ಬೇಬಿ ಕಾರ್ನ್-ಆಲೂ ಫ್ರೈ

0
395

 
ವಾರ್ತೆ ರೆಸಿಪಿ:
ಚಂದ್ರಲೇಖ ಭಟ್
ಬೇಕಾಗುವ ಸಾಮಗ್ರಿಗಳು:
ಬೇಬಿ ಕಾರ್ನ್ – ೧೦೦ ಗ್ರಾಂ
ಆಲೂ – ೧೦೦ ಗ್ರಾಂ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ೧೧/೨ ಚಮಚ
ವೈಟ್ ಪೆಪ್ಪರ್ ಪೌಡರ್ – ೧ಚಮಚ
ಮೈದಾಹಿಟ್ಟು -೨-೩ ಚಮಚ
ಕಾರ್ನ್ ಫ್ಲೋರ್ -೨ ಚಮಚ
ಹೆಚ್ಚಿದ ಬೆಳ್ಳುಳ್ಳಿ ೧ ಗ್ರಾಂ
ಹೆಚ್ಚಿದ ಶುಂಠಿ ೨೦ಗ್ರಾಂ
ಹೆಚ್ಚಿದ ಈರುಳ್ಳಿ -೧
ಹೆಚ್ಚಿ ಸ್ಪ್ರಿಂಗ್ ಆನಿಯನ್ಸ್ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಸ್ವಲ್ಪ
ಆಲೀವ್ ಆಯಿಲ್ – ಸ್ವಲ್ಪ
ಹಸಿ ಮೆಣಸಿನಕಾಯಿ -ಬೇಕಿದ್ದರೆ ಮಾತ್ರ
 
ಮಾಡುವ ವಿಧಾನ:
ಬೇಬಿ ಕಾರ್ನ್ ಹಾಗೂ ಆಲೂವನ್ನು ಉದ್ದುದ್ದ ಕತ್ತರಿಸಿಕೊಳ್ಳಿ. ಸ್ವಲ್ಪ ಉಪ್ಪು, ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಸ್ವಲ್ಪ ವೈಟ್ ಪೆಪ್ಪರ್, ಸ್ವಲ್ಪ ನೀರು ಸೇರಿಸಿ ಕಲಸಿಕೊಳ್ಳಿ. ಬಳಿಕ ಬಾಣೆಲೆಯಲ್ಲಿ ಆಲಿವ್ ಆಯಿಲ್ ಕಾಯಿಸಿ, ಕಲೆಸಿದ ಬೇಬಿ ಕಾರ್ನ್ ಹಾಗೂ ಆಲೂ ಫೈ ಮಾಡಿ ಎತ್ತಿಟ್ಟುಕೊಳ್ಳಿ.
 
ಈಗ ಹೆಚ್ಚಿದ ಈರುಳ್ಳಿಯನ್ನು ಸ್ವಲ್ಪ ಎಣ್ಣೆ ಕಾಯಿಸಿ ಬಾಣೆಲೆಗೆ ಹಾಕಿ. ಈರುಳ್ಳಿ ಸ್ವಲ್ಪ ಫ್ರೈ ಆದ ಬಳಿಕ ಅದಕ್ಕೆ ಸ್ವಲ್ಪ ಪೆಪ್ಪರ್, ಹೆಚ್ಚಿಟ್ಟ ಬೆಳ್ಳುಳ್ಳಿ, ಶುಂಠಿ, ಹೆಚ್ಚಿದ ಸ್ಪ್ರಿಂಗ್ ಆನಿಯನ್ಸ್ ಹಾಕಿ. ಅದಕ್ಕೆ ೧/೨ ಚಮಚ ನೀರು ಸೇರಿಸಿ ಕೈಯಾಡಿಸಿ. ಈಗ ಅದಕ್ಕೆ ಫ್ರೈ ಮಾಡಿಟ್ಟುಕೊಂಡ ಬೇಬಿ ಕಾರ್ನ್ ಮತ್ತು ಆಲೂ ಸೇರಿಸಿ.
 
ಈಗ ರುಚಿಕರವಾದ ಬೇಬಿ ಕಾರ್ನ್ ಆಲೂ ಫ್ರೈ ಸವಿಯಲು ಸಿದ್ಧ

LEAVE A REPLY

Please enter your comment!
Please enter your name here