ಬೇಟಿ ಬಚಾವೋ -ಬೇಟಿ ಪಡಾವೋ ಘೋಷ ವಾಖ್ಯ ನನ್ನದು: ಚೇತನಾ

0
319

 
ವರದಿ: ಲೇಖಾ
ಕೇಂದ್ರ ಎನ್ ಡಿ ಎ ಸರ್ಕಾರದ ಮಹತ್ವದ ಯೋಜನೆಯಾದ ’ಬೇಟಿ ಬಚಾವೋ -ಬೇಟಿ ಪಡಾವೋ’ ಎಂಬ ಘೊಷ ವಾಕ್ಯ ನನ್ನದು. ಅದನ್ನು ಕೇಂದ್ರ ಸರ್ಕಾರ ಕದ್ದಿದೆ ಎಂದು ಮಹಿಳಾ ಪೊಲೀಸ್ ಠಾಣಾಧಿಕಾರಿ ಆರೋಪಿಸಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
 
 
 
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಎನ್ ಡಿ ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ಸಂದರ್ಭದಲ್ಲಿಬಾಲಕಿಯರ ರಕ್ಷಣೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಬೇಟಿ ಬಚಾವೋ -ಬೇಟಿ ಪಡಾವೋ’ ಎಂಬ ಪರಿಕಲ್ಪನೆಯಡಿಯಲ್ಲಿ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯ ಮೂಲ ಘೊಷವಾಕ್ಯ ನನ್ನ ಪರಿಕಲ್ಪನೆಯದ್ದು ಎಂದು ಉದಯಪುರದ ಪೊಲೀಸ್ ಠಾಣಾಧಿಕಾರಿ ಚೇತನಾ ಭಾಟಿ ಅವರ ವಾದ.
 
 
 
ರಾಜಾಸ್ಥಾನದ ಉಯದಪುರದ ಚೇತನಾ, ಪೊಲೀಸ್ ಇಲಾಖೆಗೆ ಸೇರುವ ಮೊದಲು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರಂತೆ. 1999ರಲ್ಲೇ ಬರೆದ ಕವಿತೆಯೊಂದರಲ್ಲಿ ಈ ಸಾಲುಗಳನ್ನು ಮೂಡಿಸಿದ್ದೆ. 2005ರಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲೂ ಈ ಕವಿತೆಯನ್ನು ವಾಚಿಸಿದ್ದೆ. ಪ್ರಧಾನಿ ಮೋದಿ ಅವರು ಇದನ್ನು ರಾಷ್ಟ್ರೀಯ ಆಂದೋಲನಕ್ಕೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
 
 
 
ಭಾರತದ ಆಯ್ದ ರಾಜ್ಯಗಳ 100ಕ್ಕೂ ಹೆಚ್ಚು ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನನ್ನ ಘೊಷವಾಕ್ಯ ಮೊಳಗುತ್ತಿದೆ. ನನ್ನ ರಚನೆಯನ್ನು ಅನುಮತಿ ಇಲ್ಲದೆ ಬಳಸಿದ್ದರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪ್ರಧಾನಿ ಕಚೇರಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಚೇತನಾ ಭಾಟಿ ತಿಳಿಸಿದ್ದಾರೆ.
 
 
 
ಪ್ರಧಾನಿ ಮೋದಿ ಇದನ್ನು ರಾಷ್ಟ್ರೀಯ ಯೋಜನೆಗೆ ಬಳಸಿದ್ದರ ಬಗ್ಗೆ ನನ್ನ ಆಕ್ಷೇಪ ಇಲ್ಲ, ಆದರೆ ಇದು ನನ್ನ ರಚನೆ ಎಂಬುದು ಅಧಿಕೃತವಾಗಿ ಎಲ್ಲರಿಗೂ ತಿಳಿಯಬೇಕು ಎಂಬುದಷ್ಟೇ ನನ್ನ ಆಗ್ರಹ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here