ಬೇಳೆ ಒಬ್ಬಟ್ಟು

0
691

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಮೈದಾಹಿಟ್ಟು 250ಗ್ರಾಂ., ಬೆಲ್ಲ 200ಗ್ರಾಂ., ಬೆಣ್ಣೆ 50ಗ್ರಾಂ., ಎಣ್ಣೆ 250ಗ್ರಾಂ., ಗೋಧಿಹಿಟ್ಟು 250 ಗ್ರಾಂ., ಏಲಕ್ಕಿ ಪುಡಿ 2 ಚಮಚ, ಅರಶಿನ 1 ಚಮಚ, ತೊಗರಿಬೇಳೆ 250ಗ್ರಾಂ.
 
bele obbattu
 
ತಯಾರಿಸುವ ವಿಧಾನ:
ಒಂದು ಸ್ಟೀಲ್ ಪಾತ್ರೆಯಲ್ಲಿ ತೊಗರಿಬೇಳೆ, ನೀರು ಹಾಕಿ ಪಾತ್ರೆಯನ್ನು ಒಲೆಯ ಮೇಲಿಟ್ಟು ಕಾಯಿಸಬೇಕು. ಬೇಳೆ ಬೆಂದ ಮೇಲೆ ಬೆಲ್ಲದ ಪುಡಿ, ಏಲಕ್ಕಿ ಪುಡಿ ಹಾಗೂ ಅರಸಿನ ಹಾಕಬೇಕು. ಮಿಶ್ರಣ ಗಟ್ಟಿಯಾಗುತ್ತಿದ್ದಂತೆಯೇ ಪಾತ್ರೆಯನ್ನು ಒಲೆಯಿಂದ ಇಳಿಸಿ ಆರಲು ಬಿಡಿ. ಮೈದಾಹಿಟ್ಟು, ಗೋಧಿಹಿಟ್ಟು ಮತ್ತು ಬೆಣ್ಣೆಯನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಬೇಕು. ನೀರು ಹಾಕಿ ಚೆನ್ನಾಗಿ ಕಲೆಸಿ ಮಿಶ್ರಣವನ್ನು ನಯವಾದ ಹಿಟ್ಟನ್ನಾಗಿ ಮಾಡಬೇಕು. ಈ ಹಿಟ್ಟಿನಿಂದ ಚಪಾತಿ ಉಂಡೆಗಳನ್ನು ಮಾಡಬೇಕು. ಈ ಉಂಡೆಯನ್ನು ಎಣ್ಣೆಯಲ್ಲಿ ನೆನೆಸಿ. ನಂತರ ಒಂದೊಂದೇ ಉಂಡೆಯನ್ನು ತೆಗೆದು ಅದುಮಿ ಅದರೊಳಗೆ ಬೇಳೆ-ಬೆಲ್ಲದ ಹೂರಣವನ್ನು ತುಂಬಬೇಕು. ಮತ್ತೆ ಉಂಡೆಗಳನ್ನು ಗುಂಡಗೆ ಹೊಸತಿರಿ. ಲಟ್ಟಣಿಗೆ ಮಣೆಯ ಮೇಲೆ ಒಂದೊಂದೇ ಉಂಡೆಗಳನ್ನಿಟ್ಟು ಗುಂಡಗೆ ಅಗಲವಾಗಿ ಲಟ್ಟಿಸಿ. ಒಬ್ಬಟ್ಟು ತವಾವನ್ನು ಗ್ಯಾಸ್ ಒಲೆಯ ಇಟ್ಟು ಕಾಯಿಸಿ ಒಬ್ಬಟ್ಟಿನ ಹಾಳೆಗಳನ್ನು ಹರವಿ ಎರಡೂ ಕಡೆ ಬೇಯಿಸಿ. ನಂತರ ತಟ್ಟೆಗೆ ಹಾಕಿ ಹಾಲು-ತುಪ್ಪದೊಂದಿದೆ ಬಡಿಸಿ.

LEAVE A REPLY

Please enter your comment!
Please enter your name here