಳು ಒಟ್ಟು 7 ಉಪಗ್ರಹಗಳನ್ನು ಕಳುಹಿಸಲಿದ್ದು, ಈಗಾಗಲೇ 4 ಉಪಗ್ರಹಳನ್ನು ಉಡಾವಣೆ ಮಾಡಿದ್ದು, ಮಾಚ್ರ್ ಅಂತ್ಯಕ್ಕೆ ಉಳಿದೆರಡು ಉಪಗ್ರಹ ಉಡಾವಣೆಯಾಗಲಿದೆ.
* ಪಾಕಿಸ್ತಾನದ ಪೇಶಾವರದ ಚರ್ಸದ್ದಾ ಜಿಲ್ಲೆ ಖೈಬರ್ ಪ್ರಾಂತ್ಯದಲ್ಲಿರುವ ವಿಶ್ವವಿದ್ಯಾಲಯದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಮೂರು ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನ್ ಮಾಡುತ್ತಿದ್ದ ವಿವಿಗೆ ಮೂವರು ಬಂದೂಕುಧಾರಿಗಳು ನುಗ್ಗಿದ್ದರು. ಘಟನೆಯಲ್ಲಿ ಓರ್ವ ಪ್ರಾಧ್ಯಾಪಕ ಸೇರಿ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿತ್ತು.
* ಗ್ರಹ ಸೇರ್ಪಡೆ: ಸೌರಮಂಡಲದಲ್ಲಿ ಖಗೋಳಶಾಸ್ತ್ರಜ್ಞರ ಸಂಶೋಧನೆಯಿಂದ 9ನೇ ಗ್ರಹ ಪತ್ತೆಯಾಗಿತ್ತು. ಈ ಗ್ರಹ ಭೂಮಿಗಿಂತ 5ರಿಂದ 10ಪಟ್ಟು ದೊಡ್ಡದಾಗಿದೆ. ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
*ಇನ್ ಕ್ರೆಡಿಬಲ್ ಇಂಡಿಯಾಗೆ ನೂತನ ರಾಯಭಾರಿಯಾಗಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ಪ್ರೀಯಾಂಕ ಛೋಪ್ರಾ ಆಯ್ಕೆಯಾಗಿದ್ದರು. ಇವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿತ್ತು.
* ತಿರುಚ್ಚಂದೂರ್ ಕಡಲ ತೀರದಲ್ಲಿ ತಿಮಿಂಗಿಲಗಳ ಹಿಂಡು ಪತ್ತೆಯಾಗಿತ್ತು. 100ಕ್ಕೂ ಹೆಚ್ಚು ತಮಿಳುನಾಡಿನ ಬೀಚ್ ನಲ್ಲಿ ಪ್ರತ್ಯಕ್ಷವಾಗಿತ್ತು.
* ಒಡಿಶಾದ ಪಂಥಾನಿವಾಸ ಬೀಚ್ ನಲ್ಲಿ 150 ಆಲಿವ್ ರಿಡ್ಲೇ ಆಮೆಗಳ ಶವ ಪತ್ತೆಯಗಿತ್ತು. ಮೀನುಗಾರಿಕೆ ಮಾಡುವ ಬೋಟ್ ಗಳು ಡಿಕ್ಕಿ ಹೊಡೆದು ಆಮೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು.
* ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 119ನೇ ಜನ್ಮದಿನವಾಗಿತ್ತು. ನೇತಾಜಿಗೆ ಸಂಬಂಧಪಟ್ಟ 100 ರಹಸ್ಯ ಕಡತಗಳನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದರು.
* ಮಂಗಳೂರಿನ ಪ್ರಸಿದ್ಧ ಪಿಲಿಕುಳ ಉದ್ಯಾವನಕ್ಕೆ ಅಪರೂಪದ ಸಿಂಹದ ಬಾಲದ ಕಪಿಗಳ ಸೇರ್ಪಡೆಯಾಯಿತ್ತು. ಇದನ್ನು ಕೇರಳದ ಪರಶಿನಕಡವು ಮೃಗಾಲಯದಿಂದ ತರಲಾಗಿತ್ತು.
* ಶಂಕಿತ ಐಸಿಸ್ ಉಗ್ರರ ಬಂಧನ
ಬೆಂಗಳೂರಿನಲ್ಲಿ ಆಸಿಫ್, ಅಹಾದ್, ಮೊಹಮ್ಮದ್ ಸೊಹೈಲ್, ಟೆಕ್ಕಿ ಮೊಹಮ್ಮದ್ ಅಫ್ಘಲ್, ತುಮಕೂರಿನ ಸೈಯ್ಯದ್ ಮುಜಾಹಿದ್ ಪಾಷಾ ಮತ್ತು ಮಂಗಳೂರಿನ ನಜ್ಮಿಲ್ ಹುದಾ ನನ್ನು ಬಂಧಿಸಲಾಗಿತ್ತು. ಈ ಶಂಕಿತ ಉಗ್ರರು ಗಣರಾಜ್ಯೋತ್ಸವದಂದು ದಾಳಿ ನಡೆಸಲು ಸಂಚು ರೂಪಿಸಿದ್ದರು.
.
* ಗಣರಾಜ್ಯೋತ್ಸವ ದಿನದಂದು ಪ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು. ಈ ಬಾರಿ ರಾಜ್ ಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮೊದಲ ಬಾರಿಗೆ ಫ್ರೆಂಚ್ ಸೇನಾ ತುಕಡಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅಲ್ಲದೆ 26ವರ್ಷಗಳ ಬಳಿಕ ಸೇನೆ ಶ್ವಾನಗಳು ಪರೇಡ್ ನಲ್ಲಿ ಭಾಗವಹಿಸಿ ಎಲ್ಲರ ಕಣ್ಮನ ಸೆಳೆದಿತ್ತು.
* ಮಹಾರಾಷ್ಟ್ರದ ಶನಿಸಿಂಗಾಣ್ಣಪುರದ ಶನಿ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಕೆಲವು ಮಹಿಳೆಯರ ತಂಡ ಪ್ರಯತ್ನಿಸಿತ್ತು. ಈ ವೇಳೆ ಪರಂಪರಾವಾದಿಗಳು ಮತ್ತು ಪ್ರಗತಿಪರ ಮಹಿಳೆಯೆ ನಡುವೆ ಸಂಘರ್ಷ ಉಂಟಾಗಿತ್ತು. ಇದರಿಂದ ಪ್ರಗತಿಪರ ಮಹಿಳೆಯರ ಪ್ರಯತ್ಮ ವಿಫಲವಾಗಿತ್ತು.
* ಲಾಲಾ ಲಜಪತರಾಯ್ ಅವರ 151ನೇ ಜನ್ಮ ದಿನವಾಗಿದೆ.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತ್ತು. ಕನರ್ಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವ ಫೆ.5ರವರೆಗೆ ನಡೆಯಿತ್ತು.
* ನೈಜೀರಿಯಾದ ಈಶಾನ್ಯ ರಾಜ್ಯ ಬೊರ್ನೋದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಯುತು. ಈ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
* ಕೇಂದ್ರ ಸರ್ಕಾರದ ಸ್ಮಾಟ್ರ್ ಸಿಟಿ ಯೋಜನೆಯಲ್ಲಿ ಮೊದಲ ಹಂತದ 20 ಸ್ಮಾರ್ಟ್ ಸಿಟಿಗಳ ಹೆಸರು ಪ್ರಕಟವಾಗಿತ್ತು.
ಮೊದಲ ಹಂತದಲ್ಲಿ ಕರ್ನಾಟಕದ ಎರಡು ನಗರಗಳಾದ ದಾವಣಗೆರೆ ಮತ್ತು ಬೆಳಗಾವಿ ಆಯ್ಕೆಯಾಗಿತ್ತು. ದೇಶದ ಇತರ ನಗರಗಳಾದ ಭುವನೇಶ್ವರ್, ಪುಣೆ, ಜೈಪುರ, ಸೂರತ್, ಕೊಚ್ಚಿನ್, ಅಹ್ಮದ್ ನಗರ, ಸೊಲ್ಲಾಪುರ, ಇಂದೂರ್, ಚೆನ್ನೈ, ಲೂಧಿಯಾ, ಭೂಪಾಲ್, ವಿಶಾಖಪಟ್ಟಣಂ, ಜಬಲ್ ಪುರ, ಕೊಯಮತ್ತೂರು, ಕಾಕಿನಾಡ ನಗರಗಳು ಆಯ್ಕೆಯಾಗಿತ್ತು
* ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ವಿರಾಟ್’ ಚಿತ್ರ ಜ.29ರಂದು ಬಿಡುಗಡೆಗೊಂಡಿದೆ. 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ವಿರಾಟ್ ಚಿತ್ರ ರಿಲೀಸ್ ಆಗಿತ್ತು.
* ಮುಂಬೈನ ಜುಹು ಬೀಜ್ ನಲ್ಲಿ 30ಅಡಿ ಉದ್ದದ ಮೃತ ತಿಮಿಂಗಿಲ ಪತ್ತೆಯಾಗಿತ್ತು.
* ತೈಲ ಮೇಲಿನ ಎಕ್ಸೈಸ್ ಸುಂಕವನ್ನು ಏರಿಕೆ ಮಾಡಲಾಗಿದ್ದು, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಪ್ರತಿ ಲೀಟರ್ ಗೆ ರೂ.1ರೂ., ಮತ್ತು ಡಿಸೇಲ್ ಮೇಲೆ ರೂ.1.50ರಷ್ಟು ಹೆಚ್ಚಿಸಲಾಗಿದೆ.
* ಮತ್ತೆ ಜಲ್ಲಿಕಟ್ಟು ಕ್ರೀಡೆಗೆ ಬ್ರೇಕ್ ಹಾಕಲಾಯಿತು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ನೀಡಿದ ಅನುಮತಿ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತು. ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸುವಂತೆ ಪ್ರಾಣಿ ಕಲ್ಯಾಣ ಮಂಡಳಿಯವರು ಅರ್ಜಿ ಸಲ್ಲಿಸಿದ್ದರು.
ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ-20 ಪಂದ್ಯದಲ್ಲಿ ಭಾರತ ರೋಚಕ ಜಯ ದಾಖಲಿಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ಅಂಕಗಳನ್ನು 2032ಕ್ಕೆ ಏರಿಕೆ ಮಾಡಿಕೊಂಡಿತ್ತು. ಹಾಗೆಯೇ ಆಸ್ಟ್ರೇಲಿಯಾ ತಂಡವನ್ನು ವೈಟ್ ವಾಶ್ ಮಾಡುವ ಮೂಲಕ ತನ್ನ ರೇಟಿಂಗ್ ನ್ನು 120ಕ್ಕೇರಿಸಿಕೊಂಡ ಭಾರತ ಟಿ20ಯಲ್ಲಿ ಅಗ್ರಸ್ಥಾನಕ್ಕೇರಿತ್ತು.

LEAVE A REPLY

Please enter your comment!
Please enter your name here