ಬೆಳ್ಳಿ ಸಿನಿಮಾದಲ್ಲಿ “ಅಲೆಮಾರಿ ಆತ್ಮಕಥೆ"

0
328

 
ಬೆಂಗಳೂರು ಸಿನಿ ಪ್ರತಿನಿಧಿ ವರದಿ
ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ ಬೆಳ್ಳಿಸಿನಿಮಾ ಬೆಳ್ಳಿಮಾತು ಕಾರ್ಯಕ್ರಮದಲ್ಲಿ ಮೇ 7 ರ ಶನಿವಾರ ಸಂಜೆ 4-00 ಗಂಟೆಗೆ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬೆಳ್ಳಿ ಸಿನಿಮಾ ” ಅಲೆಮಾರಿ ಆತ್ಮಕಥೆ ” ಚಲನಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಹೆಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ.
 
 
 
ಅಂದು ” ಅಲೆಮಾರಿ ಆತ್ಮಕಥೆ ” ಚಲನಚಿತ್ರ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕ ಅಮರದೇವ ಅವರ ಬೆಳ್ಳಿಮಾತು – ಸಂವಾದ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಕನ್ನಡ ಚಲನಚಿತ್ರರಂಗದ ಖ್ಯಾತ ತಾರೆಯರಾದ ಉಪೇಂದ್ರ, ಪ್ರಿಯಾಂಕ ಉಪೇಂದ್ರ ಹಾಗೂ ಕುಮಾರ ಗೋವಿಂದ ಮತ್ತು ಚಲನಚಿತ್ರ ನಿರ್ಮಾಪಕ ಜಿ. ಕೃಷ್ಣಮೂರ್ತಿ ಅವರು ಪಾಲ್ಗೊಳ್ಳುವರು. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಹಿಸುವರು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here