ಬೇಲ್ ರೆಸಿಪಿ

0
390

 
ವಾರ್ತೆ ರೆಸಿಪಿ
ಬೇಕಾಗುವ  ಸಾಮಾಗ್ರಿಗಳು:
ಹುರಿಯಕ್ಕಿ – 1 ಬೌಲ್ , ಸೇವ್ – 1 ಬೌಲ್ (ಕಡಲೆ ಇಲ್ಲದ), ಈರುಳ್ಳಿ – 1 (ಕತ್ತರಿಸಿದ್ದು), ಕೊತ್ತಂಬರಿ ಸೊಪ್ಪು – 2 ದಂಟು (ಕತ್ತರಿಸಿದ್ದು), ಚಿಲ್ಲಿ ಟೊಮೇಟೋ ಸಾಸ್ – 1 ಸ್ಪೂನ್, ಚಾಟ್ ಮಸಾಲಾ – 1 ಸ್ಫೂನ್ , ಟೊಮೇಟೋ – 1/2 (ಕತ್ತರಿಸಿದ್ದು), ಉಪ್ಪು – ರುಚಿಗೆ ತಕ್ಕಷ್ಟು.
 
 
 
ಮಾಡುವ ವಿಧಾನ:
ಗಟ್ಟಿ ಮುಚ್ಳಳದ ಒಂದು ಸ್ಟೀಲ್ ಲಂಚ್ ಬಾಕ್ಸ್ ತೆಗೆದುಕೊಳ್ಳಿ. ಮುಚ್ಚಳ ತೆರೆದು ಅದರಲ್ಲಿ ಸ್ವಲ್ಪ ಈರುಳ್ಳಿ ಹಾಕಿ.  ಈಗ ಟೋಮೇಟೋ ಮತ್ತು ಕತ್ತರಿಸಿದ ಸೊಪ್ಪನ್ನು ಅದಕ್ಕೆ ಹಾಕಿ. ಸೇವ್ ಹಾಗೂ ಹುರಿಯಕ್ಕಿಯನ್ನು ಸೇರಿಸಿ. ಚಾಟ್ ಮಸಾಲಾ ಮತ್ತು ಉಪ್ಪಿನ ಒಗ್ಗರಣೆಯನ್ನು ಈ ಮಿಶ್ರಣಕ್ಕೆ ನೀಡಿ. ಬಾಕ್ಸ್ ಗೆ ಒಂದು ಸ್ಪೂನ್ನಷ್ಟು ಟೊಮೇಟೋ ಕೆಚಪ್ ಅನ್ನು ಹಾಕಿ. ನಿಮಗೆ ಬೇಕೆಂದಲ್ಲಿ ಕತ್ತರಿಸಿದ ಹಸಿಮೆಣಸನ್ನು ಇದಕ್ಕೆ ಹಾಕಬಹುದು. ಲಂಚ್ ಬಾಕ್ಸ್ ನ್ನು ಮುಚ್ಚಳವನ್ನು ಗಟ್ಟಿಯಾಗಿ ಹಾಕಿ ಮತ್ತು ಚೆನ್ನಾಗಿ ಕುಲುಕಿಸಿ. ಮುಚ್ಚಳ ಗಟ್ಟಿಯಾಗಿದ್ದ ಪಕ್ಷಷದಲ್ಲಿ ಇನ್ನು ಚೆನ್ನಾಗಿ ಅದನ್ನು ಕುಲುಕಿಸಿ. ನಂತರ ಮುಚ್ಳವನ್ನು ತೆರೆದು ಸಿದ್ಧವಾಗಿರುವ ಬೇಲ್ ರೆಸಿಪಿಯನ್ನು ಅನಂದಿಸಿ. ಸಣ್ಣ ಪಾತ್ರೆಗಳಲ್ಲಿ ಅದನ್ನು ಸರ್ವ್ ಮಾಡಿ ಅಥವಾ ನಿಮ್ಮ ಮಕ್ಕಳಿಗೆ ಪಿಕ್ ನಿಕ್ ಸ್ನ್ಯಾಕ್ ಆಗಿ ಕಟ್ಟಿಕೊಡಿ.

LEAVE A REPLY

Please enter your comment!
Please enter your name here