ಬೆಳ್ತಂಗಡಿಯಲ್ಲಿ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟ

0
540

 
ಸುನೀಲ್ ಬೇಕಲ್
ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ಡಿಸೆಂಬರ್ 24 ರಿಂದ 28ರ ವರೆಗೆ ರೋಟೋ ಲಾಯರ್ಸ್ ಕಪ್ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟವನ್ನು ಬೆಳ್ತಂಗಡಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
 
 
ಪಂದ್ಯಾಟದ ಮಾಹಿತಿ ಪತ್ರವನ್ನು ಸೋಮವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
 
 
ಚೆಸ್ ನ ಫಿಡೆ ನಿಯಮಾವಳಿಯಂತೆ ಪಂದ್ಯಾಟ ನಡೆಯಲಿದ್ದು ಡಿ. 24ರಿಂದ 27ರ ವರೆಗೆ ಪ್ರತಿದಿನ ಎರಡು ಸುತ್ತಿನ ಪಂದ್ಯಾಟ ಹಾಗೂ ಡಿ. 28 ರಂದು ಒಂಬತ್ತನೆ ಸುತ್ತಿನ ಪಂದ್ಯಾಟ ನಡೆಯಲಿದೆ.
 
 
ವಿಜೇತರಿಗೆ ಒಟ್ಟು ನಾಲ್ಕು ಲಕ್ಷ ರೂ. ಮೊತ್ತದ ನಗದು ಬಹುಮಾನ ನೀಡಲಾಗುವುದು.
ಪ್ರಥಮ ಬಹುಮಾನ: ಒಂದು ಲಕ್ಷ ರೂ., ದ್ವಿತೀಯ ಬಹುಮಾನ: ರೂ. 55,000/-, ತೃತೀಯ ಬಹುಮಾನ: ರೂ. 40,000/-, ಚತುರ್ಥ ಬಹುಮಾನ: ರೂ. 25,000/-, ಐದನೆ ಬಹುಮಾನ ರೂ. 15 ಸಾವಿರ, ಆರನೇ ಬಹುಮಾ: ರೂ. 11,000/-, ಏಳನೇ ಬಹುಮಾನ: ರೂ 10,000/-, ಎಂಟನೇ ಬಹುಮಾನ: ರೂ. 9,000/-, ಒಂಬತ್ತನೇ ಬಹುಮಾನ: ರೂ. 8,000/-, ಹತ್ತನೇ ಬಹುಮಾನ: ರೂ. 7,000/-, 11 ರಿಂದ 15ರ ವರೆಗೆ ತಲಾ ರೂ. 4,500/-.
ಪ್ರವೇಶ ಪತ್ರ: ಡಿ.ಡಿ. ಮೂಲಕ ನಿಗದಿತ ಶುಲ್ಕದೊಂದಿಗೆ ಸ್ಪರ್ಧಾಳುಗಳು ಪ್ರವೇಶಪತ್ರವನ್ನು ಈ ವಿಳಾಸಕ್ಕೆ ಕಳುಹಿಸಿ ಕೊಡಲು ಕೋರಲಾಗಿದೆ. ಯನ್. ರತ್ನವರ್ಮ ಬುಣ್ಣು, ವಕೀಲರು, ಬೆಳ್ತಂಗಡಿ – 574 214.

LEAVE A REPLY

Please enter your comment!
Please enter your name here