ಬೇವು-ಬೆಲ್ಲ: ಆಗಸ್ಟ್ 2016

0
364

ವಾರ್ತೆ ಹಿನ್ನೋಟ
2016 ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಹೊಸ ವರುಷದ ಸ್ವಾಗತಕ್ಕೆ ನಾಡು ಸಿದ್ಧವಾಗುತ್ತಿದೆ. ಈ
ಶುಭಾವಸರದಲ್ಲಿ ಕಳೆದುಹೋದ ದಿನಗಳ ಮೆಲುಕು ಹಾಕುತ್ತಾ ನಾಡು ಕಂಡ `ಬೇವು ಬೆಲ್ಲದ’ ಸವಿಯನ್ನು ಮತ್ತೆ ನೆನಪಿಸುತ್ತಾ ಇದ್ದೇವೆ…ನೀವೂ ನಿಮ್ಮ
ನೆನಪಿನ ಬುತ್ತಿಯನ್ನೊಮ್ಮೆ ಬಿಚ್ಚಿಡಬಹುದು…
2016ರ ಆಗಸ್ಟ್ ತಿಂಗಳು ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಏನೆಲ್ಲಾ ಆಯಿತು ಎಂಟನೇ ತಿಂಗಳು ಎಂಬುದರ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…
ಸಿಎಂ ಪುತ್ರ ಅಂತ್ಯಕ್ರಿಯೆ
ಸಿಎಂ ಸಿದ್ದರಾಮಯ್ಯ ಅವರ ಮಗ ರಾಕೇಶ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಿತು. ಟಿ.ಕಾಟೂರಲ್ಲಿ ಅಂತ್ಯಕ್ರಿಯೆ ನಡೆಯಿತು. ಬೆಲ್ಜಿಯಂ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್(39) ಕಳೆದ ಒಂದು ವಾರದಿಂದ ಬೆಲ್ಜಿಯಂನ ಬ್ರಷಲ್ಸ್ ನ ಆಂಟ್ ವರ್ಪ್ ಯೂನಿರ್ವಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಕೇಶ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 30ರಂದು ಕೊನೆಯುಸಿರೆಳೆದಿದ್ದಾರೆ. ಇವರು ಪ್ಯಾಂಕ್ರಿಯಾಸ್ ತೊಂದರೆಯಿಂದ ಬಳಲುತ್ತಿದ್ದರು.
ತೈಲ ಬೆಲೆಯಲ್ಲಿ ಇಳಿಕೆ
ತೈಲ ಬೆಲೆಯಲ್ಲಿ ಇಳಿಕೆಯಾಗಿತ್ತು. ಪ್ರತಿ ಲೀಟರ್ ಗೆ 1.42 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 2.01 ರೂಪಾಯಿ ಇಳಿಕೆ ಮಾಡಿತ್ತು.
ವರುಣನ ಅರ್ಭಟಕ್ಕೆ ಉತ್ತರ ತತ್ತರ
ಉತ್ತರ ಭಾರತದಾದ್ಯಂತ ಭಾರೀ ವರ್ಷಧಾರೆಯಾಗಿತ್ತು. ಬಿಹಾರ ಮೇಘಾಲಯ ಉತ್ತರಾಖಂಡ್​ ಅಸ್ಸಾಂ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿಗಳು ಉಕ್ಕಿ ಹರಿದು ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು..
24 ಅಗತ್ಯ ಔಷಧಗಳ ಬೆಲೆ ಇಳಿಕೆ
ಕ್ಯಾನ್ಸರ್‌, ಎಚ್‌ಐವಿ, ಬ್ಯಾಕ್ಟೀರಿಯಾ ಸೋಂಕುಗಳು, ಸೇರಿದಂತೆ 24 ಅಗತ್ಯ ಔಷಧಗಳ ಬೆಲೆಯಲ್ಲಿ ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) 24 ಔಷಧಗಳ ಬೆಲೆಯನ್ನು ಪರಿಷ್ಕರಿಸಿದೆ. ಔಷಧ ಬೆಲೆಯಲ್ಲಿ ಸರಾಸರಿ ಶೇ 25ರಷ್ಟು ಕಡಿಮೆಯಾಗಿದೆ. ಕೆಲವು ಔಷಧಗಳ ಬೆಲೆ ಶೇ 10–15ರಷ್ಟು ಕಡಿಮೆಯಾಗಿದ್ದರೆ ಇತರ ಕೆಲವು ಔಷಧಗಳ ಬೆಲೆಯಲ್ಲಿ ಶೇ 30–35ರಷ್ಟು ಕಡಿಮೆಯಾಗಿದೆ ಎಂದು ಎನ್‌ಪಿಪಿಎ ಅಧ್ಯಕ್ಷ ಭೂಪೇಂದ್ರ ಸಿಂಗ್‌ ತಿಳಿಸಿದ್ದರು.
ಸರ್ಕಾರಿ ಬಂಗಲೆ ಖಾಲಿ ಮಾಡಿ: ಮಾಜಿ ಸಿಎಂಗಳಿಗೆ ಸುಪ್ರೀಂ ಆದೇಶ
ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳಲ್ಲಿನ ತಮ್ಮ ವಾಸ್ತವ್ಯವನ್ನು ಜೀವನ ಪರ್ಯಂತ ಮುಂದುವರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಉತ್ತರ ಪ್ರದೇಶದ ಸರ್ಕಾರೇತರ (ಎನ್​ಜಿಒ) ಸಂಘಟನೆ ಲೋಕ ಪ್ರಹರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿತ್ತು. ನ್ಯಾಯಮೂರ್ತಿ ಅನಿಲ್.ಆರ್.ದವೆ, ಯು.ಯು. ಲಲಿತ್ ಮತ್ತು ಎಲ್.ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿಗಳು ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತಿಗೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿತ್ತು.
ಸಚಿವರ ನಿವಾಸದ ಮೇಲೆ ಬಾಂಬ್ ದಾಳಿ
ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಸಚಿವ ನಹೀಂ ಅಖ್ತರ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದರು. ಶ್ರೀನಗರ ಪರ್ರಯಪೊರ ಪ್ರದೇಶದಲ್ಲಿರುವ ನಯೀಂ ಅಖ್ತರ್ ಅವರ ನಿವಾಸದ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದರು.
ಗುಜರಾತ್ ಸಿಎಂ ಆನಂದಿಬೆನ್ ಪಟೇಲ್ ರಾಜೀನಾಮೆ
ಗುಜರಾತ್ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಕ್ಕಿನ ಮಹಿಳೆ ಖ್ಯಾತಿಯ ಆನಂದಿ ಬೆನ್ ಪಟೇಲ್ ಅವಧಿ ಪೂರ್ಣಗೊಳ್ಳುವ ಮುನ್ನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಡುಗೆ ಅನಿಲ ಏರಿಕೆ
ಸಬ್ಸಿಡಿ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ ಗೆ 1ರೂಪಾಯಿ 93 ಪೈಸೆ ಏರಿಕೆಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಇದು ಎರಡನೇ ಬಾರಿ ಅಡುಗೆ ಅನಿಲದ ಬೆಲೆ ಏರಿಕೆಗೊಂಡಿತ್ತು.
ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ
ಮುಂಬೈ-ಗೋವಾ ಹೆದ್ದಾರಿಯಲ್ಲಿ ಭಾರೀ ದುರಂತ ಸಂಭವಿಸಿದ್ದು. ಭಾರೀ ಮಳೆಯಿಂದ ಸಾವಿತ್ರಿ ನದಿ ಉಕ್ಕಿ ಹರಿದಿತ್ತು. ಪ್ರವಾಹಕ್ಕೆ ಸಾವಿತ್ರಿ ನದಿ ಸೇತುವೆ ಕೊಚ್ಚಿ ಹೋಗಿತ್ತು. ಪ್ರವಾಹದ ರಭಸಕ್ಕೆ ರಾಯಘಡ್ ಜಿಲ್ಲೆಯ ಮಹಾಡ್ ನಲ್ಲಿರುವ ಸೇತುವೆ ಧ್ವಂಸವಾಗಿ್ತು. 10ರಿಂದ 15 ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿತ್ತು. ಸರ್ಕಾರಿ ಬಸ್ ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಪ್ರವಾಹದಲ್ಲಿ 22 ಮಂದಿ ಕಣ್ಮರೆಯಾಗಿದ್ದರು.
ಉಗ್ರ ಅಬು ಜುಂದಾಲ್ ಸೇರಿದಂತೆ 7 ಜನರಿಗೆ ಜೀವಾಧಿ ಶಿಕ್ಷೆ
2006ರಲ್ಲಿ ಔರಂಗಾಬಾದ್​ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 26/11ಮುಂಬೈ ದಾಳಿಯ ಸೂತ್ರಧಾರ ಅಬು ಜುಂದಾಲ್ ಸೇರಿ 7 ಜನರಿಗೆ ಮೋಕಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
‘ರೈ’ ಚಿತ್ರ ನಿರ್ದೇಶಕನಿಗೆ ನೋಟಿಸ್
‘ರೈ’ ಚಿತ್ರ ನಿರ್ದೇಶಕ ರಾಂಗೋಪಾಲ್ ವರ್ಮಾಗೆ ನೋಟಿಸ್ ಬಂದಿತ್ತು. ಸದ್ಯ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕುಖ್ಯಾತ ಪಾತಕಿ ಯೂಸಫ್ ಬಚ್ಚಾಖಾನ್ ನೋಟಿಸ್ ಕಳುಹಿಸಿದ್ದ. ಮುತ್ತಪ್ಪ ರೈ ಜೀವನಾಧಾರಿತ ‘ರೈ’ ಚಿತ್ರದ ಪಾತ್ರಕ್ಕೂ ನನಗೂ ಸಂಬಂಧವಿದೆ ಎಂದು ಬಚ್ಚಾಖಾನ್ ತಿಳಿಸಿದ್ದ. ಈ ಚಿತ್ರದ ಸ್ಕ್ರಿಪ್ಟ್ ತೋರಿಸುವಂತೆ ಬಚ್ಚಾಖಾನ್ ವಕೀಲರ ಮೂಲಕ ನಿರ್ದೇಶಕ ರಾಂಗೋಪಾಲ್ ಗೆ ನೋಟಿಸ್ ಜಾರಿ ಮಾಡಿದ್ದ.
ರಾಜ್ಯಸಭೆಯಲ್ಲಿ ಜೆಎಸ್ ಟಿ ಮಂಡನೆ
ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಜಿಎಸ್ ಟಿ ಮಸೂದೆ ಮಂಡಿಸಿತ್ತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಲ್ ಮಂಡನೆ ಮಾಡಿದ್ದರು.
ವಾಹನ ಸವಾರರೇ ಎಚ್ಚರ…
ಹೆಲ್ಮೆಟ್ ಹಾಕದಿದ್ರೆ 1 ಸಾವಿರ ದಂಡ, ಸೀಟ್ ಬೆಲ್ ಇಲ್ಲದೆ ಚಾಲನೆಗೆ ರೂ. 1,000 ದಂಡ, ರಸ್ತೆ ನಿಯಮ ಉಲ್ಲಂಘನೆಗೆ ರೂ.500 ದಂಡ, ಡ್ರಂಕ್ ಆ್ಯಂಡ್ ಡ್ರೈವ್ 10 ಸಾವಿರ ಫೈನ್, ಪರವಾನಗಿ ರಹಿತ ವಾಹನ ಚಾಲನೆಗೆ ರೂ.5,000, ಇನ್ಸೂರೆನ್ಸ್ ಇಲ್ಲದೆ ಚಾಲನೆಗೆ ರೂ.2,000 ಫೈನ್. ಹೌದು ಇಂಥ ಕಠಿಣ ನಿಯಮಗಳನ್ನೊಳಗೊಂಡ ವಿಧೇಯಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ. ದಂಡದ ಹೆಸರಿನಲ್ಲಿ ಜನರಿಗೆ ರಸ್ತೆ ಸುರಕ್ಷತಾ ಜಾಗೃತಿಯನ್ನು ಮೂಡಿಸಲು ಮುಂದಾಗಿತ್ತು.
ಶಂಕಿತ ಉಗ್ರನ ಅಟ್ಟಹಾಸ
ಲಂಡನ್ ನಲ್ಲಿ ಶಂಕಿತ ಉಗ್ರನ ಅಟ್ಟಹಾಸ ಮೆರೆದಿದ್ದು, ಸೆಂಟ್ರಲ್ ಲಂಡನ್ ನಲ್ಲಿ ಶಂಕಿತ ಉಗ್ರನ ಮೇಲೆ ದಾಳಿ ನಡೆಸಲಾಗಿತ್ತು. ಶ0ಕಿತ ಉಗ್ರ ಚಾಕುವಿನಿಂದ ಜನರ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 6 ಮಂದಿಗೆ ಗಂಭೀರ ಗಾಯಗಳಾಗಿತ್ತು.
ಇಸ್ಲಾಮಾಬಾದಿನಲ್ಲಿ ಕೇಂದ್ರ ಗೃಹ ಸಚಿವ
ಎರಡು ದಿನಗಳ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೆರಳಿದ್ದರು. ರಾಜನಾಥ್ ಆಗಮನವನ್ನು ಖಂಡಿಸಿ ವಿಮಾನ ನಿಲ್ದಾಣದಲ್ಲಿ ಧಾರ್ಮಿಕ ಹಾಗೂ ಉಗ್ರ ಸಂಘಟನೆ ಜತೆ ಗುರುತಿಸಿಕೊಂಡಿರುವ 2 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ ಘಟನೆ ನಡೆದಿತ್ತು.
ರಿಯೋ ಒಲಿಂಪಿಕ್ಸ್ ಅದ್ದೂರಿ ಚಾಲನೆ
ಬ್ರೆಜಿಲ್ ನಲ್ಲಿ ರಿಯೋ ಒಲಿಂಪಿಕ್ಸ್ ವರ್ಣರಂಜಿತವಾಗಿ ಚಾಲನೆ ದೊರೆತಿತ್ತು. ಬ್ರೆಜಿಲಿಯನ್ ಮ್ಯಾರಥಾನ್ ರನ್ನರ್ ವಾಂಡೆರ್ಲಿ ಡಿ ಲಿಮಾ ಒಲಿಂಪಿಕ್ಸ್ ಜ್ಯೋತಿಯೊಂದಿಗೆ ಮರಕಾನ ಮೈದಾನಕ್ಕೇ ಆಗಮಿಸಿ, ಒಲಿಂಪಿಕ್ ಜ್ವಾಲೆಯನ್ನು ಹತ್ತಿಸುವ ಮೂಲಕ ಬ್ರೆಜಿಲ್’ನಲ್ಲಿ ನಡೆಯುತ್ತಿರುವ 2016 ರಿಯೊ ಒಲಿಂಪಿಕ್ಸ್’ಗೆ ಅಧಿಕೃತ ಚಾಲನೆ ನೀಡಿದ್ದರು.
ಕೆ ಪಿಎಸ್ ಸಿ ಅಧ್ಯಕ್ಷರಾಗಿ ಶ್ಯಾಂ ಆಯ್ಕೆ
ಕರ್ನಾಟಕದ ಲೋಕಸೇವಾ ಆಯೋಗ(ಕೆಪಿಎಸ್ ಸಿ)ದ ಅಧ್ಯಕ್ಷರಾಗಿ ಶ್ಯಾಂ ಭಟ್ ನೇಮಕಗೊಂಡಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಆಯುಕ್ತ ಟಿ. ಶ್ಯಾಂ ಭಟ್ ಅವರನ್ನು ಕೆಪಿಎಸ್ ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿತ್ತು. ಸರ್ಕಾರದ ಈ ಶಿಫಾರಸ್ಸಿಗೆ ಕೊನೆಗೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದರು.
ಕುಖ್ಯಾತ ಪಾತಕಿ ನಯೀಂ ಮಟಾಷ್
ಕುಖ್ಯಾತ ಪಾತಕಿ ನಯೀಂ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ತೆಲಂಗಾಣ ನಕ್ಸಲ್ ನಿಗ್ರಹ ಪಡೆ-ಗ್ರೇಹಾಂಡ್ ಗೆ ಬಲಿಯಾಗಿದ್ದ. ಈತ ಮೆಹಬೂಬ್ ನಗರದ ಶಾದ್ ನಗರದಲ್ಲಿರುವ ಮೀಲೇನಿಯಂ ಟೌನ್ ಶಿಪ್ ನ ಮನೆಯೊಂದರಲ್ಲಿ ಆಡಗಿಕೊಂಡಿದ್ದ. ಈತ ಹಲವು ಪ್ರಕರಣಗಳ ಆರೋಪಿಯಾಗಿದ್ದ.
ಖ್ಯಾತ ಸಾಹಿತಿ ಚಿತ್ತರಂಜನ್ ಶೆಟ್ಟಿ ವಿಧಿವಶ
ಖ್ಯಾತ ತುಳು, ಕನ್ನಡ ಸಾಹಿತಿ ಬೋಲ ಚಿತ್ತರಂಜನ್ ಶೆಟ್ಟಿ ಅವರು ಮಂಗಳೂರಿನಲ್ಲಿ ವಿಧಿವಶರಾಗಿದ್ದರು.
ಸಸ್ಯಜನ್ಯ ಕೊಬ್ಬು ಬಳಸಲು ಅನುಮತಿ
ಚಾಕೊಲೇಟ್​ಗಳಲ್ಲಿ ಸಸ್ಯಜನ್ಯ ಕೊಬ್ಬು ಮತ್ತು ಕೃತಕ ಸಿಹಿಯನ್ನು ಸೇರಿಸಿಕೊಳ್ಳಲು ಭಾರತೀಯ ಆಹಾರ ಗುಣಮಟ್ಟ ಪ್ರಮಾಣ ಮತ್ತು ಸುರಕ್ಷತಾ ಮಂಡಳಿ(ಎಫ್​ಎಸ್​ಎಸ್​ಎಐ) ಅನುಮತಿ ನೀಡಿತ್ತು.
ಹೆಲಿಕಾಫ್ಟರ್ ಪತನ
ನೇಪಾಳದಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಹೆಲಿಕಾಪ್ಟರ್ ನಲ್ಲಿ ಆರು ಜನ ಪ್ರಯಾಣಿಸುತ್ತಿದ್ದು ನೇಪಾಳದ ನುವಾಕೋಟ್ ನಲ್ಲಿ ಈ ದುರಂತ ಸಂಭವಿಸಿತ್ತು.
ಹೆಲಿಕಾಪ್ಟರ್ ಪತನ
ಫಿಶ್ ತೈಲ್ ಏರ್ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಮಗು ಸೇರಿ 7 ಪ್ರಯಾಣಿಕರು ದಾರುಣ ಸಾವನ್ನಪ್ಪಿದ್ದ ಘಟನೆ ನೇಪಾಳದ ಕಾಠ್ಮಂಡು ಬಳಿ ಸಂಭವಿಸಿತ್ತು.
ಕಲಿಖೋ ಮೃತದೇಹ ಪತ್ತೆ
ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಮೃತದೇಹ ಪತ್ತೆಯಾಗಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಕಲಿಖೋ ಪುಲ್ (47) ಶವ ಪತ್ತೆಯಾಗಿತ್ತು. ಕಳೆದ ತಿಂಗಳಷ್ಟೇ ಸಿಎಂ ಹುದ್ದೆಯಿಂದ ಕಲಿಖೋ ಕೆಳಗಿಳಿದಿದ್ದರು. ನೇಣು ಬಿಗಿದಕೊಂಡು ಕಲಿಖೋ ಪುಲ್ ಆತ್ಮಹತ್ಯೆ ಶಂಕಿಸಲಾಗಿತ್ತು.
ಹಿರಿಯ ನಟಿ ಜ್ಯೋತಿಲಕ್ಷ್ಮೀ ವಿಧಿವಶ
ಚೆನ್ನೈ ನಗರದಲ್ಲಿ ಚತುರ್ಭಾಷಾ ನಟಿ ಜ್ಯೋತಿಲಕ್ಷ್ಮೀ(63) ವಿಧಿವಶರಾಗಿದ್ದರು. ಅನಾರೋಗ್ಯದಿಂದ ಹಿರಿಯ ನಟಿ ಜ್ಯೋತಿಲಕ್ಷ್ಮೀ ಇಹಲೋಕ ತ್ಯಜಿಸಿದ್ದರು.
ದಸರಾ ಉದ್ಘಾಟಕರಾಗಿ ಕಣವಿ ಆಯ್ಕೆ
ಸಾಹಿತಿ ಚೆನ್ನವೀರ ಕಣವಿ ಅವರು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿತ್ತು.
ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ
16 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. 6ಎಸಿಪಿಗಳನ್ನು ಮತ್ತು 16 16 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸುವಂತೆ ಸರ್ಕಾರ ಆದೇಶಿಸಿತ್ತು.
ಡಿಸಿ ಹುದ್ದೆಯಿಂದ ಶಿಖಾ ಎತ್ತಂಗಡಿ
ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಸಿ ಶಿಖಾ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ರಾಜ್ಯ ಸರ್ಕಾರ ಶಿಖಾರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಿತ್ತು.
ಸ್ಟಾರ್ ಎಂಗೇಜ್ ಮೆಂಟ್
ನಟ ಯಶ್ ಮತ್ತು ನಟಿ ರಾಧಿಕಾ ನಿಶ್ಚತಾರ್ಥ ನಡೆದಿತ್ತು. ಗೋವಾದ ತಾಜ್ ವಿವಾಂತ ಹೋಟೆಲ್ ನಲ್ಲಿ ಯಶ್-ರಾಧಿಕಾ ಎಂಗೇಜ್ ಮೆಂಟ್ ನಡೆದಿತ್ತು.
ತೈಲ ಬೆಲೆಯಲ್ಲಿ ಇಳಿಕೆ
ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1 ರೂ. ಹಾಗೂ ಡೀಸೆಲ್ ದರದಲ್ಲಿ 2 ರೂ. ಕಡಿತಗೊಳಿಸಲಾಗಿತ್ತು.
3 ರಾಜ್ಯಗಳಿಗೆ ನೂತನ ರಾಜ್ಯಪಾಲರು
ಕೇಂದ್ರ ಸರ್ಕಾರ ಮೂರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿತ್ತು. ಅಸ್ಸಾಂ, ಮಣಿಪುರ, ಪಂಜಾಬ್ ಗೆ ನೂತನ ರಾಜ್ಯಪಾಲರನ್ನು ಹಾಗೂ ಅಂಡಮಾನ್ ಉಪರಾಜ್ಯಪಾಲರನ್ನು ನೇಮಕಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿತ್ತು.
ರಾಖಿ ಹಬ್ಬಕ್ಕೆ ಉಡುಗೊರೆ
ರಕ್ಷಾಬಂಧನದ ಉಡುಗೊರೆಯಾಗಿ ಭಾರತಕ್ಕೆ ರಿಯೋ ಡೀ ಜನೈರೋ ಒಲಿಂಪಿಕ್ಸ್ ನಲ್ಲಿ ಚೊಚ್ಚಲ ಪದಕ ದೊರಕಿತ್ತು.. ಹರಿಯಾಣ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಡುವ ಮೂಲಕ ರಾಖಿ ಹಬ್ಬಕ್ಕೆ ಸಾಕ್ಟಿಯಾಗಿದ್ದರು.
ಪಾಕಿಸ್ತಾನ ಗೂಢಚಾರಿ ಬಂಧನ
ಗೂಢಚಾರ ಮಾಡುತ್ತಿದ್ದ ಪಾಕಿಸ್ತಾನಿ ಗೂಢಚಾರಿಯನ್ನು ರಾಜಸ್ತಾನದ ಜೈಸಲ್ಮರ್ ನಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ಸೆಲ್ಯುಲರ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಸಾಕ್ಷಿಗೆ ಏರ್ ಇಂಡಿಯಾ ಗಿಫ್ಟ್
ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಗೆ ಗೌರವ ಸೂಚಕವಾಗಿ ಏರ್ ಇಂಡಿಯಾಗಳ ಕೊಡುಗೆ ನೀಡಿತ್ತು. ಸಾಕ್ಷಿ ಹಾಗೂ ಆಕೆಯ ಜೊತೆಗಾರರಿಗೆ ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು ಕೊಡುಗೆ ನೀಡಿತ್ತು.
ಒಲಿಂಪಿಕ್ಸ್​​​​ಗೆ ಅದ್ದೂರಿ ತೆರೆ
ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ 16 ದಿನಗಳ ಕ್ರೀಡಾ ಹಬ್ಬ ಮುಕ್ತಾಯವಾಗಿದ್ದು, ಒಲಿಂಪಿಕ್ಸ್​​​​ಗೆ ಅದ್ದೂರಿ ತೆರೆ ಬಿದ್ದಿತ್ತು. ಮರಕಾನಾ ಸ್ಟೇಡಿಯಂನಲ್ಲಿ ನಡೆದ ಈ ಮುಕ್ತಾಯ ಸಮರೋಪ ಸಮಾರಂಭಕ್ಕೆ 78 ಸಾವಿರಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ಲೇಜರ್​​ ಲೈಟ್​​ನ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಎಲ್ಲಾ ದೇಶದ ಅಥ್ಲಿಟ್​​ಗಳು ರಾಷ್ಟ್ರ ಧ್ವಜ ಹಾಗೂ ತಾವು ಗೆದ್ದ ಪದಕದೊಂದಿಗೆ ಕಾಣಿಸಿಕೊಂಡರು.
ಸಿಂಧು-ಸಾಕ್ಷಿಗೆ ಒಲಿದ ಖೇಲ್ ರತ್ನ
ಈ ಸಾಲಿನ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕಂಚಿನ ಪದಕ ಗೆದ್ದ ಕುಸ್ತಿಪಟು ಸಾಕ್ಷಿ ಮಲಿಕ್, ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಹಾಗೂ ಶೂಟರ್ ಜೀತು ರಾಯ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕದ ಹಾಕಿ ಆಟಗಾರ ವಿ.ಆರ್.ರಘುನಾಥ್, ಕ್ರಿಕೆಟ್ ಆಟಗಾರ ಅಜಿಂಕ್ಯ ರಹಾನೆ, ಲಲಿತ್ ಬಾಬರ್, ಶಿವ ಥಾಪಾ ಹಾಗೂ ಅಪೂರ್ವಿ ಚಾಂಡೇಲಾ ಸೇರಿದಂತೆ 15 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ದೀಪಾ ಕರ್ಮಾಕರ್ ಕೋಚ್ ಬಿಶ್ವೇಶ್ವರ್ ನಂದಿ ಸೇರಿದಂತೆ ಆರು ಮಂದಿಗೆ ಈ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
 
ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆಗೆ ಒಪ್ಪಿಗೆ
ಬಾಡಿಗೆ ತಾಯಂದಿರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ-2016ಕ್ಕೆ ಒಪ್ಪಿಗೆ ನೀಡಲಾಗಿತ್ತು. ವಾಣಿಜ್ಯ ಬಾಡಿಗೆ ತಾಯ್ತನವನ್ನು ಈ ಮಸೂದೆ ನಿರ್ಬಂಧಿಸುತ್ತೆ. ಆದರೆ ಮಕ್ಕಳಿಲ್ಲದವರಿಗೆ ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ನೀಡಲಾಗಿದೆ. ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ರಚನೆಯಾಗಲಿದೆ. ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿಯೂ ಮಂಡಳಿ ರಚನೆಯಾಗಲಿದೆ ಎಂದು ಸಚಿವೆ ಸುಷ್ಮಾ ಹೇಳಿದ್ದರು. ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿಗಳು ತಮ್ಮ ಹತ್ತಿರದ ಸಂಬಂಧಿಕರನ್ನು ಮಾತ್ರ ಬಾಡಿಗೆ ತಾಯಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಂತೆಯೇ ಮಗು ಪಡೆಯುವ ದಂಪತಿಗಳು ವೈದ್ಯಕೀಯ ಖರ್ಚು ವೆಚ್ಚಗಳನ್ನು ಮಾತ್ರ ಭರಿಸಬೇಕಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿತ್ತು.
ಪೂರ್ವೋತ್ತರ ಭಾರತದಲ್ಲಿ ಕಂಪಿಸಿದ ಭೂಮಿ
ಪೂರ್ವ ಭಾರತದ ಹಲವೆಡೆ ಭೂಮಿ ಕಂಪಿಸಿತ್ತು. ಪಶ್ಚಿಮಬಂಗಾಳ, ಬಿಹಾರ, ಅಸ್ಸಾಂ, ಮಣಿಪುರ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಜಾರ್ಖಂಡ್, ಮಿಜೋರಾಂ ಸೇರಿದಂತೆ ಪೂರ್ವೋತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿತ್ತು. ನಾಗಾಲ್ಯಾಂಡ್ ಸೇರಿ ಹಲವೆಡೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 6.7 ಪ್ರಮಾಣದ ಭೂಕಂಪನ ದಾಖಲಾಗಿತ್ತು. ಕೇಂದ್ರ ಮ್ಯಾನ್ಮಾರ್ ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ.
ಮಂಗಳೂರಿನಲ್ಲಿ ರಮ್ಯಾಗೆ ಮೊಟ್ಟೆ ಅಭಿಷೇಕ!
ಪಾಕಿಸ್ತಾನ ಪರ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ, ಅವರ ಕಾರಿನತ್ತ ಮೊಟ್ಟೆ ಎಸೆದ ಘಟನೆ ಗುರುವಾರ ನಡೆದಿತ್ತು. ಪಾಕ್‌ ಪರ ಹೇಳಿಕೆ ನೀಡಿದ ಬೆನ್ನಲ್ಲೇ ಮಾಧ್ಯಮ ಸಂದರ್ಶನದಲ್ಲಿ ಮಂಗಳೂರು ನರಕ ಎಂದು ಇನ್ನೊಂದು ವಿವಾದ ಹುಟ್ಟು ಹಾಕಿದ್ದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಅಕ್ರೋಶಗೊಂಡು, ಪ್ರತಿಭಟನೆ ನಡೆಸಿದ್ದರು.
 
ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ
ಹಾಜಿ ಅಲಿ ದರ್ಗಾಗೆ ಮಹಿಳೆಯರು ಪ್ರವೇಶಿಸಬಹುದು ಎಂದು ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು.
ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಮಹಿಳೆಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ತೀರ್ಪು ಪ್ರಕಟಿಸಿತ್ತು. ಪವಿತ್ರ ಸಮಾಧಿ ಸ್ಥಳಕ್ಕೆ ಮಹಿಳೆಯರ ಪ್ರವೇಶಕ್ಕೆ ದರ್ಗಾ ಮಂಡಳಿ ನಿಷೇಧ ಹಾಕಿತ್ತು. ಇದನ್ನು ಪ್ರಶ್ನಿಸಿ ಸಾರ್ಜಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ವಿಶೇಷ ಕೋರ್ಟ್ ಲೋಕಾರ್ಪಣೆ
ಬೆಂಗಳೂರಿನಲ್ಲಿ ಕೆಂಪೇಗೌಡ ರಸ್ತೆ ಕಂದಾಯ ಭವನದಲ್ಲಿ ನಿರ್ಮಾಣವಾದ ಈ ವಿಶೇಷ ಕೋರ್ಟ್ ನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಭೂಕಬಳಿಕೆ ತಡೆಯಲು ವಿಶೇಷ ಕೋರ್ಟ್ ಸ್ಥಾಪನೆಯಾಗಿದೆ.

LEAVE A REPLY

Please enter your comment!
Please enter your name here