ಬೆಲ್ಜಿಯಂ ತಲುಪಿದ ಪ್ರಧಾನಿ…

0
433

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಮೂರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ತಲುಪಿದ್ದಾರೆ. ಇಂದು ಬೆಲ್ಜಿಯಂ ನಡೆಯಲಿರುವ 13ನೇ ಭಾರತ-ಯೂರೋಪಿಯನ್ ಒಕ್ಕೂಟಗಳ ನಡುವೆ ನಡೆಯುವ ಶೃಂಗಸಭೆಯಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.
 
ಈ ಭೇಟಿಯಲ್ಲಿ ಪ್ರಧಾನಿ ಬ್ರಸೆಲ್ಸ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ನಂತರ ಅನಿವಾಸಿ ಭಾರತೀಯರನ್ನು ಭೇಟಿಯಾಗಿ, ಭಾರತೀಯ ಸಮುದಾಯವನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಕಳೆದ ವಾರವಷ್ಟೇ ಬ್ರಸೆಲ್‍ನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು.
ಬೆಲ್ಜಿಯಂ ದ್ವಿಪಕ್ಷೀಯ ಮಾತುಕತೆ
ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೆಲ್ಜಿಯಂ ಮತ್ತು ಭಾರತದ ನಡುವೆ ರಕ್ಷಣಾ ಪಾಲುದಾರಿಕೆ ಮತ್ತು ಉಭಯ ದೇಶಗಳ ಮುಕ್ತ ವ್ಯಾಪಾರ ವ್ಯವಹಾರಗಳ ಮಹತ್ವದ ಮಾತುಕತೆ ನಡೆಯಲಿದೆ. ಅಲ್ಲದೆ ಬ್ರಸೆಲ್ಸ್ ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಉದ್ಯಮಿಗಳ ಜತೆ ಸಭೆ
ಭಾರತದಲ್ಲಿ ‘ಮೇಕ್ ಇನ್ ಇಂಡಿಯಾ’, ‘ ಡಿಜಿಟಲ್ ಇಂಡಿಯಾ’ ಯೋಜನೆಗಳ ಮೂಲಕ ಹೂಡಿಕೆ ಮಾಡುವಂತೆ ಆಕರ್ಷಿಸಲು ಪ್ರಧಾನಿ ಬ್ರಸೆಲ್ಸ್ ಉದ್ಯಮಿಗಳು ಮತ್ತು ವಜ್ರವ್ಯಾಪಾರಿಗಳ ನಿಯೋಗದೊಂದಿಗೆ ಮಾತುಕತೆ ನಡೆಸಲಿದ್ದಾರೆ.
 
ವಾಷಿಂಗ್ಟನ್ ಭೇಟಿ
ಮೋದಿ ಅವರು ಬೆಲ್ಜಿಯಂ ನಿಂದ ವಾಷಿಂಗ್ಟನ್ ಗೆ ತೆರಳಲಿದ್ದಾರೆ. ಮಾರ್ಚ್ 31ರಿಂದ ಏ.1ರಂದು ವಾಷಿಂಗ್ಟನ್ ನಲ್ಲಿ ನಡೆಯುವ 4ನೇ ಪರಮಾಣು ಭದ್ರತಾ ಶೃಂಗಸಭೆ(ಎನ್ ಎಸ್ ಎಸ್) ಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಪರಮಾಣು ಭದ್ರತೆಗೆ ಸಂಬಂಧಿಸಿದ ರಾಷ್ಟ್ರೀಯ ಪ್ರಗತಿ ವರಯನ್ನು ಮಂಡಿಸಲಿದ್ದು, ಕೆಲವು ನಿರ್ದಿಷ್ಟ ಘೋಷಣೆಗಳನ್ನು ಮಾಡರುವ ಸಾಧ್ಯತೆಯಿದೆ.
ಸೌದಿಗೆ ಪಯಾಣ
ಮೋದಿಯವರು ವಾಷಿಂಗ್ಟನ್ ನಿಂದ ನೇರವಾಗಿ ಸೌದಿ ಅರೇಬಿಯಾ ರಾಜಧಾನಿ ರಿಯಾದ್ ಗೆ ಏ.2ರಂದು ಎರಡು ದಿನಗಳ ಭೇಟಿಗಾಘಿ ತೆರಳಲಿದ್ದಾರೆ. ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಮೋದಿ ಸೌದಿಗೆ ತೆರಳಲಿದ್ದಾರೆ. ಇಲ್ಲಿ ಎರಡು ರಾಷ್ಟ್ರಗಳ ನಡುವಿನ ಭದ್ರತೆ ಮತ್ತು ಇಂಧನ ಕ್ಷೇತ್ರದಲ್ಲಿ ಮೂಲಸೌಕರ್ಯ ಹೂಡಿಕೆ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಮಾತುಕತೆ ನಡೆಸಲಿದೆ. ನಂತರ ಮೋದಿ ರಿಯಾದ್ ನಲ್ಲಿರುವ ಎಲ್ ಆ್ಯಂಡ್ ಟಿ ಘಟಕ, ಟಿಸಿಎಸ್ ಕಂಪನಿ ಕಚೇರಿ, ಖ್ಯಾತ ಮಾಸ್ ಮ್ಯಾಕ್ ಕೋಟೆ, ಟಾಟಾ ಕನ್ಸಲ್ಟೆನ್ಸಿ ಸೆಂಟರ್ ಗೂ ಭೇಟಿ ನೀಡಲಿದ್ದಾರೆ. ನಂತರ ಭಾರತ ಮೂಲದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here