ಬೆಲ್ಲದ ಕೊಬ್ಬರಿ ಬರ್ಫಿ

0
208

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು :
ಕೊಬ್ಬರಿ ತುರಿ 1 ಕಪ್‌, ಖೋವಾ 1 ಕಪ್, ಹಾಲು 1 ಕಪ್, ಬೆಲ್ಲ ಒಂದು ಕಪ್, ಏಲಕ್ಕಿಪುಡಿ ಸ್ವಲ್ಪ, ತುಪ್ಪ ಐದು ಚಮಚ, ಗೋಡಂಬಿ 5-6
 
 
ತಯಾರಿಸುವ ವಿಧಾನ :
ದಪ್ಪತಳದ ಪ್ಯಾನ್‌ ಒಲೆಯ ಮೇಲಿರಿಸಿ ಎರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದು ಕರಗಿದ ತಕ್ಷಣ ಕೊಬ್ಬರಿ ಹಾಕಿ ಸುಮಾರು ಎರಡು ನಿಮಿಷಗಳ ಕಾಲ ಹುರಿಯಿರಿ. ಇನ್ನೊಂದು ಪಾತ್ರೆಯಲ್ಲಿ ಖೋವಾ ಮತ್ತು ಬೆಲ್ಲ ಸೇರಿಸಿ ಮಿಶ್ರಣ ಮಾಡಿ. ಬಳಿಕ ಇದನ್ನು ಹುರಿದ ಕೊಬ್ಬರಿ ತುರಿಗೆ ಹಾಕಿ. ಈಗ ಇದಕ್ಕೆ ಹಾಲನ್ನು ಹಾಕಿ ಕಲಕುತ್ತಿರಿ. ನಂತರ ಏಲಕ್ಕಿ ಪುಡಿ ಹಾಕಿ ನಿಧಾನಕ್ಕೆ ತಿರುಗಿಸಿ.ಈಗ ಉಳಿದ ಎರಡು ಚಮಚ ತುಪ್ಪವನ್ನು ಒಂದು ತಟ್ಟೆಯ ಮೇಲೆ ಹರಡಿ. ಈ ತಟ್ಟೆಯ ಮೇಲೆ ಮೇಲಿನ ಮಿಶ್ರಣವನ್ನು ತಟ್ಟೆಯ ಮೇಲೆ ಹಾಕಿ. ಇದು ಸ್ವಲ್ಪ ಗಟ್ಟಿಯಾದ ಮೇಲೆ ಚಾಕುವಿನಿಂದ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಅದರ ಮಧ್ಯೆ ಗೋಡಂಬಿ ಇಟ್ಟು ಅಲಂಕರಿಸಿ.ಈಗ ಟೇಸ್ಟಿಯಾದ ಕೊಬ್ಬರಿ -ಬೆಲ್ಲದ ಬರ್ಫಿ ಸವಿಯಲು ರೆಡಿ.

LEAVE A REPLY

Please enter your comment!
Please enter your name here