ಬೇಲೂರಿನ ಮೇಲೆ ಉಗ್ರರ ಕರಿಛಾಯೆ

0
1430

ರಾಷ್ಟ್ರೀಯ ಪ್ರತಿನಿಧಿ ವರದಿ
ಐತಿಹಾಸಿಕ ಸ್ಥಳ ಬೇಲೂರಿನ ಚೆನ್ನಕೇಶವ ದೇವಸ್ಥಾನಕ್ಕೆ ಇದೀಗ ಉಗ್ರರ ವಕ್ರ ದೃಷ್ಠಿ ಬಿದ್ದಿದೆ. ಈ ದೇಗುವವನ್ನು ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದಾರೆಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ. ಪಾಕಿಸ್ತಾನೀ ಉಗ್ರರು ದೇಗುಲ ಸ್ಫೋಟಿಸುವ ಹುನ್ನಾರ ಮಾಡಿದ್ದಾರೆ. ಭಾರತದ ವಿವಿಧ ಪಾರಂಪರಿಕ ನಿರ್ಮಿತಿಗಳೂ ಸೇರಿದಂತೆ ದೇಗುಲಗಳ ನಾಶಕ್ಕೆ ಹುನ್ನಾರ ನಡೆಸಿದ್ದಾರೆ. ಇದೀಗ ದೇಗುಲಕ್ಕೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅತ್ಯಂತ ಸುಂದರ ಶಿಲ್ಪಕಲಾ ವೈಭವಗಳಿಂದ ಕೂಡಿದ ಬೇಲೂರು ದೇವಸ್ಥಾನ ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
 
beluru chennakeshv temple
ಬೇಲೂರು ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
 
 
ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಇಲ್ಲಿನ ಮುಖ್ಯ ಆಕರ್ಷಣೆ ಸ್ಥಳಗಳಾಗಿವೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ.

LEAVE A REPLY

Please enter your comment!
Please enter your name here