ಬೆಳ್ಳಿ ಸಿನಿಮಾದಲ್ಲಿ…

0
588

 
ಬೆಂಗಳೂರು ಸಿನಿ ಪ್ರತಿನಿಧಿ ವರದಿ
ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ ಬೆಳ್ಳಿಸಿನಿಮಾ ಬೆಳ್ಳಿಮಾತು ಕಾರ್ಯಕ್ರಮದಲ್ಲಿ ಏಪ್ರಿಲ್ 2 ರ ಶನಿವಾರ ಸಂಜೆ 4-00 ಗಂಟೆಗೆ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬೆಳ್ಳಿ ಸಿನಿಮಾ “ಕ್ರಾಂತಿವೀರ ಸಂಗೊಳ್ಳಿರಾಯಣ್ಣ” ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಹೆಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ.
 
 
ಅಂದು “ಕ್ರಾಂತಿವೀರ ಸಂಗೊಳ್ಳಿರಾಯಣ್ಣ” ಚಲನಚಿತ್ರ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕ ನಾಗಣ್ಣ ಅವರ ಬೆಳ್ಳಿಮಾತು – ಸಂವಾದ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶ್ರೀ ಹೆಚ್.ಡಿ. ಗಂಗರಾಜು ಹಾಗೂ ಚಲನ ಚಿತ್ರರಂಗದ ಹಿರಿಯ ಕಲಾವಿದ ರಮೇಶ್ ಭಟ್ ಅವರು ಪಾಲ್ಗೊಳ್ಳುವರು. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಹಿಸುವರು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here